ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಂತೆ ಶಾರ್ಟ್ ಫಿಲಂಗಳೂ ಸಹ ಉತ್ತಮ ಗುಣಮಟ್ಟದಲ್ಲಿ ತಯಾರಾಗುತ್ತಿದ್ದು, ಅವುಗಳನ್ನು ನೋಡುಗರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ “ಆಂಟಿಬಯೋಟಿಕ್’ ಎಂಬ ವಿಭಿನ್ನ ಶೀರ್ಷಿಕೆಯ ಕಿರುಚಿತ್ರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ.
“ಆರ್‌ಎವಿ ಇಂಟೀರಿಯರ್ ಪ್ರೊಡಕ್ಷನ್’ನಲ್ಲಿ ನಿರ್ಮಾಣವಾಗಿರುವ “ಆಂಟಿಬಯೋಟಿಕ್’ ಕಿರುಚಿತ್ರಕ್ಕೆ ದೀಪ್ತಿ ರಾಜ್ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಸೈಕಾಲಾಜಿಕಲ್ ಥ್ರಿಲ್ಲರ್ ಶೈಲಿಯ ಕಥಾಹಂದರವುಳ್ಳ ಈ ಕಿರುಚಿತ್ರದಲ್ಲಿ ವ್ಯವಸ್ಥೆಯ ಬಗ್ಗೆ ಒಬ್ಬ ವ್ಯಕ್ತಿಗೆ ಇರಬಹುದಾದಂತಹ ಒಂದು ದೃಷ್ಟಿಕೋನದ ಕುರಿತು ಹೇಳಲಾಗಿದೆ. ಚಿದಾನಂದ್, ಖುಷಿ, ವೈರಲ್ ಶೇಖರ್, ಸಚಿನ್, ಸಂತೋಷ್ ಮೊದಲಾದವರು “ಆಂಟಿಬಯೋಟಿಕ್’ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಕಿರುಚಿತ್ರಕ್ಕೆ ಅಶೋಕ್ ಹಣಗಿ ಛಾಯಾಗ್ರಹಣ, ಉಮೇಶ್ ಆರ್. ಬಿ ಸಂಕಲನ ಹಾಗೂ ವೀರ್ ಸಮರ್ಥ್ ಹಿನ್ನೆಲೆ ಸಂಗೀತವಿದೆ.