Advertisement

ಮಕ್ಕಳ ಮೇಲೆ ಒತ್ತಡ ಹೇರಬೇಡಿ

11:54 AM Jun 11, 2020 | Suhan S |

ಹುಬ್ಬಳ್ಳಿ: ಕೋವಿಡ್‌-19 ಶೈಕ್ಷಣಕ ಕಾಲಘಟ್ಟದಲ್ಲಿ ಶಿಕ್ಷಣದ ವಿಚಾರವಾಗಿ ಪಾಲಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಯಾವುದೇ ಒತ್ತ ಹೇರಬಾರದೆಂದು ಮಾಸಿಕ ರೋಗ ತಜ್ಞ ಡಾ| ಆನಂದ ಪಾಂಡುರಂಗಿ ಹೇಳಿದರು.

Advertisement

ಇಲ್ಲಿನ ಎಸ್‌ಜೆಎಂವಿಎಸ್‌ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಮನಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಆನ್‌ಲೈನ್‌ ಬೋಧನಾ ಕಲಿಕೆ ಪ್ರಕ್ರಿಯೆಯಲ್ಲಿ ಕೋವಿಡ್‌-19 ಮಾನಸಿಕ ಪರಿಣಾಮ ಕುರಿತು ಆನ್‌ ಲೈನ್‌ ಮೂಲಕ ಉಪನ್ಯಾಸ ನೀಡಿದ ಅವರು, ಕೋವಿಡ್‌-19ಗೆ ಹೆದರುವ ಅಗತ್ಯವಿಲ್ಲ. ಒಂದಿಷ್ಟು ಸುರಕ್ಷಿತ ಕ್ರಮ ಅಳವಡಿಸಿಕೊಳ್ಳಬೇಕು. ಸಾಂಪ್ರದಾಯಿಕ ಬೋಧನೆ ಮಾನವನ ಪರಸ್ಪರ ಕ್ರಿಯೆಗೆ ಉತ್ತಮ ವಾತಾವರಣ ಹೊಂದಿದೆ. ಆದರೆ ಇಂತಹ ಬಿಕ್ಕಟ್ಟಿನಲ್ಲಿ ಆನ್‌ ಲೈನ್‌ ಬೋಧನೆ ಅನಿವಾರ್ಯಎಂದು ಹೇಳಿದರು.

ಕೋವಿಡ್‌-19 ಸಂದರ್ಭದಲ್ಲಿ ಬದಲಾವಣೆಗೊಳ್ಳುತ್ತಿರುವ ಆನ್‌ ಲೈನ್‌ ಬೋಧನೆ ಹಾಗೂ ಪರೀಕ್ಷೆ ಚರ್ಚೆಯ ವಿಷಯವಾಗಿದೆ. ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು, ಮಾನಸಿಕ ಆರೋಗ್ಯ ತಜ್ಞರು ಒಂದೇ ಅಭಿಪ್ರಾಯ ಹೊಂದಿಲ್ಲ. ಪರೀಕ್ಷೆಗಳನ್ನು ಅನಿರ್ದಿಷ್ಟವಾಗಿ ಮುಂದೂಡುವುದರಿಂದ ವಿದ್ಯಾರ್ಥಿಗಳಲ್ಲಿ ಅನಿಶ್ಚಿತತೆಯ ಕಾಲಹರಣ ಮಾಡುತ್ತದೆ. ಇದರಿಂದ ಆತಂಕ ಮತ್ತು ಖನ್ನತೆಯ ಲಕ್ಷಣಗಳು ಕಂಡು ಬರುತ್ತವೆ. ವಿದ್ಯಾರ್ಥಿಗಳು ಉತ್ತಮ ಕೆಲಸ ಮಾಡುವಲ್ಲಿ ಸಕಾರಾತ್ಮಕವಾಗಿರಬೇಕು. ಉತ್ತಮ ನಿದ್ರೆ, ಪೌಷ್ಟಿಕ ಆಹಾರ, ಸಾಮಾಜಿಕ ಸಂವಹನ, ದೈಹಿಕ ಚಟುವಟಿಕೆಗಳನ್ನು ಹೊಂದಿರಬೇಕು. ಆನ್‌ಲೈನ್‌ ಬೋಧನೆ ಆಹಾರದಲ್ಲಿ ಉಪ್ಪಿನಕಾಯಿಯಂತೆ ಇರಬೇಕು ಎಂದರು.

ಪ್ರಾಚಾರ್ಯ ಡಾ| ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಸೋಂಕಿಗೆ ಹೆದರಿ ಕಾಲಹರಣ ಮಾವುದಕ್ಕಿಂತ ಹಲವು ಸುರಕ್ಷಿತ ಕ್ರಮ ಅಳವಡಿಸಿಕೊಂಡು ಸಕರಾತ್ಮಕವಾಗಿ ಬದುಕಬೇಕು ಎಂದರು. ಡಾ| ಸುನೀತಾರಾಣಿ ಸ್ವಾಗತಿಸಿದರು. ಕೆ.ಸುಶ್ಮಿತಾ ವಂದಿಸಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next