Advertisement

Sudha Murthy 30 ವರ್ಷದಿಂದ ಒಂದೂ ಸೀರೆ ಖರೀದಿಸಿಲ್ಲವೇಕೆ ಗೊತ್ತಾ?

07:56 PM Jul 05, 2024 | Team Udayavani |

ನವದೆಹಲಿ: ಸರಳವಾದ ಉಡುಗೆ ತೊಡುಗೆಗಳಿಂದ, ಸಾಮಾನ್ಯ ಜೀವನ ಶೈಲಿಯಿಂದ ಎಲ್ಲರಿಗೂ ಸ್ಫೂರ್ತಿಯಾಗಿರುವ ರಾಜ್ಯಸಭಾ ಸಂಸದೆ, ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಕಳೆದ 30 ವರ್ಷದಿಂದ ಒಂದೇ ಒಂದು ಸೀರೆಯನ್ನೂ ಖರೀದಿಸಿಲ್ಲವಂತೆ ಅದಕ್ಕೆ ಕಾಶಿ (ವಾರಣಾಸಿ)ವೆಂದು ಹೇಳಿದ್ದಾರೆ.

Advertisement

ಇತ್ತೀಚೆಗೆ ದಿ ವಾಯ್ಸ್ ಆಫ್ ಫ್ಯಾಶನ್‌ಗೆ ನೀಡಿರುವ ಸಂದರ್ಶನವೊಂದರಲ್ಲಿ ಈ ವಿಚಾರದ ಬಗ್ಗೆ ಮಾತನಾಡಿ ಕಾಶಿಗೆ ಹೋದಾಗ ನೀವು ತುಂಬಾ ಇಷ್ಟಪಡುವ ಯಾವುದಾದರೂ ಒಂದನ್ನು ತ್ಯಜಿಸಬೇಕು ಎಂದು ಹೇಳುತ್ತಾರೆ ನಾನು ಶಾಪಿಂಗ್ ಮಾಡಲು ಇಷ್ಟಪಡುತ್ತೇನೆ. ಆದ್ದರಿಂದ ಗಂಗೆಗೆ ನಾನು ಭರವಸೆ ನೀಡಿದೆ. ಈ ಜೀವಿತಾವಧಿಯಲ್ಲಿ ಶಾಪಿಂಗ್ ಅನ್ನು ತ್ಯಜಿಸುತ್ತೇನೆ! ಎಂದು ಹೇಳಿದ್ದನ್ನು ಸ್ಮರಿಸಿದರು.

ಪೋಷಕರು ಮತ್ತು ಅಜ್ಜಿಯರು ಕನಿಷ್ಠ ಆಸ್ತಿಯೊಂದಿಗೆ ಮಿತವ್ಯಯದ ಜೀವನವನ್ನು ನಡೆಸುತ್ತಿದ್ದರು. ಅವರ ಬದ್ಧತೆಯು ನನ್ನ ಜೀವನದ ಮೇಲೆ ಆಳವಾಗಿ ಪರಿಣಾಮ ಬೀರಿದೆ ಎಂದು 73 ವರ್ಷದ ಸುಧಾ ಮೂರ್ತಿ ಹೇಳಿದರು.

“ಆರು ವರ್ಷಗಳ ಹಿಂದೆ ನನ್ನ ತಾಯಿ ತೀರಿಕೊಂಡಾಗ ಅವರ ಕಪಾಟಿನಲ್ಲಿದ್ದ ವಸ್ತುಗಳ ತೆಗೆಯಲು ಕೇವಲ ಅರ್ಧ ಗಂಟೆ ಸಾಕಾಯಿತು. ಏಕೆಂದರೆ ಅವರು ಅದರಲ್ಲಿ ಕೇವಲ 8-10 ಸೀರೆಗಳು ಮಾತ್ರ ಇದ್ದವು. ನನ್ನ ಅಜ್ಜಿ 32 ವರ್ಷಗಳ ಹಿಂದೆ ನಿಧನರಾದಾಗ, ಅವರ ಬಳಿ ಕೇವಲ ನಾಲ್ಕು ಸೀರೆಗಳಿದ್ದವು” ಎಂದು ಸುಧಾ ಮೂರ್ತಿ ನೆನಪಿಸಿಕೊಂಡಿದ್ದಾರೆ.

ಎರಡು ದಶಕಗಳಿಂದ ಸುಧಾ ಮೂರ್ತಿಯವರು ತಮ್ಮ ಸಹೋದರಿಯರು, ಆಪ್ತ ಸ್ನೇಹಿತರು ಮತ್ತು ಸಾಂದರ್ಭಿಕವಾಗಿ ಅವರು ಕೆಲಸ ಮಾಡುವ ಎನ್‌ಜಿಒಗಳು ಉಡುಗೊರೆಯಾಗಿ ನೀಡಿದ ಸೀರೆಗಳ ಧರಿಸುತ್ತಿದ್ದೇನೆ ಎಂದರು.

Advertisement

“ಸಹೋದರಿಯರು ಆರಂಭದಲ್ಲಿ ಪ್ರತಿ ವರ್ಷ ಒಂದೆರಡು ಸೀರೆಗಳ ಉಡುಗೊರೆಯಾಗಿ ನೀಡುತ್ತಿದ್ದರು. ನನ್ನ ಸಂಗ್ರಹದಲ್ಲಿ ಬೆಳೆಯುತ್ತಿರುವ ಸೀರೆಗಳನ್ನು ನಿಭಾಯಿಸುವುದು ಕಷ್ಟ ಎಂದು ಅನಿಸಿದ ಮೇಲೆ ಅವರಿಗೆ ಈ ಉಡುಗೊರೆ ಬೇಡ, ನನ್ನ ಬಳಿ ಈಗಾಗಲೇ ತುಂಬಾ ಇದೆ ಎಂದು ಹೇಳಲು ಪ್ರಾರಂಭಿಸಿದ್ದಾಗಿʼ ಸುಧಾ ಮೂರ್ತಿ ತಿಳಿಸಿದರು.

ನಾನು ಐವತ್ತು ವರ್ಷಗಳಿಂದ ಸೀರೆಗಳನ್ನು ಧರಿಸುತ್ತಿದ್ದೇನೆ. ನನ್ನ ಸೀರೆಗಳನ್ನು ನೆಲವನ್ನು ಗುಡಿಸುವಂತೆ ನಾನು ಧರಿಸುವುದಿಲ್ಲ. ಆದ್ದರಿಂದ ಅದು ಕೊಳಕಾಗುವುದಿಲ್ಲ ಮತ್ತು ದೀರ್ಘ ಬಾಳಿಕೆ ಬರುತ್ತದೆ ಎಂದು ಹೇಳಿದರು.

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸುಧಾ ಮೂರ್ತಿ ರಾಜ್ಯಸಭೆಯ ತಮ್ಮ ಚೊಚ್ಚಲ ಭಾಷಣದಲ್ಲಿ, ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಸರ್ಕಾರಿ ಪ್ರಾಯೋಜಿತ ಲಸಿಕೆ ಕಾರ್ಯಕ್ರಮದ ಕುರಿತು ಮಾತನಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next