Advertisement

ಹಾದಿಯಾ ಮದುವೆ ಬಗ್ಗೆ ಎನ್‌ಐಎ ತನಿಖೆ ಬೇಕಿಲ್ಲ

06:50 AM Jan 24, 2018 | Harsha Rao |

ನವದೆಹಲಿ: “ವಿವಾಹ ಎಂಬುದನ್ನು ಯಾವುದೇ ಕ್ರಿಮಿನಲ್‌ ಕೃತ್ಯ ಅಥವಾ ಸಂಚಿನ ವ್ಯಾಪ್ತಿಯಿಂದ ಹೊರಗಿಡಬೇಕು. ಒಬ್ಬ ಪುರುಷ ಮತ್ತು ಮಹಿಳೆ ತಮ್ಮಿಚ್ಛೆಯಂತೆ ಮದುವೆಯಾಗಿರುವಾಗ ಅದರ ಬಗ್ಗೆ ತನಿಖೆ ನಡೆಸಲು ಹೋಗಬಾರದು. ಹೋದರೆ, ಇಡೀ ದೇಶಕ್ಕೇ ಕೆಟ್ಟ ಸಂದೇಶ ನೀಡಿದಂತಾಗುತ್ತದೆ.’

Advertisement

ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಕೇರಳದ ಹಾದಿಯಾ- ಶಫೀನ್‌ ಜಹಾನ್‌ ವಿವಾಹ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ ಅಭಿ ಪ್ರಾಯವಿದು. ಮಂಗಳವಾರ  ವಿಚಾರಣೆ ನಡೆ ಸಿದ ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ಪೀಠ, “ಹಾದಿಯಾ ತನ್ನಿಚ್ಛೆಯಂತೆಯೇ ಶಫೀನ್‌ ಜಹಾನ್‌ನನ್ನು ಮದುವೆಯಾಗಿ ದ್ದಾಳೆ. ಹೀಗಾಗಿ ಇವರ ವಿವಾಹಕ್ಕೆ ಸಂಬಂ ಧಿಸಿ ಎನ್‌ಐಎ ತನಿಖೆ ಅಗತ್ಯವಿಲ್ಲ’ ಎಂದಿದೆ. ಕೇರಳದಲ್ಲಿ ನಡೆಯುತ್ತಿದೆ ಎನ್ನಲಾದ ಲವ್‌ ಜಿಹಾದ್‌ ಪ್ರಕರಣಗಳಿಗೆ ಸಂಬಂ ಧಿಸಿ ಎನ್‌ಐಎ ತನಿಖೆ ಮುಂದುವರಿಸಲಿ ಎಂದಿದೆ.

ವಿಚಾರಣೆ ವೇಳೆ, “ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ’ ಎಂದು ಎನ್‌ಐಎ ಮಾಹಿತಿ ನೀಡಿತು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, “ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಒಬ್ಬ ಪುರುಷ- ಮಹಿಳೆಯ ವೈವಾಹಿಕ ಸ್ಥಿತಿ ಕುರಿತು ತನಿಖೆ ನಡೆಸಬೇಡಿ. ಹಾದಿಯಾಳೇ ತನ್ನಿಚ್ಛೆಯಂ ತೆಯೇ ಜಹಾನ್‌ನ ಕೈಹಿಡಿದಿರುವಾಗ ವಿವಾಹದ ನ್ಯಾಯಸಮ್ಮತತೆಯನ್ನು ಪ್ರಶ್ನಿಸಬಾರದು’ ಎಂದು ಹೇಳಿತು. ಜತೆಗೆ, ವಿವಾಹ ಅನೂರ್ಜಿತಗೊಳಿಸಿದ ಹೈಕೋರ್ಟ್‌ ನಿರ್ಧಾರ ಸರಿಯೇ, ತಪ್ಪೇ ಎಂದು ನಾವು ನಿರ್ಧರಿಸುತ್ತೇವೆ ಎಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next