Advertisement

ಹೋಳಿ ವೇಳೆ ಪ್ರಾಣಿಗಳ ಮೇಲೆ ಬಣ್ಣ ಬಳಸದಿರಲು ಸೂಚನೆ: ಡಾ. ಉಮಾಪತಿ

07:12 PM Mar 17, 2022 | Team Udayavani |

ಬೆಂಗಳೂರು : ಹೋಳಿ ಹಬ್ಬದ ಸಂದರ್ಭ ಸಾಕು ಪ್ರಾಣಿಗಳ ಮೇಲೆ ಬಣ್ಣವನ್ನು ಬಳಸದಿರುವಂತೆ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯದರ್ಶಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಉಪನಿರ್ದೇಶಕರಾದ ಡಾ. ಪಿ.ಉಮಾಪತಿಯವರು ಸಾರ್ವಜನಿಕರನ್ನು ಆಗ್ರಹಿಸಿದ್ದಾರೆ.

Advertisement

ರಾಸಯನಿಕವಾಗಲಿ ಅಥವಾ ನೈಸರ್ಗಿಕ ಬಣ್ಣವಾಗಲಿ ಪ್ರಾಣಿಗಳ ದೇಹದೊಳಗೆ ಚರ್ಮ, ಬಾಯಿ, ಕಣ್ಣು ಅಥವಾ ಮೂಗಿನ ಮೂಲಕ ಪ್ರವೇಶಿಸಿದ್ದಲ್ಲಿ ವಿವಿಧ ರೀತಿಯ ಅಲರ್ಜಿ, ವಾಂತಿ ಹಾಗೂ ಕುರುಡುತನವನ್ನೂ ಸಹ ತರುವ ಸಾಧ್ಯತೆ ಇರುತ್ತದೆ.

ಜನರ ಮೋಜಿಗಾಗಿ ಆಡುವ ಬಣ್ಣದ ಆಟವು ಪ್ರಾಣಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಇದನ್ನು ತಡೆಯುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ, ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಕಾಯ್ದೆ 1960(PCAACT) ಅನ್ವಯ ಇದು ಕಾನೂನು ಬಾಹಿರವಾಗಿದ್ದು ಅಂತಹ ಯಾವುದೇ ಪ್ರಕರಣಗಳು ವರದಿಯಾದಲ್ಲಿ, ಕಾಯ್ದೆಯ ನಿಯಮಗಳ ಅನ್ವಯ ಕ್ರಮ ಜರುಗಿಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next