Advertisement

ಕುಣಿದು ಒತ್ತಡ ನಿವಾರಿಸಿ ; ಆರೋಗ್ಯ ಕಾರ್ಯಕರ್ತರ ನೃತ್ಯ ಸವಾಲು

07:49 PM Apr 12, 2020 | sudhir |

ನ್ಯೂಯಾರ್ಕ್‌: ಒಂದೆಡೆ ಕೋವಿಡ್‌-19 ಅಮೆರಿಕದಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದರೆ, ಇನ್ನೊಂದೆಡೆ ಆರೋಗ್ಯ ಕಾರ್ಯಕರ್ತರು ಕ್ವಾರಂಟೇನ್‌ನಲ್ಲಿರುವವರ ಬೇಸರ ಕಳೆಯಲು ಹಾಗೂ ತಮ್ಮ ಕಾರ್ಯ ಒತ್ತಡವನ್ನು ಕಳೆಯಲು ಕುಣಿಯತೊಡಗಿದ್ದಾರೆ.

Advertisement

ಟಿಕ್‌ ಟಾಕ್‌ನಂಥ ಸಾಮಾಜಿಕ ಮಾಧ್ಯಮಗಳಲ್ಲಿನ ನೃತ್ಯ ಸವಾಲುಗಳಿಗೆ ಪ್ರತಿ ಉತ್ತರವಾಗಿ ಈ ಆರೋಗ್ಯ ಕಾರ್ಯಕರ್ತರು ತಮ್ಮ ನೃತ್ಯ ಪ್ರದರ್ಶನವನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಇದೀಗ ಟ್ರೆಂಡ್‌ ಆಗಿದ್ದು, ವೈದ್ಯರೂ ಸೇರಿದಂತೆ ಆರೋಗ್ಯ ಕಾರ್ಯಕರ್ತರ ನೃತ್ಯಗಳು ವೈರಲ್‌ ಆಗುತ್ತಿವೆ.

ಮಿಸೌರಿಯ ಸ್ಪ್ರಿಂಗ್‌ಫಿಲ್ಡ್‌ ನ ಮರ್ಸಿ ಆಸ್ಪತ್ರೆಯಲ್ಲಿ ಮೇಗನ್‌ ಥೀ ಸ್ಟಾಲಿಯನ್‌ ಬರೆದ “ಸ್ಯಾವೆಜ್‌’ ನಂತಹ ಹಾಡುಗಳಿಗೆ ಆರೋಗ್ಯ ಕಾರ್ಯಕರ್ತರು ನೃತ್ಯ ಮಾಡಿ ಟಿಕ್‌ಟಾಕ್‌ನಲ್ಲಿ ನೃತ್ಯ ಸವಾಲುಗಳನ್ನು ಹಾಕುತ್ತಿದ್ದಾರೆ. ಕಳೆದ ತಿಂಗಳಿಂದ ಈ ಬಗೆಯ ವಿಡಿಯೋಗಳ ಹಂಚಿಕೆ ಆರಂಭವಾಯಿತು.

ಇದು ಒಬ್ಬ ವೈದ್ಯೆ ಹಾಗೂ ಒಂದು ಆಸ್ಪತ್ರೆಯ ಕಥೆಯಲ್ಲ. ಹಲವು ಆಸ್ಪತ್ರೆ ಹಾಗೂ ಆರೋಗ್ಯ ಕಾರ್ಯಕರ್ತರ ಕಥೆ.
ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆರೋಗ್ಯ ಕಾರ್ಯಕರ್ತರ ಮೇಲಿನ ಒತ್ತಡವೂ ಹೆಚ್ಚಾಗುತ್ತಿದೆ. ಈಗ ಅ ಒತ್ತಡವನ್ನು ನಿರ್ವಹಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಇದರೊಂದಿಗೆ ಕ್ವಾರಂಟೇನ್‌ ನಲ್ಲಿರುವವರನ್ನು ನಿರ್ವಹಿಸುವುದೂ ಪ್ರಮುಖ ಹೊಣೆಗಾರಿಕೆಯಾಗಿದೆ. ಅಮೆರಿಕದಲ್ಲಿ ಆರೋಗ್ಯ ಕಾರ್ಯಕರ್ತರು ಬಹಳಷ್ಟು ಒತ್ತಡವನ್ನು ಎದುರಿಸುತ್ತಿದ್ದಾರೆ.

ಸೋಂಕಿತರ ಮುಖದಲ್ಲಿ ಮುಗುಳ್ನಗೆ ತರಿಸಲು, ಅವರ ದುಃಖ ದೂರ ಮಾಡಲು ಹಾಗೂ ನಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಇದೊಂದು ಪ್ರಯತ್ನವಷ್ಟೇ. ಆದರೆ ಈ ಮೂಲಕ ಕೋವಿಡ್‌-19 ಸೋಂಕಿನ ಗಂಭೀರತೆಯನ್ನೇನೂ ಕಡಿಮೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ ಆರೋಗ್ಯ ಕಾರ್ಯಕರ್ತ ಬೇಕರ್‌.

Advertisement

ಫಿಲಡೆಲ್ಫಿಯಾದ ಥಾಮಸ್‌ ಜೆಫ‌ರ್ಸನ್‌ ವಿವಿ ಆಸ್ಪತ್ರೆ ಸಿಬಂದಿಯೂ ಈ ನೃತ್ಯ ಸವಾಲನ್ನು ಸ್ವೀಕರಿಸಿತ್ತು. ಹೀಗೆ ನೃತ್ಯ ಸವಾಲು ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next