Advertisement

Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ

08:08 PM Jan 08, 2025 | Team Udayavani |

ಪುತ್ತೂರು: ಒಂಬತ್ತು ವರ್ಷದ ಹಿಂದೆ ಕಡಬ ಠಾಣೆ ವ್ಯಾಪ್ತಿಯ ಮರ್ದಾಳದಲ್ಲಿ ಮಹಿಳೆಯೋರ್ವರ ಮಾನಭಂಗ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಎದುರಿಸುತ್ತಿದ್ದ ಆರೋಪಿಯನ್ನು ಪುತ್ತೂರು ನ್ಯಾಯಾಲಯ ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ.

Advertisement

2015ರ ಡಿಸೆಂಬರ್‌ನಲ್ಲಿ ಮರ್ದಾಳದಲ್ಲಿ ಮಹಿಳೆಯೊರ್ವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಆಕೆಯ ಮಕ್ಕಳ ಸಮ್ಮುಖದಲ್ಲಿ ಆಕೆಯ ಮಾನಭಂಗಕ್ಕೆ ಪ್ರಯತ್ನಿಸಿ ಕೊಲ್ಲುವುದಾಗಿ ಬೆದರಿಸಿದ ಆರೋಪದಲ್ಲಿ ಮೊಹಮ್ಮದ್‌ ಶರೀಫ್‌ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯು ಕೊಣಾಲು ಗ್ರಾಮದ ಕೋಲ್ಪೆಗೆ ತನ್ನನ್ನು ಕರೆಸಿಕೊಂಡು ತನ್ನ ಮೇಲೆ ಹಲ್ಲೆ ನಡೆಸಿ ಅದನ್ನು ಮರೆಮಾಚಲು ಈ ರೀತಿ ಸುಳ್ಳು ದೂರು ನೀಡಿರುವುದಾಗಿ ಆರೋಪಿಸಿ ದೂರುದಾರೆ ಮಹಿಳೆ ಹಾಗೂ ಅವಳ ಸಂಬಂಧಿಕರಾದ ಕೋಲ್ಪೆ ನಿವಾಸಿಗಳ ವಿರುದ್ಧ ಆರೋಪಿಯು ಪ್ರತಿ ದೂರನ್ನು ಕೂಡ ದಾಖಲಿಸಿದ್ದರು.

ಆರೋಪಿಯ ಪರವಾಗಿ ನ್ಯಾಯವಾದಿ ನೂರುದ್ದೀನ್‌ ಸಾಲ್ಮರ, ಹರೀಶ್‌ ಕುಮಾರ್‌ಎಂ ಮತ್ತು ಸಾತ್ವಿಕ್‌ ಆರಿಗ ಬಿ. ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next