Advertisement

ಪ್ರಪಂಚದಾದ್ಯಂತ ಧೂಳೆಬ್ಬಿಸುತ್ತಿರುವ ʻRRRʼ ಜಪಾನ್‌ನಲ್ಲಿ ಮಾಡಿದ ಕಲೆಕ್ಷನ್‌ ಎಷ್ಟು?

06:08 PM Mar 16, 2023 | Team Udayavani |

ನವದೆಹಲಿ: ರಾಜಮೌಳಿ ನಿರ್ದೇಶನದ ʻRRRʼ ಸಿನೆಮಾ ವಿಶ್ವದಾದ್ಯಂತ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ. ʻನಾಟು ನಾಟುʼ ಹಾಡು ಅತ್ಯುತ್ತಮ ಸಂಗೀತ ವಿಭಾಗದಲ್ಲಿ ಪ್ರತಿಷ್ಟಿತ ಆಸ್ಕರ್‌ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ. ಪ್ರಪಂಚದಾದ್ಯಂತ ಧೂಳೆಬ್ಬಿಸುತ್ತಿರುವ RRR ಜಪಾನ್‌ನಲ್ಲೂ ದಾಖಲೆ ಬರೆದಿದೆ.

Advertisement

ಜಪಾನ್‌ನ ಪ್ರಮುಖ 44 ನಗರಗಳ 209 ಸ್ಕ್ರೀನ್‌ಗಳಲ್ಲಿ ಮತ್ತು 31 ಐಮ್ಯಾಕ್ಸ್‌ ಥೀಯೆಟರ್‌ಗಳಲ್ಲಿ ಕಳೆದ ಅಕ್ಟೋಬರ್‌ 21 ರಂದು ಬಿಡುಗಡೆಯಾಗಿದ್ದ RRR ಸಿನೆಮಾ 21 ವಾರದ ಬಳಿಕವೂ ನಾನ್‌-ಸ್ಟಾಪ್‌ ಪ್ರದರ್ಶನ ಕಾಣುತ್ತಿದ್ದು, ಜಪಾನ್‌ ಬಾಕ್ಸಾಫೀಸ್‌ನಲ್ಲಿ 80 ಕೋಟಿಗೂ ಹೆಚ್ಚಿನ ಕಲೆಕ್ಷನ್‌ ಮಾಡಿದೆ.

ಜಪಾನ್‌ನಲ್ಲೂ ಸಿನೆಮಾದ ಯಶಸ್ಸಿನ ಬಗ್ಗೆ ಟ್ವೀಟ್‌ ಮಾಡಿರುವ ರಾಜಮೌಳಿ, ಲವ್‌ ಯೂ ಜಪಾನ್‌ ಎಂದು ಸಂತಸ ವ್ಯಕ್ತಪಡಿಸಿದ್ಧಾರೆ.

 

Advertisement

ರಾಮ್‌ಚರಣ್‌ ತೇಜ ಮತ್ತು ಜ್ಯೂ. ಎನ್‌ಟಿಆರ್‌ ಅಭಿನಯದ RRR ಜಪಾನ್‌ ಗಲ್ಲಾಪೆಟ್ಟಿಗೆಯಲ್ಲಿ 80 ಕೋಟಿ ದೋಚಿದ್ದು, 100 ಕೋಟಿಗೂ ಹೆಚ್ಚಿನ ಕಲೆಕ್ಷನ್‌ ಆಗುವ ಸಂಭವವಿದೆ ಎಂದು ಸಿನೆಮಾ ತಂಡ ಹೇಳಿದೆ.

ಅಲ್ಲದೇ, ಈಗಾಗಲೇ ವಿಶ್ವದಾದ್ಯಂತ 1000 ಕೋಟಿ ಕಲೆಕ್ಷನ್‌ ಮಾಡಿದ ಬಳಿಕವೂ RRR ತನ್ನ ಹವಾ ಮುಂದುವರಿಸುತ್ತಿದ್ದು, ಆಸ್ಕರ್‌ ಗಿಟ್ಟಿಸಿಕೊಂಡ ಬಳಿಕವಂತೂ RRR ಖ್ಯಾತಿ ಇನ್ನೂ ಹೆಚ್ಚಾಗಿದೆ.

ಇದನ್ನೂ ಓದಿ: ಹೊರಬಂತು ‘ಶಿವಾಜಿ ಸುರತ್ಕಲ್‌-2′ ಹಾಡು

Advertisement

Udayavani is now on Telegram. Click here to join our channel and stay updated with the latest news.

Next