Advertisement

ಆಸ್ಟಿಯೋ ಆರ್ಥೈಟಿಸ್‌ ರೋಗ ನಿವಾರಣೆಗೆ ವೈದ್ಯರ ಸಂಕಲ್ಪ

12:15 PM Oct 16, 2017 | |

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಎಲ್ಲ ವಯೋಮಾನದವರಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಆಸ್ಟಿಯೋ ಆರ್ಥೈಟಿಸ್‌ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಆಯುರ್ವೇದ ಹಾಗೂ ಅಲೋಪಥಿ ವೈದ್ಯರು ಒಂದೇ ವೇದಿಕೆಯಲ್ಲಿ ಸಂಕಲ್ಪ ಮಾಡಿದ್ದಾರೆ.

Advertisement

ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಪೀಪಲ್ ಟ್ರೀ ಹಾಸ್ಪಿಟಲ್ಸ್‌, ಇಂಡಿಯನ್‌ ಆರ್ಥೊಪಿಡಿಕ್‌ ಅಸೋಸಿಯೇಷನ್‌(ಐಒಎ), ಎಸ್‌-ವ್ಯಾಸ ಯೂನಿವರ್ಸಿಟಿ, ಕರ್ನಾಟಕ ಆರ್ಥೊಪಿಡಿಕ್‌ ಅಸೋಸಿಯೇಷನ್‌(ಕೆಒಎ), ಇಂಡಿಯನ್‌ ಹೆಮಟಾಲಜಿ ಅಸೋಸಿಯೇಷನ್‌, ರಾಜ್ಯ ಫಿಸಿಯೋಥೆರಪಿ ಫೆಡರೇಷನ್‌ (ಕೆಎಸ್‌ಪಿಎಫ್) ಸಹಯೋಗದಲ್ಲಿ ನಡೆದ ಒಎಕಾನ್‌ 2017 ಸಮ್ಮೇಳನದಲ್ಲಿ  ಆಸ್ಟಿಯೋ ಆರ್ಥೈಟಿಸ್‌ ನಿರ್ವಹಣೆಯ ಮಾಹಿತಿ ವಿನಿಮಯ ಮಾಡಿಕೊಂಡರು.

ಆರ್ಥೊಪಿಡಿಕ್‌ ಸರ್ಜನ್‌, ಜೆನೆಟಿಸಿಸ್ಟ್‌, ಯೋಗ ಥೆರಪಿಸ್ಟ್‌, ನ್ಯಾಚುರೋಪಥಿ ಸ್ಪೆಷಲಿಸ್ಟ್‌, ಆಯುರ್ವೇದಿಕ್‌ ಕನ್ಸಲ್ಟೆಂಟ್‌, ರೇಡಿಯೋಲಜಿಸ್ಟ್‌, ಫಿಸಿಯೋಥೆರಪಿಸ್ಟ್‌ ಮತ್ತು ಪೇಯ್ನ ಕನ್ಸಲ್ಟೆಂಟ್‌ಗಳು ಒಂದಾಗಿ ಆಸ್ಟಿಯೋ ಆರ್ಥೈಟಿಸ್‌ ಬಾಧಿತರ ಸಂಕಷ್ಟ ನಿವಾರಣೆಗೆ ಮುಂದಾಗಿದ್ದಾರೆ.

ಪೀಪಲ್‌ ಟ್ರೀ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಚಂದ್ರಶೇಖರ್‌ಮುನಿಯಪ್ಪ ಮಾತನಾಡಿ, 2025ರ ವೇಳೆಗೆ ಭಾರತ 60 ಮಿಲಿಯನ್‌ ಪ್ರಕರಣಗಳಿಂದ ಆಸ್ಟಿಯೋ ಆರ್ಥೈಟಿಸ್‌ ರಾಜಧಾನಿಯಾಗಲಿದೆ. ಮತ್ತಷ್ಟು ಆಘಾತಕಾರಿ ಅಂಶವೆಂದರೆ 30-50ರ ವಯೋಮಾನದವರು ಈ ರೋಗಕ್ಕೆ ಬಲಿಯಾಗುತ್ತಿ¨ªಾರೆ. ವೃದ್ಧರಿಗೆ ಕಾಡುವ ಈ ಸಮಸ್ಯೆ ಮಹಿಳೆಯರನ್ನು ಮುಖ್ಯವಾಗಿ ಬಾಧಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ರೋಗಕ್ಕೆ  ವೈದ್ಯಕೀಯ ಜಗತ್ತಿನಲ್ಲಿ ಹಲವು ಬಗೆಯ ಔಷಧಗಳಿವೆ. ಆದರೆ ಅಷ್ಟು ಪ್ರಯೋಜನವಾಗಿಲ್ಲ. ಆಯುರ್ವೇದ ಮತ್ತು ಅಲೋಪಥಿ ಸಾಂಪ್ರದಾಯಿಕವಾಗಿ ಪರಸ್ಪರ ಬೆರೆಯುವುದಿಲ್ಲ ಎಂದು ನಂಬಲಾಗಿದೆ. ಆದರೆ ಆಯುರ್ವೇದದ ಮಹತ್ವವನ್ನು ವಿಶ್ವ ಗುರುತಿಸಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next