Advertisement

ಆಯುಷ್ಮಾನ್‌ ಭಾರತ ಯೋಜನೆಗೆ ವೈದ್ಯರ ಬೆಂಬಲ

06:00 AM Jun 24, 2018 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್‌ ಭಾರತವನ್ನು ವಿರೋಧಿಸಿದ್ದ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಇದೀಗ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ಐಎಂಎ ಪ್ರತಿನಿಧಿಗಳು ಆಯುಷ್ಮಾನ್‌ ಭಾರತ್‌ ಸಿಇಒ ಇಂದು ಭೂಷನ್‌ ಹಾಗೂ ಡೆಪ್ಯುಟಿ ಸಿಇಒ ದಿನೇಶ್‌ ಅರೋರಾ ಹಾಗೂ ಇತರ ಅಧಿಕಾರಿಗಳನ್ನು ಶುಕ್ರವಾರ ಭೇಟಿ ಮಾಡಿದ್ದರು. ಈ ವೇಳೆ ಇದನ್ನು ಉತ್ತಮವಾಗಿ ಅನುಷ್ಠಾನಗೊಳಿಸಲು ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಈ ಹಿಂದೆ ಯೋಜನೆಯ ಕಲ್ಪನೆಯಲ್ಲೇ ದೋಷವಿದೆ ಎಂದು ವೈದ್ಯರ ಸಂಘ ಆರೋಪಿಸಿತ್ತು.

Advertisement

ದೂರು ಪರಿಹಾರ ವಿಭಾಗವನ್ನು ನಿರ್ವಹಿಸುವಂತೆ ವೈದ್ಯರ ಸಂಘಟನೆಯನ್ನು ಕೇಳಿಕೊಳ್ಳಲಾಗಿದೆ. ಬಹುತೇಕ ಪ್ರದೇಶದಲ್ಲಿ ಐಎಂಎ ತನ್ನ ಶಾಖೆಗಳನ್ನು ಹೊಂದಿದೆ. ಐಎಂಎ ಪಾತ್ರ ಈ ಯೋಜನೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಯಾಕೆಂದರೆ ಯೋಜನೆಯ ಯಶಸ್ಸಿಗೆ ಖಾಸಗಿ ವಲಯವೇ ಪ್ರಮುಖವಾಗಿದೆ ಎಂದು ಇಂದು ಭೂಷಣ್‌ ಹೇಳಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next