Advertisement

ಪಾಕ್‌ ತಾಂತ್ರಿಕ ಪದವಿಗಳಿಗೆ ಮಾನ್ಯತೆ ರದ್ದು : ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಹೇಳಿಕೆ

12:37 AM Apr 25, 2022 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಪಡೆಯಲಾದ ಪದವಿಗಳಿಗೆ ಯಾವುದೇ ಮಾನ್ಯತೆಯಿಲ್ಲ ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯು.ಜಿ.ಸಿ) ಹೇಳಿದ ಬೆನ್ನಲ್ಲೇ ಪಾಕಿ ಸ್ಥಾನದ ತಾಂತ್ರಿಕ ಕಾಲೇಜುಗಳಲ್ಲಿ ಶಿಕ್ಷಣ ಪಡೆದವರಿಗೆ ಮಾನ್ಯತೆ ನೀಡಲಾಗದು ಎಂದು ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಹೇಳಿದೆ.

Advertisement

ಭಾರತದಲ್ಲಿರುವ ವಿದ್ಯಾರ್ಥಿಗಳಷ್ಟೇ ಅಲ್ಲದೆ, ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತ ಮೂಲದ ವಿದ್ಯಾರ್ಥಿಗಳಿಗೂ ಈ ಸೂಚನೆ ಅನ್ವಯಿಸು ತ್ತದೆ. ಪಾಕಿಸ್ಥಾನದಲ್ಲಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮುಗಿಸಿ ಬಂದರೆ ಅದರ ಆಧಾರದಲ್ಲಿ ಭಾರತದಲ್ಲಿ ಓದನ್ನು ಮುಂದುವರಿಸಲು ಅಥವಾ ಭಾರತದಲ್ಲಿ ಉದ್ಯೋಗ ಮಾಡಲು ಅವಕಾಶ ನೀಡ ಲಾಗುವುದಿಲ್ಲ. ಹಾಗಾಗಿ ಉನ್ನತ ಶಿಕ್ಷಣದ ಆಸೆಯಿಂದ ಯಾವುದೇ ಭಾರತೀಯ ವಿದ್ಯಾರ್ಥಿಗಳು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಬಾರದು ಎಂದು ಸೂಚಿಸಿದೆ.

ವಿನಾಯಿತಿ: ಇದೇ ವೇಳೆ ಒಂದು ಸ್ಪಷ್ಟನೆಯನ್ನೂ ನೀಡಿ ರುವ ಮಂಡಳಿ, “ಪಾಕಿಸ್ಥಾನದಿಂದ ಈ ಹಿಂದೆಯೇ ತಾಂತ್ರಿಕ ಶಿಕ್ಷಣ ಪಡೆದು ಭಾರತಕ್ಕೆ ವಲಸೆ ಬಂದು ಇಲ್ಲಿ ಪೌರತ್ವ ಪಡೆದಿರುವ ವಿದ್ಯಾರ್ಥಿಗಳಿಗೆ ಈ ಸೂಚನೆ ಅನ್ವಯಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next