ಕಾಯಬೇಕು ಎಂದು ಬೆಂಗಳೂರಿನ ಡಾ| ಡಿ.ಎಚ್ ರಾವ್ ಹೇಳಿದರು.
Advertisement
ಶನಿವಾರ ನಗರದ ಅಪ್ಪಾ ಪಬ್ಲಿಕ್ ಶಾಲೆ ಆವರಣದ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿರುವ ಮೂರು ವಾರಗಳ ಇಂಡಕ್ಷನ್ ಪ್ರೋಗ್ರಾಂ ತರಬೇತಿ ಕಾರ್ಯಕ್ರಮದಲ್ಲಿ ಮಾನವೀಯ ಮೌಲ್ಯಗಳ ಕುರಿತು ಅವರು ಉಪನ್ಯಾಸ ನೀಡಿದರು.
ಯಾರಾದರೂ ಉಪಕಾರ ಮಾಡಿದರೆ ಅವರಿಗೆ ತಿರುಗಿ ಉಪಕಾರ ಮಾಡುವ ಮನೋವೃತ್ತಿ ಬೆಳಸಿಕೊಳ್ಳಿ ಎಂದು ಸಲಹೆ ನೀಡಿದರು. ಸಣ್ಣ ಕೆಲಸಗಳಿಗೆ ಸಹಾಯ ಮಾಡಿದವರಿಗೂ ಮರಳಿ ಧನ್ಯವಾದ ಹೇಳಬೇಕು. ಅದು ಯಾವುದೇ ವ್ಯಕ್ತಿಯೇ ಆಗಿರಲಿ. ಇದರಿಂದ ಅವರಲ್ಲಿ ಇನ್ನಷ್ಟು ಸೇವೆ ಮಾಡುವ ಹುಮ್ಮಸ್ಸು ಬರುತ್ತದೆ. ಎಲ್ಲರನ್ನು ಗೌರವ ಭಾವದಿಂದ ಆದರಿಸಬೇಕು. ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ಸೆಲಿಬ್ರಿಟಿಗಳವರೆಗೆ ಎಲ್ಲರೂ ಮನುಷ್ಯರೇ ಆಗಿರುತ್ತಾರೆ.
Related Articles
ಪ್ರಾಣಾಯಾಮ, ಧ್ಯಾನ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಿದರು.
Advertisement
ಸಹ ಕುಲಪತಿ ಡಾ| ವಿ.ಡಿ. ಮೈತ್ರಿ, ಡೀನ್ ಡಾ| ಲಿಂಗರಾಜ ಶಾಸ್ತ್ರೀ, ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.