Advertisement

ಮೊಬೈಲ್‌ ಆ್ಯಪ್‌ನಿಂದ ಸಮೀಕ್ಷೆ ನಡೆಸಿ

03:23 PM Aug 14, 2020 | Suhan S |

ಹಿರಿಯೂರು: ಮೊಬೈಲ್‌ ಆ್ಯಪ್‌ ಬಳಸಿಕೊಂಡು ಬೆಳೆ ಸಮೀಕ್ಷೆ ನಡೆಸಿ ನಿಗದಿತ ಸಮಯದಲ್ಲಿ ಅಪ್‌ ಲೋಡ್‌ ಮಾಡುವ ಬಗ್ಗೆ ಸೂಚನೆ ನೀಡಿದ್ದು, ಅದರಂತೆ ರೈತರು ಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಜಿ.ಎಚ್‌. ಸತ್ಯನಾರಾಯಣ ಹೇಳಿದರು.

Advertisement

ನಗರದ ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಬೆಳೆ ಸಮೀಕ್ಷೆ 2020 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಸಚಿವರ ಮತ್ತು ತೋಟಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೃಷಿ ಸಚಿವರು ತೀರ್ಮಾನಿಸಿದಂತೆ ರೈತರು ತಮ್ಮ ಜಮೀನುಗಳಲ್ಲಿ (ಹಿಸ್ಸಾವಾರು) ತಾವು ಬೆಳೆದ ಬೆಳೆಗಳ ಛಾಯಾಚಿತ್ರವನ್ನು ಡಿಪಿಎಆರ್‌(ಇ-ಆಡಳಿತ) ರವರ ಹೊಸದಾಗಿ ಅಭಿವೃದ್ಧಿ ಪಡಿಸಿರುವ ರೈತರು ಇಲಾಖೆಯ ಹೆಚ್ಚಿನ ಪ್ರಯೋಜನ, ಕೃಷಿ ತಂತ್ರಜ್ಞಾನದ ಬಳಕೆ ಬಗ್ಗೆ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.

ರೈತರು ನಿಗದಿತ ಸಮಯದೊಳಗೆ ತಾವು ಬೆಳೆದ ಬೆಳೆಗಳ ಛಾಯಾಚಿತ್ರವನ್ನು ತೆಗೆದು ತಂತ್ರಾಂಶದ ಜ್ಞಾನವುಳ್ಳ ಯುವಕರು ಖಾಸಗಿ ನಿವಾಸಿಗಳ ಜತೆಗೆ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌ ಮೂಲಕ ಅಪ್‌ ಲೋಡ್‌ ಮಾಡಿಸಬೇಕು ಎಂದರು. ಒಂದು ಪಕ್ಷ ಮೇಲಿನ ಎರಡು ಚಟುವಟಿಕೆಗಳು ಆಗದಿದ್ದಲ್ಲಿ ಖಾಸಗಿ ನಿವಾಸಿಗಳು ಮತ್ತು ಸರ್ಕಾರದ ಸಿಬ್ಬಂದಿಯು ಬೆಳೆ ಸಮೀಕ್ಷೆ ಕೈಗೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ವಿವಿಧ ಆಟೋಗಳ ಮೂಲಕ ಬೆಳೆ ಸಮೀಕ್ಷೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ಆಟೋಗಳ ಮೂಲಕ ಪ್ರಚಾರ ಕಾರ್ಯಕ್ರಮ ಆರಂಭಿಸಿತು. ತಹಶೀಲ್ದಾರ್‌ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ತಾಲೂಕಿನ ವಿವಿಧ ರೈತರ ಜಮೀನುಗಳಿಗೆ ತೆರಳಿ ಬೇಳೆ ಸಮೀಕ್ಷೆ ನಡೆಸಿ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next