Advertisement

ಶಿವಾಜಿ ವಿರೋಧಿಸುವವರಿಗೆ ಉಳಿಗಾಲವಿಲ್ಲ: ಸಿದ್ದು ಸವದಿ

05:18 PM Feb 22, 2022 | Team Udayavani |

ಮಹಾಲಿಂಗಪುರ: ದೇಶದ ಧರ್ಮ, ಸಂಸ್ಕೃತಿ, ಇತಿಹಾಸ ಉಳಿಸಿದ್ದ ಜಾತ್ಯತೀತ ನಾಯಕ ಛತ್ರಪತಿ ಶಿವಾಜಿ ಮಹಾರಾಜರು ಎಂದು ಶಾಸಕ ಸಿದ್ದು ಸವದಿ ಹೇಳಿದರು. ಮರಾಠಾ ಸಮಾಜದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಸಮುದಾಯ ಭವನದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಶಿವಾಜಿ ಮಹಾರಾಜರ ಜಯಂತಿಗೂ ಅಡ್ಡಿಪಡಿಸಲಾಗುತ್ತಿದೆ.

Advertisement

ಹಿಂದೂ ದೇಶದಲ್ಲಿ ಹಿಂದೂಗಳಿಗೆ ಸ್ವತಂತ್ರ ಇಲ್ಲ. ನಮ್ಮವರೇ ನಮ್ಮನ್ನು ತಡೆಯುತ್ತಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಹಿಂದೂಗಳಿಗೆ ಉಳಿಗಾಲವಿಲ್ಲ. ಶಿವಾಜಿ ಹುಟ್ಟದಿದ್ದರೆ ನಾವ್ಯಾರು ಹಿಂದೂಗಳಾಗಿ ಉಳಿಯುತ್ತಿರಲಿಲ್ಲ. ಶಿವಾಜಿಯನ್ನು ವಿರೋಧಿಸುವವರಿಗೆ ಉಳಿಗಾಲವಿಲ್ಲ. ಎಲ್ಲರೂ ಒಂದಾಗಿ ಹಿಂದೂ ಸಮಾಜ ಉಳಿಸಬೇಕಾಗಿದೆ. ಧರ್ಮ ರಕ್ಷಣೆ ಮಾಡಬೇಕಾಗಿದೆ ಎಂದರು.

ಸಚಿವ ಈಶ್ವರಪ್ಪ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಪ್ರತಿಭಟನೆ ಮಾಡುತ್ತಾ ಇದ್ದಾರೆ. ದ್ರೋಹಿಗಳು ರಾಷ್ಟ್ರಧ್ವಜ ಸುಡುವಾಗ ಕಾಂಗ್ರೆಸ್‌ ಧ್ವನಿ ಬರಲಿಲ್ಲ. ಲಾಲ ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸಲಿಕ್ಕೆ ನೀವು ಹೋಗಲಿಲ್ಲ ಎಂದ ಅವರು, ತ್ರಿವರ್ಣ ಧ್ವಜ ಮತ್ತು ಕೇಸರಿ ಧ್ವಜ ಎರಡೂ ನಮಗೆ ಪವಿತ್ರವಾದ ಧ್ವಜಗಳೇ.ನಾವು ಯಾವುದಕ್ಕೂ ಭೇದ ಭಾವ ಮಾಡುವುದಿಲ್ಲ ಎಂದರು.

ಕೆಪಿಸಿಸಿ ರಾಜ್ಯ ಕಿಸಾನ್‌ ಘಟಕದ ಸಂಚಾಲಕ ಡಾ| ಪದ್ಮಜೀತ ನಾಡಗೌಡ ಮಾತನಾಡಿ, ಛಪತ್ರಪತಿ ಶಿವಾಜಿ ಮಹಾರಾಜರು ಕೇವಲ ಹಿಂದೂ ಧರ್ಮಕ್ಕೆ ಮೀಸಲಾಗಿರಲಿಲ್ಲ. ಹಿಂದೂ-ಮುಸ್ಲಿಂರನ್ನು ಸಮಾನವಾಗಿ ಕಾಣುತ್ತಿದ್ದರು. ಅವರು ಎಲ್ಲ ಧರ್ಮದವರಿಗೂ ಸಮಾನ ಅವಕಾಶ ನೀಡಿದ್ದರು. ಧಾರ್ಮಿಕ ಸಹಿಷ್ಣು ಆಗಿದ್ದರು. ಶಿವಾಜಿ ಸೈನ್ಯದಲ್ಲಿ ಶೇ. 30ರಷ್ಟು ಮುಸ್ಲಿಮರು ಇದ್ದರು ಎಂದರು. ಪುರಸಭೆ ಅಧ್ಯಕ್ಷೆ ಸ್ನೇಹಲ್‌ ಅಂಗಡಿ ಮಾತನಾಡಿದರು.

ಶಾಸಕ ಸಿದ್ದು ಸವದಿ, ಪುರಸಭೆ ಅಧ್ಯಕ್ಷೆ ಸ್ನೇಹಲ್‌ ಅಂಗಡಿ, ಬಿಜೆಪಿ ಮುಖಂಡರಾದ ಚನ್ನಪ್ಪ ಪಟ್ಟಣಶೆಟ್ಟಿ, ರಾಜು ಚಮಕೇರಿ, ರವಿ ಜವಳಗಿ, ಮಹೇಶ ಜಾಧವ, ಶಂಕರಗೌಡ ಪಾಟೀಲ, ಅರ್ಜುನಗೌಡ ಪಾಟೀಲ, ಚನಬಸು ಯರಗಟ್ಟಿ, ವಿರೂಪಾಕ್ಷಿ ಬಾಟ, ಈರಪ್ಪ ಚುನಮುರಿ, ಹಣಮಂತ ಯರಗಟ್ಟಿ, ಅರ್ಜುನ ಮೋಪಗಾರ ಅವರನ್ನು ಸನ್ಮಾನಿಸಲಾಯಿತು.

Advertisement

ಪ್ರಮುಖರಾದ ಸುರೇಶ ಸಿಂಧೆ, ರಾಮಚಂದ್ರ ಪವಾರ, ಸುರೇಶ ಜಾಧವ, ನಟರಾಜ ಸಬಕಾಳೆ, ರಮೇಶ ಪವಾರ, ಮಹಾದೇವ ಸಾವಂತ, ಮುಕುಂದ ಮೇಂಗಾಣಿ, ಆನಂದ ಪವಾರ, ಶಿವಾಜಿ ಜಾಧವ, ಅಪ್ಪಾಸಿ ಮೇಂಗಾಣಿ, ಗೋಪಾಲ ಪವಾರ, ಭೀಮಸಿ ಮೋಪಗಾರ, ಅರ್ಜುನ ಮೋಪಗಾರ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next