Advertisement

ರಾಹುಲ್‌ ಖಾತೇಲಿ ಟ್ವೀಟ್‌ ಮಾಡೋದ್ಯಾರು ಗೊತ್ತಾ?

11:25 AM Oct 30, 2017 | Team Udayavani |

ಹೊಸದಿಲ್ಲಿ : ಇತ್ತೀಚೆಗೆ, ರಾಹುಲ್‌ ಗಾಂಧಿಯವರ ಟ್ವಿಟರ್‌ ಖಾತೆಯನ್ನು ಯಾರೋ ಗುಪ್ತವಾಗಿ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಸುಖಾಸುಮ್ಮನೇ ಜನಪ್ರಿಯತೆ ತರಲು ಪ್ರಯತ್ನಿಸುತ್ತಿದ್ದಾರೆಂಬ ಸುದ್ದಿಗಳಿಗೆ ಖುದ್ದು ರಾಹುಲ್‌ ಗಾಂಧಿ ಯವರೇ ವಿಡಂಬಣೆಯ ಮೂಲಕ ಉತ್ತರಿಸಿದ್ದಾರೆ. 

Advertisement

ತಾವೇ ಸಾಕಿರುವ ಶ್ವಾನವೂ ಸ್ಟಂಟ್‌ ಮಾಡುವ ಒಂದು ವೀಡಿಯೋ ಕ್ಲಿಪ್‌ ಅನ್ನು ಟ್ವಿಟರ್‌ನಲ್ಲಿ ರವಿವಾರ ಅಪ್‌ಲೋಡ್‌ ಮಾಡಿರುವ ರಾಹುಲ್‌, “”ನನ್ನ ಬದಲು ಯಾರು ನನ್ನ ಖಾತೆಯಿಂದ ಟ್ವೀಟ್‌ ಮಾಡುತ್ತಿದ್ದರು ಎಂಬುದಕ್ಕೆ ಇಲ್ಲಿದೆ ಉತ್ತರ” ಎಂದು ತಮ್ಮನ್ನು ಟೀಕಿಸಿದ್ದವರಿಗೆ ಟಾಂಗ್‌ ನೀಡಿದ್ದಾರೆ. 

ರಾಹುಲ್‌ ಗಾಂಧಿಯವರ ಹೆಸರಲ್ಲಿ ಅವರ ಖಾತೆಯಿಂದ ಮತ್ಯಾರೋ ಟ್ವೀಟ್‌ ಮಾಡುತ್ತಿದ್ದು, ಅಸಂಖ್ಯ ನಕಲಿ ಖಾತೆಗಳಿಂದ ಅವರ ಟ್ವೀಟ್‌ಗಳನ್ನು ರಿ-ಟ್ವೀಟ್‌ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಇತ್ತೀಚೆಗೆ ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next