Advertisement

Vinesh Phogat ಆಸ್ತಿ ಮೌಲ್ಯ ಎಷ್ಟು ಗೊತ್ತೇ? ವಿವರ ಇಲ್ಲಿದೆ

01:07 AM Sep 13, 2024 | Team Udayavani |

ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕುಸ್ತಿಪಟು, ಕಾಂಗ್ರೆಸ್‌ ನಾಯಕಿ ವಿನೇಶ್‌ ಫೋಗಾಟ್‌ ಆಸ್ತಿ ಎಷ್ಟು ಗೊತ್ತಾ? ಬರೋಬ್ಬರಿ 36.5 ಕೋಟಿ ರೂ.!

Advertisement

ಜುಲಾನಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಅವರು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ಘೋಷಿಸಿದ್ದಾರೆ. ತಮ್ಮ ಬಳಿ ಐಷಾರಾಮಿ ವಾಹನಗಳಿದ್ದು, 35 ಲಕ್ಷ ಮೌಲ್ಯದ ವೋಲ್ವೋ ಎಕ್ಸ್‌ಸಿ 60, 12 ಲಕ್ಷ ಹ್ಯುಂಡೈ ಕ್ರೆಟಾ ಹಾಗೂ 17 ಲಕ್ಷ ರೂ.ಗಳ ಇನೋವಾ ಕಾರು ಹೊಂದಿದ್ದಾರೆ. ಪತಿ ಸೋಮ್‌ವೀರ್‌ ರಾಥಿ 19 ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ ಇದೆ. 40 ಸಾವಿರ ರೂ. ಮೌಲ್ಯದ ಟಿವಿ ಎಸ್‌ ಸ್ಕೂಟಿ ಹೊಂದಿದ್ದಾರೆ. ವಿನೇಶ್‌ಗೆ ಸೋನಿಪತ್‌ನಲ್ಲಿ 2 ಕೋಟಿ ರೂ. ಮೌಲ್ಯದ ಮನೆಯಿದೆ. ಕೈಯಲ್ಲಿ 1.95 ಲಕ್ಷ ರೂ. ನಗದು, ಬ್ಯಾಂಕ್‌ ಖಾತೆಯಲ್ಲಿ 40 ಲಕ್ಷ ರೂ. ಹಣ ಹಾಗೂ 2.25 ಲಕ್ಷ ರೂ ಬೆಲೆಬಾಳುವ ಆಭರಣಗಳಿವೆ.

ವಿನೇಶ್‌ ಆಸ್ತಿ ವಿವರ
ವೋಲ್ವೋ, ಕ್ರೆಟಾ, ಇನೋವಾ ಸೇರಿ 64 ಲ. ರೂ. ಮೌಲ್ಯದ 3 ಎಸ್‌ಯುವಿ
ಪತಿ ಸೋಮ್‌ವೀರ್‌ ಬಳಿಯಿದೆ 19 ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ
ಸೋನಿಪತ್‌ನಲ್ಲಿ 2 ಕೋಟಿ ರೂ. ಮೌಲ್ಯದ ಮನೆ
ಬ್ಯಾಂಕ್‌ನಲ್ಲಿ 40 ಲಕ್ಷ ರೂ., 2.25 ಲಕ್ಷ ರೂ. ಆಭರಣ

Advertisement

Udayavani is now on Telegram. Click here to join our channel and stay updated with the latest news.

Next