Advertisement
ಮುಂಗಡವಾಗಿ ಹಣ ತೆತ್ತು, ಆ ಮೇಲೆ ಸರಕುಗಳ ಡೆಲಿವರಿ ಪಡೆಯುವಾಗ, ಖರೀದಿದಾರನಿಗೆ ತನಗೆ ತಾನು ಖರೀದಿಸಿದ ಸಾಮಾನುಗಳು ಕೈಗೆ ಸಿಗಬಹುದೇ, ಹೇಳಿದ ಸಮಯದಲ್ಲಿ ಡೆಲಿವರಿ ಸಿಗಬಹುದೇ ಎನ್ನುವ ಅಳುಕು ಡೆಲಿವರಿ ಸಿಗುವ ತನಕ ಕೊರೆಯುತ್ತಿರುತ್ತದೆ. ಹಾಗೆಯೇ ಉದ್ದರಿ ವ್ಯವಹಾರದಲ್ಲಿ (ಖರೀದಿಸಿದ (ಸಾಮಾನು- ಸರಕುಗಳ ಡೆಲಿವೆರಿ ನೀಡಿ ಪೇಮೆಂಟ್‌ಗಾಗಿ ಕಾಯುವುದು) ಮಾರಾಟಗಾರನಿಗೆ ತನಗೆ ಪೇಮೆಂಟ್ ದೊರಕಬಹುದೇ? ಹೇಳಿದ ಸಮದಲ್ಲಿ ಹಣ ಸಿಗಬಹುದೇ ಎನ್ನುವ ಅಳುಕು ಕೈಗೆ ಹಣ ಸಿಗುವತನಕ ಇರುತ್ತದೆ. ವಾಣಿಜ್ಯ ವ್ಯವಹಾರದಲ್ಲಿ ದಿನ ನಿತ್ಯ ಕಂಡು ಬರುವ ಈ ಸಮಸ್ಯೆಗಳಿಗೆ ವಾಣಿಜ್ಯೋದ್ಯಮ ಸಂಘಗಳು ಮತ್ತು ಬ್ಯಾಂಕುಗಳು ರೂಪಿಸಿದ ಮತ್ತು ಕಂಡುಕೊಂಡ ಪರಿಹಾರವೇ ಬ್ಯಾಂಕುಗಳ ಸಾಲಪತ್ರ. ಇದನ್ನು ಬ್ಯಾಂಕುಗಳ ಪರಿಭಾಷೆಯಲ್ಲಿ ಲೆಟರ… ಆಫ… ಕ್ರೆಡಿಟ… ಎನ್ನುತ್ತಾರೆ. ಇದು ಖರೀದಿದಾರ ಮತ್ತು ಮಾರಾಟಗಾರರ ಇಬ್ಬರ ರಕ್ಷಣೆಯನ್ನು ಮಾಡುತ್ತಿದ್ದು, ಕೆಲವು ನಿಬಂಧನೆಗಳಿಗೆ ಮತ್ತು ಕಟ್ಟುಪಾಡುಗಳಿಗೆ ಒಳಪಟ್ಟಿರುತ್ತದೆ. ಖರೀದಿದಾರನಿಗೆ ತಾನು ಖರೀದಿಸಿದ ಗೂಡ್ಸ್ ಅವನಿಗೆ ದೊರಕಿದ ಸಂತೃಪ್ತಿ ಇದ್ದರೆ, ಮಾರಾಟಗಾರನಿಗೆ ತಾನು ಮಾರಿದ ಗೂಡ್ಸಗೆ ಪೇಮೆಂಟ್ ದೊರೆತ ಸಂತಸ ಇರುತ್ತದೆ.
ಸಾಲ ಪತ್ರ ಅಥವಾ ಲೆಟರ್ ಆಫ್ ಕ್ರೆಡಿಟ್ ಎಂದರೆ, ಇದು ಖರೀದಿದಾರನ ಬ್ಯಾಂಕ್, ಖರೀದಿದಾರನ ಪರವಾಗಿ ಮಾರಾಟಗಾರನಿಗೆ, ಸಾಲಪತ್ರದಲ್ಲಿ ನಮೂದಿಸಿದ ಕಾಗದ ಪತ್ರಗಳು ಮತ್ತು ದಾಖಲೆಗಳನ್ನು ಸಲ್ಲಿಸಿದ ಆದಾರದ ಮೇಲೆ ಪೇಮೆಂಟ್ ನೀಡುವ ಮುಚ್ಚಳಿಕೆ ಪತ್ರ. ಮಾರಾಟ ಮಾಡಿದ ಗೂಡ್ಸ್‌ಗೆ ಪೇಮೆಂಟ್ ನಿಶ್ಚಿತವಾಗಿ ದೊರಕುವ ಗ್ಯಾರಂಟಿ ಪತ್ರ. ಇದು ಖರೀದಿದಾರನ ಪರವಾಗಿ, ಆತನ ಬ್ಯಾಂಕ್ ಮಾರಾಟಗಾರನಿಗೆ ಕೊಡುವ ಕೆಲವು ನಿಬಂಧನೆಗಳು ಇರುವ ಪೇಮೆಂಟ್ ಬಧªತೆ. ಈ ನಿಬಂಧನೆಗಳನ್ನು ಸರಿಯಾಗಿ ಪಾಲಿಸಿದರೆ, ವ್ಯಾಪಾರ- ವ್ಯವಹಾರದಲ್ಲಿ ಇರುವ ಸಾಮಾನ್ಯವಾದ ಅಪಾಯಗಳಿಂದ ರಕ್ಷಿಸಿ ಕೊಳ್ಳಬಹುದು. ಲೆಟರ್ ಆಫ್ ಕ್ರೆಡಿಟ್ ಅಥವಾ ಸಾಲಪತ್ರ ಹೇಗೆ ಕೆಲಸಮಾಡುತ್ತದೆ?
ಈ ಸಾಲಪತ್ರವು ಒಂದು ಸ್ಟ್ಯಾಂಡರ್ಡ್ ಫಾಮ್ಯಾìಟ್‌ನಲ್ಲಿ ಇರುತ್ತದೆ. ಇದರಲ್ಲಿ ಅರ್ಜಿದಾರನ ಹೆಸರು, ಫಲಾನುಭವಿಯಹೆಸರು, ಸಾಲಪತ್ರ ನೀಡುವ ಬ್ಯಾಂಕ್‌ನ ಹೆಸರು, ಫಲಾನುಭವಿಯ ಬ್ಯಾಂಕ್, ಸಾಲಪತ್ರದ, ಮಾರಾಟ ಮಾಡಬೇಕಾದ ವಸ್ತುವಿನ ಹೆಸರು, ಪ್ರಮಾಣ, ದರ, ಎಲ್ಲಿಂದ ಎಲ್ಲಿಗೆ ಸರಕು ಸಾಗಾಟ, ವಿಮೆ ಮುಂತಾದ ನಿರ್ದೇಶನಗಳು ಸ್ಪುಟವಾಗಿರುತ್ತವೆ. ಮಾರಾಟಗಾರನು ಸಾಲಪತ್ರದ ಪ್ರಕಾರ ಗೂಡ್ಸ ಅನ್ನು ಒಟ್ಟುಗೂಡಿಸಿ. ಉತ್ಪಾದಿಸಿ, ಸಂಗ್ರಹಿಸಿ, ಪ್ಯಾಕ್‌ಮಾಡಿ, ಗೂಡ್ಸ್, ರೈಲು, ಹಡಗು ಅಥವಾ ವಿಮಾನ ಸಂಸ್ಥೆಗಳಿಗೆ ಸಾಗಾಣಿಕೆ ಮಾಡಲು ಕಳುಹಿಸುತ್ತಾನೆ. ಒಮ್ಮೆ ಸರಕು ಅಥವಾ ಗೂಡ್ಸ್ ಹೊರ ಹೋದ ಮೇಲೆ, ಅದಕ್ಕೆ ಸಂಬಂಧಪಟ್ಟ ಇನ್‌ವಾಯ್ಸ, ಹುಂಡಿ, ತೂಕ – ಅಳತೆ ಪಟ್ಟಿ,ಲಾರಿ ರಸೀತಿ ಇನ್ನಿತರ ಸಾಲ ಪತ್ರದ ಪ್ರಕಾರದ ದಾಖಲೆಗಳನ್ನು ಮತ್ತು ಕಾಗದ ಪತ್ರಗಳನ್ನು ತನ್ನ ಬಿಲ… ಸಂಗಡ ತನ್ನ ಬ್ಯಾಂಕಿಗೆ ಸಲ್ಲಿಸುತ್ತಾನೆ. ಬ್ಯಾಂಕಿನವರು ಎÇÉಾ ಡಾಕ್ಯುಮೆಂಟ್ಸಗಳು ಸಾಲ ಪತ್ರದ ಪ್ರಕಾರ ಇದ್ದರೆ, ಅವರು ಮಾರಾಟಗಾರನ ಖಾತೆಗೆ ತಮ್ಮ ಖರ್ಚು ವೆಚ್ಚಗಳನ್ನು ಉಳಿಸಿಕೊಂಡು ಜಮೆ ಮಾಡುತ್ತಾರೆ. ಈ ಡಾಕ್ಯುಮೆಂಟ್ಸಗಳನ್ನು ಸಾಲಪತ್ರ ನೀಡಿದ ಬ್ಯಾಂಕಿಗೆ ಕಳುಹಿಸುತ್ತಾರೆ.
Related Articles
Advertisement
ಈ ವ್ಯವಸ್ಥೆಯಲ್ಲಿ ಏನಾದರೂ ಸಮಸ್ಯೆಗಳಿವೆಯೇ?ಈ ವ್ಯವಸ್ಥೆಯಲ್ಲಿ ವ್ಯವಹರಿಸಲ್ಪಟ್ಟ ಸರಕುಗಳ ಬಗೆಗೆ, ಅವುಗಳ ಗುಣಮಟ್ಟ, ಪ್ರಮಾಣ, ಅಳತೆಗಳ ಬಗೆಗೆ ತಕರಾರುಗಳು ಇದ್ದರೆ, banks deal only in documents but never in goods ಅನ್ವಯ ಬ್ಯಾಂಕುಗಳು ಮಧ್ಯ ಪ್ರವೇಶಿಸುವುದಿಲ್ಲ. ಸಂಬಂಧಪಟ್ಟ ಖರೀದಿದಾರ ಮತ್ತು ಮಾರಾಟಗಾರರೇ ಬಗೆಹರಿಸಿಕೊಳ್ಳಬೇಕು. ಚಿಲ್ಲರೆ ಅಥವಾ ಸಣ್ಣ ಪ್ರಮಾಣದ ವ್ಯಾಪಾರ ವ್ಯವಹಾರಗಳಿಗೆ ಈ ವ್ಯವಸ್ಥೆ ಅಷ್ಟು ಅನುಕೂಲಕರವಾಗಿಲ್ಲ ಮತ್ತು ಇದು ವೆಚ್ಚದಾಯಕ ಕೂಡಾ. ಸಗಟು ವ್ಯವಹಾರಕ್ಕೆ ಇದು ಹೇಳಿಮಾಡಿಸಿದ ವ್ಯವಸ್ಥೆ ಎನ್ನಬಹುದು. ಹಾಗೆಯೇ ಈ ಅನುಕೂಲವನ್ನು ಪ್ರತಿಯೊಬ್ಬ ಗ್ರಾಹಕನೂ ಬಳಸಿಕೊಳ್ಳಲು ಸಾಧ್ಯವಿಲ್ಲ. ಇದು ಬ್ಯಾಂಕ್ ತನ್ನ ಗ್ರಾಹಕನಿಗೆ ನೀಡುವ ಒಂದು ರೀತಿಯ non fund based ಸಾಲದ ಸೌಕರ್ಯವಾಗಿದ್ದು, ಸಾಲ ಪಡೆಯಲು ಅರ್ಹರಿದ್ದವರು ಮಾತ್ರ ಇದನ್ನು ಬಳಸಿಕೊಳ್ಳಬಹುದು. ಈ ಸೌಲಭ್ಯ ಬೇಕಿದ್ದರೆ, ಸಾಲ-ಸೌಲಭ್ಯ ಅನುಭವಿಸದ ಗ್ರಾಹಕರು ಶೇ.100ರ ವರೆಗೆ ಮಾರ್ಜಿನ್ ಅಥವಾ ಠೇವಣಿ ಕೊಡಬೇಕಾಗತ್ತದೆ. ಸಾಲ ಸೌಲಭ್ಯ ಇರುವವರು ಸ್ವಲ್ಪ ಕಡಿಮೆ ಮಾರ್ಜಿನ್ ಅಥವಾ ಠೇವಣಿ ನೀಡಬೇಕಾಗುತ್ತದೆ. ಇದು non fund based ಸೌಲಭ್ಯವಾದರೂ, ಪೇಮೆಂಟ್‌ಗೆ ಬ್ಯಾಂಕುಗಳ ಬಧªತೆ ಇರುವುದರಿಂದ, ಬ್ಯಾಂಕುಗಳು ತಮ್ಮ ಗ್ರಾಹಕರು ಪೇಮೆಂಟ್ ಮಾಡುವವರೆಗೆ ಕಾಯಲಾಗದೇ, ಕೂಡಲೇ ಪೇಮೆಂಟ್ ಮಾಡಬೇಕಾಗುವುದರಿಂದ, ಮಾರ್ಜಿನ್ ಅಥವಾ ಠೇವಣಿಗೆ ಒತ್ತಾಯಿಸುತ್ತವೆ. ಸಾಲಪತ್ರಗಳು ಬ್ಯಾಂಕಗಳಿಗೆ contingent liability ಅಗಿದ್ದು, ಆಕಸ್ಮಿಕ ನಕಾರಾತ್ಮಕ ಬೆಳವಣಿಗೆಗಾಗಿ ತಯಾರಿ ಮಾಡಿಕೊಂಡಿರಬೇಕಾಗುತ್ತದೆ. ಈ ಉದ್ದೇಶಕ್ಕಾಗಿಯೇ ಬ್ಯಾಂಕುಗಳು ಲೆಟರ್ ಆಫ್ ಕ್ರೆಡಿಟ್ ಸೌಲಭ್ಯ ನೀಡುವಾಗ ಠೇವಣಿ ಅಥವಾ ಮಾರ್ಜಿನ್‌ಗೆ ಒತ್ತಾಯಿಸುತ್ತಾರೆ. ಲೆಟರ್ ಆಫ್ ಕ್ರೆಡಿಟ್ ಅಡಿಯಲ್ಲಿನ ವ್ಯವಹಾರಗಳು ಹೆಚ್ಚಾಗಿ ಆಯಾತ- ನಿರ್ಯಾತದಂಥ ವಿದೇಶಿ ವ್ಯವಹಾರದಲ್ಲಿ ಹೆಚ್ಚಾಗಿ ಕಾಣಬರುತ್ತದೆ. ದೇಶೀಯ ವ್ಯವಹಾರದಲ್ಲಿ ಇದು ಇರುವುದಿಲ್ಲ ಅಥವಾ ತೀರಾ ಕಡಿಮೆಯಾಗಿರುತ್ತದೆ. ಲೆಟರ್ ಆಫ್ ಕ್ರೆಡಿಟ್ International Chamber of Commrece ನ Uniform Customs and Practice for Documentary Credit ಗೆ ಒಳಪಟ್ಟಿದ್ದು , ಇದರಲ್ಲಿ ಬಳಸುವ ಸುಮಾರು 11 ಪದಪುಂಜಗಳು ಐಇಇ ನೀತಿ ನಿಮಮಾವಳಿಗಳಂತೆ ಇರಬೇಕು. ಮತ್ತು ಇದರಲ್ಲಿ ಉಂಟಾಗುವ ಯಾವುದೇ ವಿವಾದಗಳು, ಈ ನಿಯಮದ ಅಡಿಯಲ್ಲಿಯೇ ಪರಿಹಾರ ಆಗಬೇಕು. ಲೆಟರ್ ಆಫ್ ಕ್ರೆಡಿಟ್‌ಗಳಲ್ಲಿ ಹಲವು ವಿಧಗಳಿದ್ದು, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುವುದು. ಇವುಗಳಲ್ಲಿ ಮುಖ್ಯವಾಗಿ ಚಾಲ್ತಿಯಲ್ಲಿರುವುದು, Irrevocable LC, confirmed, revolving, back to back, DA/DP, standby LC, restricted LC, transferable / non transferable ಮತ್ತು LC with or without recourse. . ವಾಣಿಜ್ಯ ವ್ಯವಹಾರಗಳಲ್ಲಿ ಇದೊಂದು ಉತ್ತಮ ವ್ಯವಸ್ಥೆಯಾದರೂ ಆರ್ಥ ಮಾಡಿಕೊಳ್ಳಲು ಸಮಯ ಹಿಡಿಯುತ್ತದೆ. ಅಂತರಾಷ್ಟ್ರೀಯ ವ್ಯಾಪಾರ ವ್ಯವಹಾರಗಳು ನಡೆಯುವುದೇ ಈ ವ್ಯವಸ್ಥೆಯ ಮೇಲೆ ಎಂದರೆ ಆಶ್ಚರ್ಯವಾಗದಿರದು. ಇದರಲ್ಲಿ ಮಾರಾಟಗಾರ ಮತ್ತು ಖರೀದಿದಾರರ ಮುಖ ಪರಿಚಯದ ಅಗತ್ಯ ಇರುವುದಿಲ್ಲ. ಬ್ಯಾಂಕುಗಳೂ ಮೀಡಿಯೇಟರ್ ನಂತೆ ವರ್ತಿಸುತ್ತವೆ. ಈ ವ್ಯವಹಾರದ ನೀತಿ ನಿಯಮಾವಳಿಗಳು ಜಗತ್ತಿನಾದÂಂತ ಏಕರೂಪವಾಗಿದ್ದು, ಇಂಟರನ್ಯಾಷನಲ… ಚೇಂಬರ್ ಆಫ್ ಕಾಮರ್ಸ್ ಇದನ್ನು ನಿರೂಪಿಸುವ , ರಿವ್ಯೂ ಮಾಡುವ, ಬದಲಿಸುವ ಮತ್ತು ಮಾರ್ಪಾಡುವ ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತದೆ. – ರಮಾನಂದ ಶರ್ಮಾ