Advertisement

ಕಾಲೇಜು ಅಧ್ಯಾಪಕರ ಭಡ್ತಿಗೆ ಸಂಶೋಧನೆ ಅಗತ್ಯವಿಲ್ಲ

08:30 AM Jul 31, 2017 | Team Udayavani |

ಹೊಸದಿಲ್ಲಿ: ಕಾಲೇಜು ಅಧ್ಯಾಪಕರ ಭಡ್ತಿಗೆ ಸಂಶೋಧನೆ ಭಾಗೀದಾರಿಕೆ ಅಗತ್ಯ ಎಂಬ ಈಗಿನ ಪದ್ಧತಿಗೆ ಕೇಂದ್ರ ಸರಕಾರ ತಿಲಾಂಜಲಿ ನೀಡಲಿದೆ. ಅದರ ಬದಲಿಗೆ, ಅವರು ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಸಾಮುದಾಯಿಕ ಚಟುವಟಿಕೆಗಳಲ್ಲಿ ಭಾಗಿಗಳಾಗಿರಬೇಕು ಎಂದು ಹೇಳಿದೆ. 

Advertisement

ಈ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಶನಿವಾರ ನಡೆದ ಉನ್ನತ ಶಿಕ್ಷಣ ಕುರಿತ ವಿಚಾರ ಸಂಕಿರಣದಲ್ಲಿ ಘೋಷಿಸಿದ್ದಾರೆ. ಶೀಘ್ರ ಈ ಬಗ್ಗೆ ಅಧಿಸೂಚನೆ ಪ್ರಕಟಿಸಲಾಗುವುದು ಎಂದಿದ್ದಾರೆ. “ಇದುವರೆಗೆ ಭಡ್ತಿಗೆ ಸಂಶೋಧನೆ ನಡೆಸುವುದು ಕಡ್ಡಾಯ ಎಂದಿತ್ತು. ಆದರೆ ಇದನ್ನು ಬದಲು ಮಾಡಿ ಅಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ವಿವಿಧ ಸಾಮುದಾಯಿಕ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅಗತ್ಯ ಎಂದು ಮಾಡಲಾಗುತ್ತದೆ. ಅದರಲ್ಲಿನ ಅಂಕಗಳನ್ನು ಆಧರಿಸಿ ಭಡ್ತಿ ನೀಡಬಹುದು’ ಎಂದಿದ್ದಾರೆ. “ಕಾಲೇಜು ಅಧ್ಯಾಪಕರು ಹೆಚ್ಚಾಗಿ ಬೋಧನೆಯಲ್ಲೇ ತೊಡಗಿದ್ದರೆ, ವಿವಿ ಅಧ್ಯಾಪಕರು ಹಾಗಲ್ಲ. ಭಡ್ತಿಗೆ ಸಂಶೋಧನೆ ಕಡ್ಡಾಯ ಎಂದರೆ, ಅದರ ಗುಣಮಟ್ಟ ಕುಸಿಯುತ್ತದೆ’ ಎಂದಿದ್ದಾರೆ ಜಾವಡೇಕರ್‌.

Advertisement

Udayavani is now on Telegram. Click here to join our channel and stay updated with the latest news.

Next