ಹೊಸದಿಲ್ಲಿ: ಔಷಧ ಬೆಲೆ ನಿಯಂತ್ರಕ ಸಂಸ್ಥೆ ರಾಷ್ಟ್ರೀಯ ಫಾರ್ಮಾಸುಟಿಕಲ್ ಬೆಲೆ ನಿಗದಿ ಪ್ರಾಧಿಕಾರ (ಎನ್‌ಪಿಪಿಎ)ವು ಆ್ಯಂಟಿಬಯಾಟಿಕ್‌ಗಳು ಮತ್ತು ಆ್ಯಂಟಿವೈರಲ್ ಸಹಿತ 128 ಔಷಧಗಳ ಬೆಲೆಯನ್ನು ಪರಿಷ್ಕರಿಸಿದೆ.
ಪರಿಷ್ಕರಣೆಗೊಂಡಿರುವ ಔಷಧಗಳಲ್ಲಿ ಅಮೊಕ್ಸಿಲಿನ್ ಮತ್ತು ಕ್ಲಾವುಲಾನಿಕ್ ಆ್ಯಸಿಡ್, ವ್ಯಾಂಕೊಮೈಸಿನ್, ಅಸ್ತಮಾಕ್ಕೆ ನೀಡುವ ಸಾಲುºಟಮೋಲ್, ಕ್ಯಾನ್ಸರ್ ಔಷಧ ಟ್ರಾಸ್ಟುಜುಮಾಬ್, ನೋವು ನಿವಾರಕ ಇಬುಪ್ರೊಫೇನ್ ಮತ್ತು ಪ್ಯಾರಸಿಟಮಾಲ್ ಸೇರಿವೆ.
ಎನ್‌ಪಿಪಿಎಯ ಅಧಿಸೂಚನೆಯ ಪ್ರಕಾರ ಅಮೊಕ್ಸಿಲಿನ್ ಕ್ಯಾಪ್ಸೂಲ್‌ನ ಗರಿಷ್ಠ ಬೆಲೆಯನ್ನು 2.18 ರೂ., ಸಿಟ್ರಿಜಿನ್ 1.68 ರೂ., ಇಬುಪ್ರೊಫೇನ್ 400 ಎಂಜಿ ಮಾತ್ರೆಯ ಗರಿಷ್ಠ ಬೆಲೆಯನ್ನು 1.07 ರೂ.ಗೆ ನಿಗದಿಪಡಿಸಲಾಗಿದೆ.