Advertisement

ಕೋವಿಡ್‌ ಬದಲು ರೇಬೀಸ್‌ ಲಸಿಕೆ; ಡಾಕ್ಟರ್‌, ನರ್ಸ್‌ ಅಮಾನತು

10:10 PM Sep 29, 2021 | Team Udayavani |

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್‌ ಲಸಿಕೆ ಬದಲು ರೇಬೀಸ್‌ ನಿರೋಧಕ ಚುಚ್ಚು ಮದ್ದು ನೀಡಲಾಗಿದೆ.

Advertisement

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಕ್ಟರ್‌ ಮತ್ತು ನರ್ಸ್‌ ಒಬ್ಬರನ್ನು ಅಮಾನತು ಮಾಡಲಾಗಿದೆ.

ಥಾಣೆಯ ಕಾಲ್ವಾ ಎಂಬಲ್ಲಿರುವ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಕ್ಕೆ ಸೋಮವಾರ ರಾಜ್‌ಕುಮಾರ್‌ ಯಾದವ್‌ ಎಂಬುವರು ಲಸಿಕೆ ಹಾಕಿಸಿಕೊಳ್ಳಲು ತೆರಳಿದ್ದರು.

ಅವರು ರೇಬೀಸ್‌ ಲಸಿಕೆ ನೀಡುವ ಸಾಲಿನಲ್ಲಿ ನಿಂತದ್ದೇ ಸಮಸ್ಯೆಗೆ ಕಾರಣ ಎಂದು ಥಾಣೆ ಮಹಾನಗರ ಪಾಲಿಕೆ ಸದಸ್ಯರೊಬ್ಬರು ಹೇಳಿದ್ದಾರೆ.

ಸದ್ಯ ರಾಜ್‌ಕುಮಾರ್‌ ಅವರು ಆರೋಗ್ಯದಿಂದ ಇದ್ದಾರೆ.

Advertisement

ಇದನ್ನೂ ಓದಿ:ಬಿಜೆಪಿಯಿಂದ ಪ್ರಜಾತಂತ್ರ ವ್ಯವಸ್ಥೆ ದುರ್ಬಲ: ಡಾ.ಎಚ್.ಸಿ.ಮಹದೇವಪ್ಪ

Advertisement

Udayavani is now on Telegram. Click here to join our channel and stay updated with the latest news.

Next