Advertisement

Viral News; ನಿದ್ರಿಸುತ್ತಿದ್ದಾಗಲೇ ಯುವಕನ ಲಿಂಗ ಬದಲಿಸಿದ ವೈದ್ಯರು!

01:07 AM Jun 21, 2024 | Team Udayavani |

ಮುಜಫ್ಪರ್‌ನಗರ್‌: ಯುವಕನೊಬ್ಬ ರಾತ್ರಿ ಮಲಗಿ ಬೆಳಗಾಗುವ ಹೊತ್ತಿಗೆ ಹುಡುಗಿಯಾಗಿ ಬದಲಾಗಿದ್ದಾನೆ. ಉತ್ತರ ಪ್ರದೇಶದ ಮುಜಫ್ಪ ರ್‌ನಗರ್‌ನ ಓಂ ಪ್ರಕಾಶ್‌ ಎಂಬಾತನ ಕುತಂತ್ರದಿಂದಾಗಿ ಲಿಂಗ ಬದಲಿಸಲಾಗಿದೆ.

Advertisement

ಇದಕ್ಕೆ ಸ್ಥಳೀಯ ಮೆಡಿಕಲ್‌ ಕಾಲೇಜ್‌ ವೈದ್ಯರು ಸಾಥ್‌ ನೀಡಿದ್ದಾರೆಂದು ಆರೋಪಿಸಲಾಗಿದೆ. ಸಂತ್ರಸ್ತನ ಹೆಸರು ಮುಜಾಹಿದ್‌. ನನ್ನ ಒಪ್ಪಿಗೆ ಇಲ್ಲದೇ ಓಂಪ್ರಕಾಶ್‌ ಲಿಂಗ ಬದಲಿಸಿದ್ದಾರೆ ಎಂದು ಮುಜಾಹಿದ್‌ ಆರೋಪಿಸಿದ್ದಾನೆ.

ಕಳೆದ ಎರಡು ವರ್ಷಗಳಿಂದ ಓಂಪ್ರಕಾಶ್ ತನಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಮುಜಾಹಿದ್ ಹೇಳಿಕೊಂಡಿದ್ದು, ಆಸ್ಪತ್ರೆ ತಪಾಸಣೆಯ ಅಗತ್ಯವಿರುವ ವೈದ್ಯಕೀಯ ಸಮಸ್ಯೆ ಇದೆ ಎಂದು ಸುಳ್ಳು ಹೇಳಿ ನಂಬಿಸಿ  ಆಸ್ಪತ್ರೆಗೆ ಕರೆದೊಯ್ದು ಅರಿವಳಿಕೆ ನೀಡಿ ಲಿಂಗ ಬದಲಾವಣೆಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

‘ಪುರುಷನಾದ ನನ್ನನ್ನು ಹೆಣ್ಣಾಗಿ ಬದಲಾಯಿಸಿ, ನೀನು ನನ್ನೊಂದಿಗೆ ಬಾಳಬೇಕು’ ಎಂದು ಓಂಪ್ರಕಾಶ್ ಹೇಳಿದ್ದಾಗಿ ಮುಜಾಹಿದ್ ಹೇಳಿಕೊಂಡಿದ್ದಾನೆ.

“ಇನ್ನು ನಿನ್ನನ್ನು ಮನೆಯವರು ಸ್ವೀಕರಿಸುವುದಿಲ್ಲ. ನಾನು ವಕೀಲರನ್ನು ಸಿದ್ಧಪಡಿಸಿದ್ದು, ನ್ಯಾಯಾಲಯದ ಮದುವೆಗೆ ಸಿದ್ಧತೆ ಮಾಡಿದ್ದೇನೆ. ನಿನ್ನ ತಂದೆಯನ್ನು ಶೂಟ್ ಮಾಡುತ್ತೇನೆ ಮತ್ತು ನಿಮ್ಮ ಪಾಲಿನ ಭೂಮಿಯನ್ನು ನನ್ನ ಹೆಸರಿಗೆ ಮಾಡಿಕೊಂಡು, ಅದನ್ನು ಮಾರಿ ಲಕ್ನೋಗೆ ಹೋಗುತ್ತೇನೆ” ಎಂದು ಓಂಪ್ರಕಾಶ್ ಹೇಳಿರುವುದಾಗಿ ಮುಜಾಹಿದ್ ಹೇಳಿಕೊಂಡಿದ್ದಾನೆ.

Advertisement

ರೈತ ಮುಖಂಡ ಶ್ಯಾಮ್ ಪಾಲ್ ನೇತೃತ್ವದಲ್ಲಿ ಭಾರತೀಯ ಕಿಸಾನ್ ಯೂನಿಯನ್ ಕಾರ್ಯಕರ್ತರು, ಓಂಪ್ರಕಾಶ್ ಹಾಗೂ ತಪ್ಪಿತಸ್ಥ ವೈದ್ಯರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next