Advertisement

ಜನರ ರಾಷ್ಟ್ರಪ್ರೇಮ ಪರೀಕ್ಷೆ ಬೇಡ: ಕಮಲ್‌

06:35 AM Oct 26, 2017 | Team Udayavani |

ಚೆನ್ನೈ: ಅನಗತ್ಯ ಸಂದರ್ಭಗಳಲ್ಲಿ ಮತ್ತು ಇಷ್ಟ ಬಂದ ಸ್ಥಳಗಳಲ್ಲಿ ಜನರ ರಾಷ್ಟ್ರಪ್ರೇಮವನ್ನು ಪರೀಕ್ಷಿಸುವ ಪದ್ಧತಿ ಸಲ್ಲದು. ಹೀಗೆಂದು ಬಹುಭಾಷಾ ತಾರೆ ಕಮಲ್‌ಹಾಸನ್‌ ಟ್ವೀಟ್‌ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೂ ಮೊದಲು ರಾಷ್ಟ್ರಗೀತೆಯನ್ನು ಮೊಳಗಿಸ ಬೇಕೆಂದು ಆದೇಶ ಮರು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿರುವ ಹಿನ್ನೆಲೆಯಲ್ಲಿ ಅವರು ಈ ರೀತಿಯಾಗಿ ಟ್ವೀಟ್‌ ಮಾಡಿದ್ದಾರೆ. “ಕೇಂದ್ರ ಸರಕಾರ ರಾಷ್ಟ್ರಗೀತೆಯನ್ನು ತನ್ನ ವಾಹಿನಿ ಯಾದ ದೂರದರ್ಶನದಲ್ಲಿ ಮೊಳಗಿಸಲಿ. ಆದರೆ, ಅದನ್ನು ನಾಗರಿಕರ ಮೇಲೆ ಬಲ ವಂತವಾಗಿ ಹೊರಿಸುವುದು ತಪ್ಪು. ತನ್ನ ಮಟ್ಟಿಗೆ ಹೇಳುವುದಾದರೆ ನನ್ನ ದೇಶಭಕ್ತಿಯನ್ನು ಎಲ್ಲೆಂದರಲ್ಲಿ ಪರೀಕ್ಷೆಗೊಳಪಡಿಸುವುದನ್ನು ನಾನು ಒಪ್ಪುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

Advertisement

ಸ್ವಯಂಪ್ರೇರಿತ ದೂರು: ಡೆಂ à ಜ್ವರಕ್ಕೆ ಮದ್ದು ಎಂದು ಹೇಳಲಾಗಿರುವ ನಿಳವೆಂಬು ಕುಡಿನೀರ್‌ (ಸಿದೌœಷಧ) ಅನ್ನು ಯಾರಿಗೂ ಸಲಹೆ ನೀಡಬೇಡಿ ಎಂದು ಟ್ವೀಟ್‌ ಮಾಡಿದ ಕಮಲ್‌ ವಿರುದ್ಧ ದೂರು ದಾಖಲಿಸಲು ಮದ್ರಾಸ್‌ ಹೈಕೋರ್ಟ್‌ ಚೆನ್ನೈ ಪೊಲೀಸರಿಗೆ ಆದೇಶ ನೀಡಿದೆ. ಈ ಬಗ್ಗೆ ವ್ಯಕ್ತಿಯೊಬ್ಬರು ಹೈಕೋರ್ಟ್‌ಗೆ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next