Advertisement

ಬಾದಾಮಿ ಕುರಿತ ಸಾಕ್ಷ್ಯಚಿತ್ರ

06:00 AM Oct 08, 2018 | |

ನವದೆಹಲಿ: ಕರ್ನಾಟಕದ ಬಾದಾಮಿ ಸೇರಿದಂತೆ ದೇಶದ 12 ಪಾರಂಪರಿಕ ನಗರಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರ ನಡೆಸಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

2015ರ ಜನವರಿಯಲ್ಲಿ ರಾಷ್ಟ್ರೀಯ ಪಾರಂಪರಿಕ ನಗರ ಅಭಿವೃದ್ಧಿ ಯೋಜನೆ (ಹೃದಯ್‌) ಅಡಿಯಲ್ಲಿ ಕರ್ನಾಟಕದ ಬಾದಾಮಿ, ರಾಜಸ್ಥಾನದ ಅಜ್ಮಿರ್‌, ಅಮರಾವತಿ, ಅಮೃತಸರ, ದ್ವಾರಕಾ, ಗಯಾ, ಕಂಚೀಪುರಂ, ಮಥುರಾ, ಪುರಿ, ವಾರಾಣಸಿ, ವೆಲಂಕಣಿ ಮತ್ತು ವಾರಂಗಲ್‌ ಅನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ನಗರಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅದು ಪೂರ್ಣಗೊಂಡ ಕೂಡಲೇ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ(ಎನ್‌ಎಫ್ಡಿಸಿ)ದ ಸಹಯೋಗದಲ್ಲಿ ಸಾಕ್ಷ್ಯಚಿತ್ರ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಗೃಹ ಮತ್ತು ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

500 ಕೋಟಿ ರೂ. ವೆಚ್ಚದ ಹೃದಯ್‌ ಯೋಜನೆಯಡಿ  ಒಟ್ಟು 63 ಪ್ರಾಜೆಕ್ಟ್ಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಆ ಪೈಕಿ 20 ಅನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. 10 ರಿಂದ 15 ಯೋಜನೆಗಳು ಪ್ರಸಕ್ತ ತಿಂಗಳು ಪೂರ್ಣಗೊಳ್ಳಲಿದೆ. ಸಾಕ್ಷ್ಯಚಿತ್ರಗಳನ್ನು ನಿರ್ಮಿಸುವ ಮೂಲಕ ನಗರಗಳಲ್ಲಿ ಹೇಗೆ ಬದಲಾವಣೆಗಳಾದವು ಎಂಬುದನ್ನು ಬಿಂಬಿಸ ಲಿದ್ದೇವೆ. ರಸ್ತೆ, ಕುಡಿಯುವ ನೀರಿನ ಸೌಲಭ್ಯ, ಬೀದಿ ಬದಿ ಕುಳಿತುಕೊಳ್ಳಲು ಬೆಂಚುಗಳ ನಿರ್ಮಾಣ, ಬೀದಿ ದೀಪ, ನೈರ್ಮಲ್ಯ, ಚರಂಡಿ, ಮಾಹಿತಿ ಕಿಯೋಸ್ಕ್ ಇತ್ಯಾದಿ ಸೌಲಭ್ಯಗಳನ್ನೂ ಪಾರಂಪರಿಕ ನಗರಗಳಲ್ಲಿ ಕಲ್ಪಿಸಲಾಗಿದೆ ಎಂದಿದ್ದಾರೆ ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next