Advertisement
ಚುನಾಯಿತರಾದ ನಂತರ ಪ್ರಥಮವಾಗಿ ತಾಲೂಕಿನ ಹನಗೋಡು ಹೋಬಳಿಯ ದೊಡ್ಡಹೆಜ್ಜೂರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮತದಾರರಿಗೆ ಹಾಗೂ ತಮ್ಮ ಗೆಲುವಿಗಾಗಿ ದುಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿ ಚುನಾವಣೆಯಲ್ಲಿ ಜನಬಲವೇ ಪ್ರಮುಖ ಪಾತ್ರವಹಿಸುತ್ತದೆ. ನನ್ನ ಅವಧಿಯಲ್ಲಿ ತಮ್ಮ ತಂದೆ ಜಿ.ಟಿ.ದೇವೇಗೌಡರಂತೆ ಜನಪರ, ಅಭಿವೃದ್ಧಿಪರ ಆಡಳಿತ ನೀಡುತ್ತೇನೆ. ತಾಲೂಕು ಮಟ್ಟದ ಅಧಿಕಾರಿಗಳು ಬಡವರ ಪರವಾಗಿ ಪ್ರಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಇಲ್ಲದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ನಿರ್ದಾಕ್ಷö್ಯಣ್ಯ ಕ್ರಮ ಯಾರಂಟಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಕೊಳುವಿಗೆಯಲ್ಲಿ ಗ್ರಾಮಸ್ಥರು ಪಟ್ಲದಮ್ಮ ದೇವಸ್ಥಾನ ರಸ್ತೆ, ಕೊಳವಿಗೆ-ಹನಗೋಡು ಮುಖ್ಯ ರಸ್ತೆ ಹಾಗೂ ಕಾಲುವೆ ಏರಿ ರಸ್ತೆ ಅಭಿವೃದ್ದಿಪಡಿಸಬೇಕು. ಗ್ರಾಮದೊಳಗಿರುವ ಜಮೀನು ರಸ್ತೆ ಒತ್ತುವರಿ ತೆರವುಗೊಳಿಸಬೇಕು, ಕೋಣನಹೊಸಳ್ಳಿಗೆ ಬಸ್ ಕಲ್ಪಿಸಿಕೊಡಬೇಕೆಂಬ ಗ್ರಾಮಸ್ಥರ ಮನವಿಗೆ ತಮ್ಮ ಮೊದಲ ಅನುದಾನದಲ್ಲಿಯೇ ಕೊಳವಿಗೆ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು, ಇದಲ್ಲದೆ ಜಮೀನು ರಸ್ತೆಗಳು, ರೈತರ ಜಮೀನಿಗೆ ತೆರಳುವ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗುವುದೆಂದರು.
Related Articles
ಶಾಸಕರು ಚಿಕ್ಕಹೆಜ್ಜೂರು, ಕೋಣನಹೊಸಹಳ್ಳಿ, ಕೊಳವಿಗೆ ಹಾಡಿ, ಚಿಕ್ಕಹೆಜ್ಜೂರು ಹಾಡಿ, ಕಪ್ಪನಕಟ್ಟೆಹಾಡಿ,ವೀರನಹೊಸಹಳ್ಳಿ, ಭಾರತವಾಡಿ, ಭಾರತವಾಡಿ ಹಾಡಿ,ವೀರನಹೊಸಹಳ್ಳಿ ಹಾಡಿ ಗ್ರಾಮಗಳಿಗೆ ಭೇಟಿ ಇತ್ತು, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಎಲ್ಲೆಡೆ ನೂತನ ಶಾಸಕ ಹರೀಶ್ ಗೌಡರನ್ನು ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿದರು.
Advertisement
ಈ ವೇಳೆ ದೊಡ್ಡಹೆಜ್ಜೂರು ಗ್ರಾಂ.ಪಂ.ಅಧ್ಯಕ್ಷ ಸುಭಾಷ್, ಮಾಜಿ ಅಧ್ಯಕ್ಷ ದಾ.ರಾ.ಮಹೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರುಬಸವರಾಜ್, ಸೊಸೈಟಿ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಬೀರಪ್ಪ, ಜಿ.ಪಂ.ಮಾಜಿ ಸದಸ್ಯ ಕಟ್ಟನಾಯ್ಕ, ಮುಖಂಡರಾದ ಕೆಂಪೇಗೌಡ, ರಾಜೇಗೌಡ, ವೆಂಕಟೇಶ್, ನಟರಾಜ್, ನಾಗೇಶ್, ರವಿ, ಹರೀಶ್, ಪಾರೆಕುಮಾರ್ ಮತ್ತಿತರರು ಹಾಜರಿದ್ದರು.