Advertisement

ಆ್ಯಂಟಿಬಯಾಟಿಕ್‌ಗಳನ್ನು ಇಷ್ಟೊಂದು ಬಳಸಬೇಡಿ; ಅನುಮತಿ ಇಲ್ಲದ ಹೊರ ತಾಗಿಯೂ ಎಲ್ಲೆಡೆ ಬಳಕೆ

01:12 AM Sep 08, 2022 | Team Udayavani |

ಹೊಸದಿಲ್ಲಿ: ಭಾರತೀಯರಿಗೆ ಆ್ಯಂಟಿಬಯಾಟಿಕ್‌ಗಳ ಮೇಲೆ ಪ್ರೀತಿ ಹೆಚ್ಚೇ? ಅಥವಾ ವೈದ್ಯರೇ ಅನಗತ್ಯವಾಗಿ ನೀಡುತ್ತಿದ್ದಾರೆಯೇ?

Advertisement

ಇಂಥ ಪ್ರಶ್ನೆ ಮೂಡಲು ಕಾರಣವಿದೆ. ಲ್ಯಾನ್ಸೆಟ್‌ ಎಂಬ ಸಂಸ್ಥೆಯ ಸಂಶೋಧನಾ ವರದಿಯಲ್ಲಿ ಭಾರ ತದಲ್ಲಿ ಬಳಸಲಾದ ಆ್ಯಂಟಿಬಯಾಟಿಕ್‌ಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಈ ವರದಿಯಂತೆ 2019ರ ಆಸುಪಾಸಿನಲ್ಲಿ ಭಾರತ ಅನುಮತಿ ರಹಿತವಾದ ಅಝಿ ತ್ರೋ ಮೈಸಿನ್‌ ಮತ್ತು ಸಿಫಿಕ್ಸೆ„ಮಿಎಂಬ ಆ್ಯಂಟಿಬಯಾಟಿಕ್‌ಗಳನ್ನು ಅತೀ ಹೆಚ್ಚು ಬಳಸಲಾಗಿದೆ. ಅಂದರೆ ಒಂದು ವರ್ಷದಲ್ಲಿ 500 ಕೋಟಿಯಷ್ಟು ಈ ಮಾತ್ರೆಗಳನ್ನು ಬಳಸಲಾಗಿದೆ.

ಇನ್ನೂ ಆಘಾತಕಾರಿ ಸಂಗತಿ ಎಂದರೆ, ಈ ಸಾಲಿನಲ್ಲಿ ಭಾರತದಲ್ಲಿ ಬಳಕೆಯಾದ ಶೇ. 50ರಷ್ಟು ಆ್ಯಂಟಿ ಬಯಾಟಿಕ್‌ಗಳಿಗೆ ಅನುಮತಿ ನೀಡ ಲಾಗಿದೆ. ಅಝಿತ್ರೋಮೈಸಿನ್‌ನ 500 ಎಂಜಿ ಟ್ಯಾಬ್ಲೆಟ್‌ ಅನ್ನು ಹೆಚ್ಚಾಗಿ, ಅಂದರೆ ಶೇ.7.6ರಷ್ಟು ಬಳಸಲಾಗಿದೆ. ಸಿಫಿಕ್ಸೆ„ಮಿ 200 ಎಂಜಿಯನ್ನು ಶೇ.6.5 ರಷ್ಟು ಮಂದಿ ಬಳಸಿದ್ದಾರೆ.

ಆತಂಕಕಾರಿ ವಿಚಾರ
ತಜ್ಞರ ಪ್ರಕಾರ ವಿವೇಚನಾರ ಹಿತ ವಾಗಿ ಇವುಗಳನ್ನು ಬಳಸಬಾರದು. ಇದರಿಂದ ದೇಹದಲ್ಲಿ ರೋಗಾಣುಗಳ ವಿರುದ್ಧ ಹೋರಾಡುವ‌ ಶಕ್ತಿಯೇ ಕುಂದಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಇಂಥ ಆ್ಯಂಟಿ
ಬಯಾಟಿಕ್‌ (ಪ್ರತಿಕಾಯ) ಗಳನ್ನು ಶೇ. 85ರಿಂದ ಶೇ. 90ರಷ್ಟು ಖಾಸಗಿ ಆಸ್ಪತ್ರೆಗಳಲ್ಲೇ ಬಳಸಲಾಗಿದೆ. ಜತೆಗೆ ಸೆಫಾಲೋಸ್ಪೂರಿನ್ಸ್‌, ಮ್ಯಾಕ್ರೋಲಿ ಡಿಸ್‌ ಮತ್ತು ಪೆನ್ಸಿಲಿನ್‌ ಎಂಬ ಆ್ಯಂಟಿಬಯಾಟಿಕ್‌ಗಳನ್ನೂ ಹೆಚ್ಚಾಗಿ ಬಳಸಲಾಗಿದೆ ಎಂದು ವರದಿ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next