Advertisement

ವೈದ್ಯರ ಮುಷ್ಕರ: ದ.ಕ. ಜಿಲ್ಲೆಯಲ್ಲಿ ಮೂವರು ಬಲಿ

07:55 AM Nov 18, 2017 | Harsha Rao |

ಮಂಗಳೂರು: ಕೆಪಿಎಂಇ ಕಾಯ್ದೆ ವಿರೋಧಿಸಿ ಖಾಸಗಿ ವೈದ್ಯರು ನಡೆಸಿದ ಮುಷ್ಕರದ ಪರಿಣಾಮ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಅಸುನೀಗಿದ್ದಾರೆ. ದ.ಕ. ಆರೋಗ್ಯಾಧಿಕಾರಿ ಇದನ್ನು ನಿರಾಕರಿಸಿದ್ದಾರೆ.

Advertisement

ಕಾಲೇಜು ವಿದ್ಯಾರ್ಥಿನಿ ಪೂಜಾ, ಕಕ್ಕಿಂಜೆ ನಿವಾಸಿ ರೇವತಿ ಮತ್ತು ವಿಟ್ಲದ ರಜತ್‌ ಅವರು ಮೃತಪಟ್ಟವರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕಬಕದ ಪೂಜಾ ಅವರಿಗೆ ಶುಕ್ರವಾರ ಬೆಳಗ್ಗೆ ಸಮಸ್ಯೆ ಉಲ್ಬಣಗೊಂಡಿದ್ದರಿಂದ ನಗ ರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯ ಲಾಯಿತು. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಚಿಕಿತ್ಸೆ ಲಭಿಸದೆ ಮೃತ ಪಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಗ್ರಾಮದ ತೋಟತ್ತಾಡಿ ನಿವಾಸಿ ರೇವತಿ ಆ್ಯಸಿಡ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಕಕ್ಕಿಂಜೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ವೈದ್ಯರಿಲ್ಲದ ಕಾರಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಸಾವನ್ನಪ್ಪಿದರು. 

ಪಿತ್ತಕೋಶ ಸಮಸ್ಯೆಯಿಂದ ಬಳಲುತ್ತಿದ್ದ ವಿಟ್ಲ ಕಸಬಾ ಗ್ರಾಮದ ರಾಯರ ಬೆಟ್ಟುವಿನ ರಜತ್‌ ಅವರನ್ನು ವೆನಾÉಕ್‌
ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರೂ ವೈದ್ಯರ ಮುಷ್ಕರದಿಂದಾಗಿ ಚಿಕಿತ್ಸೆ ಲಭಿಸದೇ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next