Advertisement

ರಕ್ತ ವಾಂತಿ ಮಾಡಿ ಆಸ್ಪತ್ರೆಗೆ ದಾಖಲಾದ 7 ವರ್ಷದ ಬಾಲಕನ ಶ್ವಾಸಕೋಶದಲ್ಲಿ ಸೂಜಿ ಪತ್ತೆ!

09:33 AM Nov 05, 2023 | Team Udayavani |

ನವದೆಹಲಿ: ಬಾಲಕನ ಆರೋಗ್ಯದಲ್ಲಿ ಇದ್ದಕಿದ್ದಂತೆ ಏರುಪೇರಾಗಿ ರಕ್ತ ವಾಂತಿ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದ ಏಳು ವರ್ಷದ ಬಾಲಕನ ಶ್ವಾಸಕೋಶದಲ್ಲಿ ಸೂಜಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಬಾಲಕನಿಗೆ ಬುಧವಾರ ವಿಪರೀತ ಕೆಮ್ಮು ಆರಂಭವಾಗಿದ್ದು ಬಳಿಕ ರಕ್ತ ವಾಂತಿ ಮಾಡಿದ್ದಾನೆ ಇದರಿಂದ ಗಾಬರಿಗೊಂಡ ಪೋಷಕರು ಬಾಲಕನನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ಬಾಲಕನನ್ನು ಎಂಡೋಸ್ಕೊಪಿ ಪರೀಕ್ಷೆಗೆ ಒಳಪಡಿಸಲಾಗಿತ್ತು ಈ ವೇಳೆ ಬಾಲಕನ ಎಡ ಶ್ವಾಸಕೋಶದ ಭಾಗದಲ್ಲಿ ಸುಮಾರು ೪ ಸೆಂ.ಮೀ ಉದ್ದದ ಸೂಜಿಯೊಂದು ಪತ್ತೆಯಾಗಿದೆ.

ಈ ಕುರಿತು ಹೇಳಿಕೆ ನೀಡಿದ್ದ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ.ವಿಶೇಶ್ ಜೈನ್ ಸಾಂಪ್ರದಾಯಿಕವಾಗಿ ಶ್ವಾಸಕೋಶಕ್ಕೆ ಹೊಕ್ಕಿದ್ದ ಸೂಜಿಯನ್ನು ಹೋರತೆಗೆಯುವುದು ಕಷ್ಟ ಸಾಧ್ಯವಾಗಿತ್ತು ಹಾಗಾಗಿ ಇದನ್ನು ಹೊರ ತೆಗೆಯಲು ಹೊಸ ಪ್ರಯೋಗಕ್ಕೆ ಮುಂದಾಗಬೇಕಾಯಿತು ಎಂದು ಹೇಳಿದ್ದಾರೆ.

ಡಾ.ವಿಶೇಶ್ ಜೈನ್ ಹಾಗೂ ಇತರ ನುರಿತ ವೈದ್ಯರ ತಂಡ ಬಾಲಕನ ಶ್ವಾಸಕೋಶದಲ್ಲಿ ಸಿಲುಕಿದ ಸೂಜಿಯನ್ನು ಹೊರತೆಗೆಯಲು ‘ಮ್ಯಾಗ್ನೆಟಿಕ್ ಸರ್ಜರಿ’ ನಡೆಸಲು ಮುಂದಾಗಿದೆ ಇದರ ಮೂಲಕ ಅಯಸ್ಕಾಂತ ಬಳಸಿ ಸೂಜಿಯನ್ನು ಹೊರತೆಗೆಯುವ ಹೊಸ ಪ್ರಯೋಗಕ್ಕೆ ವೈದಯರ ತಂಡ ಮುಂದಾಯಿತು, ಆದರೆ ಇದರ ನಡುವೆ ವೈದ್ಯರಿಗೆ ಇನ್ನೊಂದು ಸವಾಲು ಎದುರಾಗಿತ್ತು ಅದೇನೆಂದರೆ ಇದುವರೆಗೆ ಬಾಲಕನ ಶ್ವಾಸಕೋಶದ ನಾಳದ ಒಳಗೆ ಹೋಗುವಂತಹ ಅಯಸ್ಕಾಂತ ಹುಡುಕುವುದು ಆದರೆ ವೈದ್ಯರ ಪ್ರಯತ್ನದ ಫಲವಾಗಿ ಅಯಸ್ಕಾಂತ ಹೇಗೋ ಸಿಕ್ಕಿತು ಆ ಬಳಿಕ ಅದನ್ನು ಎಂಡೋಸ್ಕೋಪಿ ಉಪಕರಣದ ತುದಿಗೆ ಅಳವಡಿಸಿ ಬಾಲಕನ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಸೂಜಿಯನ್ನು ಹೊರತೆಗೆಯುವಲ್ಲಿ ಏಮ್ಸ್ ವೈದ್ಯರ ತಂಡ ಯಶಸ್ವಿಯಾಗಿದೆ.

ಸದ್ಯ ಬಾಲಕ ಆರೋಗ್ಯವಾಗಿದ್ದು, ಆದರೆ ಬಾಲಕನ ಶ್ವಾಸಕೋಶಕ್ಕೆ ಸೂಜಿ ಮಾತ್ರ ಹೇಗೆ ಹೊಕ್ಕಿತು ಎಂಬುದೇ ವಿಪರ್ಯಾಸ.

Advertisement

ಇದನ್ನೂ ಓದಿ: Israel-Hamas War: ಗಾಜಾ ಶಿಬಿರದ ಮೇಲೆ ಇಸ್ರೇಲಿ ಬಾಂಬ್ ದಾಳಿ… 50 ಕ್ಕೂ ಹೆಚ್ಚು ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next