Advertisement

ಪಿಂಕ್‌ ಬಾಲ್‌ ಟೆಸ್ಟ್‌: ಆಸ್ಟ್ರೇಲಿಯ ತಂಡಕ್ಕೆ ಲ್ಯಾನ್ಸ್‌ ಮಾರಿಸ್‌, ಮೈಕಲ್‌ ನೇಸರ್‌

05:26 PM Dec 06, 2022 | Team Udayavani |

ಅಡಿಲೇಡ್‌: ವೆಸ್ಟ್‌ ಇಂಡೀಸ್‌ ವಿರುದ್ಧ ಅಡಿಲೇಡ್‌ನ‌ಲ್ಲಿ ಆಡಲಾಗುವ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯಕ್ಕೆ ಆಸ್ಟ್ರೇಲಿಯ ತಂಡವನ್ನು ಅಂತಿಮಗೊಳಿಸಲಾಗಿದೆ. ವೇಗಿ ಲ್ಯಾನ್ಸ್‌ ಮಾರಿಸ್‌ ಮತ್ತು ಮಧ್ಯಮ ವೇಗಿ ಮೈಕಲ್‌ ನೇಸರ್‌ ಸ್ಥಾನ ಪಡೆದಿದ್ದಾರೆ.

Advertisement

ಮೊದಲ ಟೆಸ್ಟ್‌ ಪಂದ್ಯದ ವೇಳೆ ನಾಯಕ ಹಾಗೂ ಪ್ರಧಾನ ವೇಗಿ ಪ್ಯಾಟ್‌ ಕಮಿನ್ಸ್‌ ಗಾಯಾಳಾಗಿದ್ದರು. ಮಿಚೆಲ್‌ ಸ್ಟಾರ್ಕ್‌ ಮತ್ತು ಜೋಶ್‌ ಹೇಝಲ್‌ವುಡ್‌ ಮೇಲೆ ಹೆಚ್ಚಿನ ಭಾರ ಬಿದ್ದಿತ್ತು.

ಕಮಿನ್ಸ್‌ ಫಿಟ್‌ನೆಸ್‌ ಟೆಸ್ಟ್‌ನಲ್ಲಿ ತೇರ್ಗಡೆಯಾದರಷ್ಟೇ ಅಡಿಲೇಡ್‌ ಟೆಸ್ಟ್‌ ಆಡುವರು. ಹೀಗಾಗಿ ಹೆಚ್ಚುವರಿ ವೇಗಿಗಳನ್ನು ಸೇರಿಸಿಕೊಳ್ಳಲಾಗಿದೆ. ಸೀಮರ್‌ ಸ್ಕಾಟ್‌ ಬೋಲ್ಯಾಂಡ್‌ ಕೂಡ ತಂಡದಲ್ಲಿದ್ದಾರೆ.

ಅಡಿಲೇಡ್‌ ಟೆಸ್ಟ್‌ ಡಿ. 8ರಿಂದ 12ರ ತನಕ ನಡೆಯಲಿದೆ.

ಆಸ್ಟ್ರೇಲಿಯ ಟೆಸ್ಟ್‌: ಪ್ಯಾಟ್‌ ಕಮಿನ್ಸ್‌ (ನಾಯಕ), ಸ್ಕಾಟ್‌ ಬೋಲ್ಯಾಂಡ್‌, ಅಲೆಕ್ಸ್‌ ಕ್ಯಾರಿ, ಕ್ಯಾಮರೂನ್‌ ಗ್ರೀನ್‌, ಮಾರ್ಕಸ್‌ ಹ್ಯಾರಿಸ್‌, ಜೋಶ್‌ ಹೇಝಲ್‌ವುಡ್‌, ಟ್ರ್ಯಾವಿಸ್‌ ಹೆಡ್‌, ಉಸ್ಮಾನ್‌ ಖ್ವಾಜಾ, ಮಾರ್ನಸ್‌ ಲಬುಶೇನ್‌, ನಥನ್‌ ಲಿಯೋನ್‌, ಸ್ಟೀವ್‌ ಸ್ಮಿತ್‌, ಮಿಚೆಲ್‌ ಸ್ಟಾರ್ಕ್‌, ಡೇವಿಡ್‌ ವಾರ್ನರ್‌, ಮೈಕಲ್‌ ನೇಸರ್‌, ಲ್ಯಾನ್ಸ್‌ ಮಾರಿಸ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next