Advertisement
ವೈದ್ಯರ ಮುಷ್ಕರಕ್ಕೆ ಕಾರಣವಾದ ಪ್ರಮುಖ ಬೇಡಿಕೆಗಳಿಗೆ ಸರಕಾರ ಮಣಿದಿದೆ. ಜತೆಗೆ 2007ರ ಮೂಲ ಕಾಯ್ದೆಯಲ್ಲೇ ಇದ್ದ ಜೈಲು ಶಿಕ್ಷೆ ರದ್ದುಗೊಳಿಸಿ ಕೇವಲ ದಂಡ ಮಾತ್ರ ಉಳಿಸಿಕೊಳ್ಳಲಾಗಿದೆ. ಅದೇ ರೀತಿ ಕೆಪಿಎಂಇ ಮಸೂದೆಯಲ್ಲಿದ್ದ ಸಿಇಒ ಅಧ್ಯಕ್ಷತೆಯ ದೂರು ನಿವಾರಣೆ ಸಮಿತಿ ಜವಾಬ್ದಾರಿಯನ್ನು ನೋಂದಣಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಸಾಮೂಹಿಕ ದರ ನಿಗದಿ ಕೈಬಿಟ್ಟು ಸರಕಾರಿ ಯೋಜನೆಗಳಿಗೆ ಮಾತ್ರ ತಾನು ದರ ನಿಗದಿ ಮಾಡಲು ಸರಕಾರ ಒಪ್ಪಿದೆ. ಇನ್ನು ವೈದ್ಯರ ವಿರುದ್ಧ ನಿರ್ಲಕ್ಷ್ಯದ ದೂರು ಬಂದರೆ ವಕೀಲರಿಲ್ಲದೆ ವೈದ್ಯರೇ ಖುದ್ದಾಗಿ ಹಾಜರಾಗಬೇಕು ಎಂಬ ಅಂಶವನ್ನು ಸಡಿಲಿಸಿ ವಕೀಲರ ಮೂಲಕ ವಾದ ಮಾಡಲು ಅವಕಾಶ ಕಲ್ಪಿಸುವುದಾಗಿ ಸರಕಾರ ಹೇಳಿದೆ. ಇದಕ್ಕೆ ವೈದ್ಯ ಸಂಘಟನೆಗಳ ಪ್ರಮುಖರು ಒಪ್ಪಿಕೊಂಡಿದ್ದಾರೆ.
Related Articles
Advertisement
ಆದರೆ, ನೋಂದಣಿ ಇಲ್ಲದೆ ಕ್ಲಿನಿಕ್ ಅಥವಾ ಆಸ್ಪತ್ರೆಗಳನ್ನು ಆರಂಭಿಸುವವರು, ನಕಲಿ ವೈದ್ಯರಿಗೆ ಜೈಲು ಶಿಕ್ಷೆಯಿಂದ ವಿನಾಯಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅದೇ ರೀತಿ ದರ ಪಟ್ಟಿ ವಿಚಾರದಲ್ಲಿ ಸರಕಾರಿ ಯೋಜನೆಗಳಿಗೆ ಮಾತ್ರ (ಯೂನಿವರ್ಸಲ್ ಹೆಲ್ತ್ ಕಾರ್ಡ್ ಯೋಜನೆ) ಸರಕಾರ ದರಪಟ್ಟಿ ವಿಧಿಸುತ್ತದೆ. ಖಾಸಗಿಯಾಗಿ ಯಾರಾದರೂ ಆಸ್ಪತ್ರೆಗೆ ದಾಖಲಾದರೆ ಆಸ್ಪತ್ರೆಗಳೇ ದರ ನಿಗದಿಪಡಿಸಬಹುದು. ಆದರೆ, ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕಿದ್ದು, ಈ ವೆಚ್ಚವನ್ನು ಸರಕಾರ ನಿಗದಿಪಡಿಸಿದ ದರದಂತೆ ಪಾವತಿಸಲಾಗುತ್ತದೆ ಎಂದೂ ಸಿಎಂ ತಿಳಿಸಿದರು.
ವೈದ್ಯರ ಮುಷ್ಕರದಿಂದ ಜನ ಸತ್ತಿದ್ದಕ್ಕೆ ಸಾಕ್ಷಿ ಏನಿದೆ?: ವೈದ್ಯರ ಮುಷ್ಕರದಿಂದಲೇ ಜನ ಸತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಏನಿದೆ? ನೋಟು ಅಮಾನ್ಯ ಸಂದರ್ಭ ನೂರಾರು ಜನ ಸತ್ತರಲ್ಲ, ಅದಕ್ಕೆ ಯಾರು ಜವಾಬ್ದಾರಿ?
ಖಾಸಗಿ ವೈದ್ಯರು ಮುಷ್ಕರ ನಡೆಸಿದ್ದರಿಂದ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗದೆ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಇದಕ್ಕೆ ಯಾರು ಜವಾಬ್ದಾರಿ ಎಂಬ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ. ಯಾರು ಸತ್ತಿ¨ªಾರೆ ಎಂಬುದನ್ನು ಪತ್ರಿಕೆಯಲ್ಲಿ ನೋಡಿದ್ದೇವೆ. ಆದರೆ, ಯಾವುದಕ್ಕೆ ಸತ್ತರು ಎಂಬುದು ಗೊತ್ತಿಲ್ಲ. ವೈದ್ಯರ ಮುಷ್ಕರದಿಂದ ಚಿಕಿತ್ಸೆ ಸಿಗದೇ ಸತ್ತರು ಎಂಬುದಕ್ಕೆ ಸಾಕ್ಷಿ ಏನಿದೆ? ಎಂದು ಮರುಪ್ರಶ್ನೆ ಮಾಡಿದರು. ಈ ಬಗ್ಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ. ದೂರು ಬಂದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ವೈದ್ಯರ ಒತ್ತಡಕ್ಕೆ ಮಣಿದು ಮಸೂದೆಯಲ್ಲಿ ತಿದ್ದುಪಡಿ ಮಾಡಲಾಗುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ಅದನ್ನು ಈಗ ಹೇಳಲು ಸಾಧ್ಯವಿಲ್ಲ. ಮಸೂದೆಯಲ್ಲಿ ಏನಿದೆ ಎಂಬುದು ಸದನದಲ್ಲಿ ಗೊತ್ತಾಗುತ್ತದೆ ಎಂದರು.