Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಈ ಕ್ಷೇತ್ರ ಈ ಮೊದಲು ಅವಿಭಿಜಿತ ಬೆಂಗಳೂರು ಗ್ರಾಮಾಂತರದ 8 ತಾಲೂಕು ಗಳಲ್ಲಿ ಒಂದಾಗಿತ್ತು. ನಂತರ 2007ರಲ್ಲಿ 4 ತಾಲೂಕುಗಳ ಬೆಂಗಳೂರು ಗ್ರಾಮಾಂತರ ಜಿಲ್ಲೆ ಯಾದರೂ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರಗಳ ನಡುವೆ ಜಿಲ್ಲಾ ಕೇಂದ್ರದ ವಿವಾದ ಇನ್ನೂ ಜೀವಂತ ವಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 5 ಹೋಬಳಿ ಗಳಿದ್ದು, ತೂಬಗೆರೆ ಹೋಬಳಿ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದೆ.
Related Articles
Advertisement
ಕ್ಷೇತ್ರದಲ್ಲಿ ಆರಂಭದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದರೂ ನಂತರ ಜನತಾ ಪರಿವಾರದಿಂದ ಆರ್.ಎಲ್. ಜಾಲಪ್ಪ ವಿಜೇತರಾಗಿ ನಂತರ ಕಾಂಗ್ರೆಸ್ ಸೇರಿದರು. ವಿ.ಕೃಷ್ಣಪ್ಪ ಜೆ.ನರಸಿಂಹಸ್ವಾಮಿ ಬಿಜೆಪಿ ಪಕ್ಷದಿಂದ ಶಾಸಕರಾಗಿದ್ದರು. ಪ್ರಸ್ತುತ ಎರಡು ಬಾರಿ ಶಾಸಕರಾಗಿರುವ ಟಿ.ವೆಂಕಟರಮಣಯ್ಯ ಕಾಂಗ್ರೆಸ್ ಭದ್ರಕೋಟೆಯ ಬುನಾದಿ ಮೇಲೆ ಹ್ಯಾಟ್ರಿಕ್ ಜಯ ಸಾಧಿಸುವ ಹಂಬಲದಲ್ಲಿದ್ದರೆ. ಬಿಜೆಪಿಯ ಧೀರಜ್ ಮುನಿರಾಜು ಹಾಗೂ ಜೆಡಿಎಸ್‌ನ ಬಿ.ಮುನೇಗೌಡ ಪಕ್ಷಗಳ ಪ್ರಾಬಲ್ಯ ಹಾಗೂ ತಮ್ಮ ವರ್ಚಸ್ಸನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಇಬ್ಬರು ಅಭ್ಯರ್ಥಿಗಳು ಒಕ್ಕಲಿಗ ಸಮುದಾಯ ದವರಾಗಿದ್ದು, ಈ ಸಮುದಾಯದ ಮತಗಳು ಯಾರ ಪಾಲಾಗಲಿವೆ ಎನ್ನುವ ಕುತೂಹಲವಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಪಕ್ಷಗಳ ನಡುವೆ ಸದ್ಯಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇದರೊಂದಿಗೆ ಎಎಪಿ ಪಕ್ಷವೂ ಸಹ ಪ್ರಚಾರದಲ್ಲಿ ಮುಂದಿದೆ.
ಕಾಂಗ್ರೆಸ್ ರಾಜ್ಯ, ಕೇಂದ್ರ ಸರ್ಕಾರಗಳ ಜನ ವಿರೋಧಿ ನೀತಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿ ಯಲ್ಲಿ ತಾಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಕಾಂಗ್ರೆಸ್ ನೀಡಿರುವ ಚುನಾ ವಣಾ ಭರವಸೆಗಳು ಜನರ ಮನಸ್ಸನ್ನು ಮುಟ್ಟಿವೆ. ತಾಲೂಕಿನಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಜನತೆ ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ. – ಟಿ.ವೆಂಕಟರಮಣಯ್ಯ,ಕಾಂಗ್ರೆಸ್ ಅಭ್ಯರ್ಥಿ
ಹಲವಾರು ಸಾಮಾಜಿಕ ಸೇವೆಗಳ ಮೂಲಕ ಜನಮನದಲ್ಲಿ ಗುರುತಿಸಿ ಕೊಂಡಿದ್ದೇನೆ. ಕ್ಷೇತ್ರದ ಗ್ರಾಮ, ನಗ ರದ ಮೂಲ ಸೌಕರ್ಯಗಳು ಹಾಗೂ ವಿವಿಧ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕೇಂದ್ರ, ರಾಜ್ಯ ಸರ್ಕಾರಗಳಿಂದ ಅಭಿವೃದ್ಧಿ, ನನ್ನ ಸೇವಾ ಕಾರ್ಯಗಳು ಹಾಗೂ ಆಶಯಗಳಿಗೆ ಮತ ದಾರರು ಸ್ಪಂಧಿಸಿ ಗೆಲ್ಲಿಸುವ ವಿಶ್ವಾಸವಿದೆ. – ಧೀರಜ್ ಮುನಿರಾಜು,ಬಿಜೆಪಿ ಅಭ್ಯರ್ಥಿ
14 ವರ್ಷಗಳಿಂದ ಕ್ಷೇತ್ರದ ಒಡನಾಟದಲ್ಲಿದ್ದೇನೆ. ಮೂರು ಬಾರಿ ಸೋಲು ಕಂಡಿದ್ದರು ಸಹ ಕ್ಷೇತ್ರದಲ್ಲಿ ಹಲವಾರು ಸಾಮಾಜಿಕ ಸೇವೆ ಮಾಡಿದ್ದೇನೆ. ಕುಮಾರ ಸ್ವಾಮಿ ಪಂಚರತ್ನ ಯೋಜನೆಗಳು ಜನರ ಅಭಿವೃದ್ಧಿಗೆ ಪೂರಕವಾಗಿವೆ. ಈ ಬಾರಿ ಕ್ಷೇತ್ರದಲ್ಲಿ ಮತದಾರರ ಒಲವು ಜೆಡಿಎಸ್ ಪರವಾಗಿದ್ದು, ಗೆಲ್ಲುವ ವಿಶ್ವಾಸವಿದೆ. -ಬಿ.ಮುನೇಗೌಡ, ಜೆಡಿಎಸ್ ಅಭ್ಯರ್ಥಿ
– ಶ್ರೀಕಾಂತ್