Advertisement
ಜಗತ್ತಿನಲ್ಲೇ ಅತಿ ಹೆಚ್ಚು ಯುವಜನರನ್ನು ಹೊಂದಿದ ಯುವ ದೇಶ ನಮ್ಮದು ಎಂದು ಬೀಗುತ್ತಿದ್ದೇವೆ. ಇದು ಅತಿಶಯೋಕ್ತಿ ಏನಲ್ಲ. ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ 35ಕ್ಕಿಂತ ಕಡಿಮೆ ವಯೋಮಾನದವರ ಸಂಖ್ಯೆ ಶೇ. 65ರಷ್ಟಿದೆ. ಹಾಗಾಗಿ ದೇಶದ ಅಭಿವೃದ್ಧಿಗೆ ಚಿಂತಿಸುವ ಎಲ್ಲರ ಕಣ್ಣು ಈ ದೊಡª ಪ್ರಮಾಣದ ಯುವಜನರ ಮೇಲೆ ನೆಟ್ಟಿದೆ. ದೇಶದ ಅಭಿವೃದ್ಧಿ ನಿಮ್ಮನ್ನೇ ಅವಲಂಬಿಸಿದೆ ಎಂದು ಬೊಗಳೆ ಬಿಟ್ಟು, ಯುವಜನ ಸಬಲೀಕರ ಣದ ಅರ್ಥವನ್ನೇ ತಿಳಿಯದ ರಾಜಕೀಯ ನೇತಾರರಿಂದ ಹಿಡಿದು, ಯುವಜನರನ್ನು ಯುವ ಸಂಪನ್ಮೂಲವನ್ನಾಗಿ ರೂಪಿ ಸುವ ಮಹತ್ತರ ಹೊಣೆಹೊತ್ತ ಪ್ರೊಫೆಸರ್‌ಗಳವರೆಗೆ ಎಲ್ಲರೂ ಯುವಜನರನ್ನು ಕೊಂಡಾಡುವವರೇ.
Related Articles
Advertisement
ಈ ಅಂಕಿ-ಅಂಶಗಳು ಗ್ರಾಮೀಣ ಹಿನ್ನೆಲೆಯ, ಗರಿಷ್ಟ ಪ್ರಮಾ ಣದ ಯುವಜನರನ್ನು ಮುಖ್ಯ ವಾಹಿನಿಗೆ ತರುವ ಕಾರ್ಯ ಯೋಜನೆಯ ಅವಶ್ಯಕತೆ ಇದೆ ಮತ್ತು ಆರ್ಥಿಕ ಸಬಲೀಕರಣ ಬಹುಮುಖ್ಯ ಆದ್ಯತೆ ಎಂಬುದನ್ನು ಒತ್ತಿ ಹೇಳುತ್ತವೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಯುವಜನರ ಕೌಶಲ್ಯಾ ಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿವೆ. ನಮ್ಮ ಕೇಂದ್ರ ಸರ್ಕಾರ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರಗಳನ್ನು ತೆರೆಯುವ ಮತ್ತು 2020ರ ವೇಳೆಗೆ 50 ಲಕ್ಷ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿ ಹೊಂದಿದೆ. ಪ್ರಶ್ನೆ ಇರುವುದು ಈ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಸ್ವರೂಪ ಎಂಥದ್ದು ಎನ್ನುವ ಬಗ್ಗೆ. ಈಗಾಗಲೇ ಯುವಜನರು ಹಳ್ಳಿ ಬಿಟ್ಟು ಹೊಟ್ಟೆಪಾಡಿಗಾಗಿ ನಗರಗಳತ್ತ ಮುಖಮಾಡಿದ್ದಾರೆ. ಸರ್ಕಾರಗಳೂ ಕೂಡ ಕೌಶಲ್ಯಾಭಿವೃದ್ಧಿಯ ಹೆಸರಿನಲ್ಲಿ ಯುವಜನರನ್ನು ನಗರಗಳಿಗಟ್ಟಿ ಹಳ್ಳಿಗಳನ್ನು ಸ್ಮಶಾನಗಳನ್ನಾಗಿ ಸದಿದ್ದರೆ ಸಾಕು.
ಯುವಜನರನ್ನು ವ್ಯಾಪಕವಾಗಿ ಕಾಡುತ್ತಿರುವ ನಿರುದ್ಯೋಗ, ಶಿಕ್ಷಣೋದ್ಯಮದ ಆರ್ಥಿಕ ಪೆಟ್ಟು, ಕೌಶಲ್ಯಹೀನತೆ, ವಿದ್ಯಾಭ್ಯಾಸ ಮತ್ತು ಉದ್ಯೋಗದ ನಡುವಿನ ಸಹಸಂಬಂಧದ ಕೊರತೆ, ಸಾರ್ವಜನಿಕ ಸೇವೆಗಳ ಹೊರಗುತ್ತಿಗೆ, ನಿವೃತ್ತಿಯ ವಯಸ್ಸನ್ನು ಹೆಚ್ಚಿಸುವಂಥ ಯುವಜನ ವಿರೋಧಿ ನೀತಿಗಳು, ನಗರ ವಲಸೆ, ವ್ಯಾಪಕ ಉದ್ಯೋಗ ಸೃಷ್ಟಿಸಬಲ್ಲ ಕೃಷಿ ಕ್ಷೇತ್ರದ ಕಡೆಗಣನೆ, ಈ ಎಲ್ಲದರ ಹಿನ್ನೆಲೆಯಲ್ಲಿ ಯುವಜನರ ಮಾನಸಿಕ ಅರೋಗ್ಯದ ಮೇಲಿನ ನಕಾರಾತ್ಮಕ ಪರಿಣಾಮಗಳು ಮತ್ತು ಆತ್ಯಹತ್ಯೆಗಳ ಹೆಚ್ಚಳ ಹೀಗೆ ಹಲವಾರು ಸವಾಲುಗಳು, ಯುವಜನರಿಂದ ಅಭಿವೃದ್ಧಿ ನಿರೀಕ್ಷೆ ಮಾಡುವವರಿಗೆ ಕಾಣದಿ ರುವುದು ದುರದೃಷ್ಟಕರ.
ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ಯುವಜನತೆ 2018-19ನೇ ಸಾಲಿನ ರಾಜ್ಯದ ಆಯವ್ಯಯವನ್ನು ಎದುರು ಗೊಳ್ಳಲಿದ್ದಾರೆ. ಈಗಲಾದರೂ ಯುವಜನರ ಆದ್ಯತೆಯನ್ನು ಸರ್ಕಾರ ಸರಿಯಾಗಿ ಗ್ರಹಿಸುತ್ತದೆಯೇ ಕಾದು ನೋಡಬೇಕಿದೆ. ಇಲ್ಲವಾದರೆ ಆಳುವ ವ್ಯವಸ್ಥೆ ಮುಂದೆ ಇದಕ್ಕೆ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ.
ತಿಪ್ಪೇಸ್ವಾಮಿ ಕೆ.ಟಿ.