Advertisement

ಮಾಂಸದಂಗಡಿಗೆ ಸಹಾಯಧನ ಬೇಡ

12:47 PM Mar 25, 2017 | Team Udayavani |

ಹರಪನಹಳ್ಳಿ: ಬಿಜೆಟ್‌ನಲ್ಲಿ ಮಾಂಸ ಮಾರಾಟಗಾರರಿಗೆ 1.20 ಲಕ್ಷ ರೂ. ಸಹಾಯಧನ ಘೋಷಿಸಿರುವುದು ಸರಿಯಲ್ಲ. ಬದಲಾಗಿ ರೈತರಿಗೆ ಮೇವು ಖರೀದಿಸಲು ಮತ್ತು ಸಂಗ್ರಹಿಸಲು ನೀಡಬೇಕು ಎಂದು ಬಾಲೇಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯಿಸಿದರು. 

Advertisement

ತಾಲೂಕಿನ ನಿಚ್ಚವನಹಳ್ಳಿ ಗ್ರಾಮದಲ್ಲಿ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಪಟ್ಟಾಧಿಧಿಕಾರದ ಸಂಭ್ರಮಾಚರಣೆ ಮತ್ತು ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀವರ್ಚನ ನೀಡಿದರು. ಮುಖ್ಯಮಂತ್ರಿಗಳು ದನ ಕಡಿಯುವವರಿಗಿಂತ ಕಾಯುವವರಿಗೆ ಸಹಾಯಧನ ನೀಡಬೇಕು. ಸರ್ಕಾರ ಕತ್ತರಿಸುವ ಕೆಲಸ ಬಿಡಿಸಿ ಕಾಯುವ ಕಾಯಕ ಮಾಡಿಸಬೇಕು.

ಶಾಸಕರು ಇದನ್ನು ಸಿಎಂ ಅವರ ಗಮನಕ್ಕೆ ತಂದು ಮಾಂಸದಂಗಡಿಗಳ ಸಹಾಯಧನ ನೀಡುವುದನ್ನು ಹಿಂಪಡೆದರೆ ಗೌರವಿಸುತ್ತೇವೆ, ಇಲ್ಲವಾದಲ್ಲಿ ವಿರೋಧಿಸುತ್ತೇವೆ ಎಂದರು. ಸ್ವಾಮೀಜಿಗಳು ಗ್ರಾಮಗಳ ತಾಪ ಕಡಿಮೆ ಮಾಡಬೇಕೆಯೇ ಹೊರತು ಸಂಪತ್ತು ಲೂಟಿ ಮಾಡಬಾರದು. ಭಕ್ತರ ನೋವು ಕಡಿಮೆ ಮಾಡಿ ಅಂಧಕಾರ, ಅಜ್ಞಾನವನ್ನು ಕಳೆಯಬೇಕು.

ಸ್ವಾಮೀಜಿಗಳು ಎಲ್ಲಾರನ್ನು ಸಮಾನಾಗಿ ಕಂಡು ಜಾತಿ ಬೋಧನೆ ಮಾಡದೇ ನೀತಿ ಬೋಧಿಧಿಸಬೇಕು. ಕಾವಿ ಎನ್ನುವುದು ಸಮಾನತೆಯ ಸಂಕೇತವಾಗಬೇಕು. ಹಿಂದೆ ಮಠಗಳು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಅನಿವಾರ್ಯತೆ ಇತ್ತು. ಹಾಗಾಗಿ ವೀರಶೈವ ಮಠಗಳು ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ನೀಡಿವೆ.

ಸರ್ಕಾರವೇ ಎಲ್ಲ ತರಹದ ಶಿಕ್ಷಣವನ್ನು ನೀಡುತ್ತಿರುವುದರಿಂದ ಇದರ ಅವಶ್ಯತೆ ಮಠಗಳಿಗಿಲ್ಲ. ಆದರೆ ಎಲ್ಲಿಯೇ ಸಾಗಿದರೂ ಮರಗಳ ಕೆಳಗೆ ಹೋಗುವಂತಹ ಕೆಲಸವನ್ನು ಮಠಗಳು ಮಾಡುವುದು ಅಗತ್ಯ ಎಂದರು. ಗಿಡ ನೆಡುವ ಕಾರ್ಯಗಳು ಹೆಚ್ಚಾಗಿ ನಡೆಯಬೇಕು. ಖಾದಿ ಅಭಿವೃದ್ಧಿ ಮಾಡಬೇಕು. ಖಾಕಿ ಅಭಿವೃದ್ಧಿ ಕಾರ್ಯಗಳನ್ನು ಕಾಯುವ ಕಾಯಕ ಮಾಡಬೇಕು.

Advertisement

ಕಾವಿಧಾರಿಗಳು ನಾಡಿನಲ್ಲಿ ಐಕ್ಯತೆ ಉಂಟು ಮಾಡುವುದು, ಎಲ್ಲರೂ ಸಮಾನರು ಎನ್ನುವುದನ್ನು ಸಾರಬೇಕು. ಈ ಮೂವರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಜಗತ್ತು ಮೂರಾಬಟ್ಟೆಯಾಗಲಿದೆ. ಮಾಜಿ ಉಪಮುಖ್ಯಮಂತ್ರಿ ದಿ| ಎಂ.ಪಿ.ಪ್ರಕಾಶ್‌ ಅವರ ವಟುಗಳ ಪಾಠ ಶಾಲೆ ತೆರೆಯುವ ಕನಸು ನನಸು ಮಾಡಲು ತಾವು ಜೋಳಿಗೆ ಹಾಕಲು ಸಿದ್ಧ ಎಂದು ತಿಳಿಸಿದರು. 

ಶಾಸಕ ಎಂ.ಪಿ.ರವೀಂದ್ರ ಮಾತನಾಡಿ, ವೀರಶೈವ ಮಠಗಳು ಅನ್ನ ದಾಸೋಹದ ಜೊತೆಗೆ ಜ್ಞಾನ ದಾಸೋಹ ನೀಡಿವೆ. ಹಾಲಸ್ವಾಮೀಜಿಗಳ ಮಠ ಎಲ್ಲಾ ಭಕ್ತ ಸಮೂಹ ಹೊಂದಿದೆ. ನಮ್ಮ ತಂದೆ ಎಂ.ಪಿ.ಪ್ರಕಾಶ್‌ ಅವರು ವಟುಗಳ ಪಾಠ ಶಾಲೆ ತೆರೆಯುವ ಕನಸು  ಹೊಂದಿದ್ದರು. ಅದು ನನಸಾಗಲಿಲ್ಲ, ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಅದನ್ನು ಸಕಾರಗೊಳಿಸಲಾಗುವುದು ಎಂದರು. 

ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ರಾಮಘಟ್ಟ ರೇವಣಸಿದ್ದೇಶ್ವರ ಶ್ರೀ, ನಿಚ್ಚವ್ವನಹಳ್ಳಿ ಹಾಲಸ್ವಾಮೀಜಿ, ಜಿಪಂ ಉಪಾಧ್ಯಕ್ಷ ಡಿ.ಸಿದ್ದಪ್ಪ, ಸದಸ್ಯ ಎಚ್‌.ಬಿ. ಪರುಶುರಾಮಪ್ಪ, ತಾಪಂ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ, ಓ.ರಾಮಪ್ಪ, ಟಿ.ಎಚ್‌.ಎಂ. ವಿರೂಪಾಕ್ಷಯ್ಯ, ಕೋಡಿಹಳ್ಳಿ ಭೀಮಪ್ಪ, ಎಂ.ವಿ.ಅಂಜಿನಪ್ಪ, ಎ.ಎಂ.ವಿಶ್ವನಾಥ್‌, ಅಬ್ದುಲ್‌ ರಹೀಮಾನಸಾಬ್‌, ವೆಂಕಟೇಶ್‌, ಸಿ.ಜಾವೀದ್‌, ವಸಂತಪ್ಪ, ಮಂಜುನಾಥ್‌, ಶಶಿಧರಸ್ವಾಮಿ ಮತ್ತಿತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next