Advertisement
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಕುಮಾರಸ್ವಾಮಿ ರೀತಿಯಲ್ಲಿ ಯಡಿಯೂಪ್ಪ ಪಕ್ಷ ಕಟ್ಟಿಲ್ಲ. ಅವರ ತಂದೆ ಆಶೀರ್ವಾದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ ಎಂದು ಟೀಕಿಸಿದರು.
Related Articles
Advertisement
ಹೊಸ ತಾಂತ್ರಿಕ ವಿವಿ ಕೈಬಿಡಿ: ಬೆಳಗಾವಿಯಲ್ಲಿ ರಾಜ್ಯ ಮಟ್ಟದ ತಾಂತ್ರಿಕ ವಿಶ್ವವಿದ್ಯಾಲಯವಿದ್ದರೂ ಹಾಸನದಲ್ಲಿ ಮತ್ತೂಂದು ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪಿಸುವ ಅವಶ್ಯಕತೆ ಏನಿದೆ? ಈಗಾಗಲೇ ಇಂಜಿನಿಯರ್ ಸೀಟುಗಳು ಖಾಲಿ ಇವೆ. ಹೊಸ ತಾಂತ್ರಿಕ ವಿವಿ ಘೋಷಣೆ ಮಾಡಿದ್ದು ಎಷ್ಟು ಸರಿ? ಅಲ್ಲಿ ಏನಾದರೂ ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಕುಲಪತಿ ಆಗಬೇಕಿದೆಯೇ? ಇಲ್ಲ ವಿಶ್ವವಿದ್ಯಾಲಯ ಹೆಸರಲ್ಲಿ ಮತ್ತೂಂದು ಆಸ್ತಿ ಕೊಳ್ಳೆಹೊಡೆಯವ ಹುನ್ನಾರವಿದೆಯೇ? ಕೂಡಲೇ ಹಾಸನ ತಾಂತ್ರಿಕ ವಿವಿಯನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.
ಮತ್ತೂಮ್ಮೆ ಮೋದಿ ಸಂಕಲ್ಪ: ಕೇಂದ್ರದಲ್ಲಿ ಮತ್ತೂಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ನರೇಂದ್ರ ಮೋದಿ ಅವರೇ ಮತ್ತೂಮ್ಮೆ ಪ್ರಧಾನಿ ಆಗಬೇಕೆಂಬ ಸಂಕಲ್ಪದೊಂದಿಗೆ ಫೆ.11ರಿಂದ ದೇಶಾದ್ಯಂತ ಬಿಜೆಪಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಮರ್ಪಣಾ ದಿನ: ಬಿಜೆಪಿಗೆ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ದೇಶಾದ್ಯಂತ ಫೆ.11ರಂದು ಸಮರ್ಪಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂದು ಪಕ್ಷದ ಕಾರ್ಯಕರ್ತರು, ನಾಯಕರು, ಬೆಂಬಲಿಗರು ಯಾರೇ ಆದರೂ 5ರಿಂದ 1,000 ರೂ. ವರೆಗೆ ಮೋದಿ ಆ್ಯಪ್ ಇಲ್ಲವೇ, ಚೆಕ್ ಮೂಲಕ ದೇಣಿಗೆ ಕಳುಹಿಸಬಹುದಾಗಿದೆ.
ಧ್ವಜ ಹಾರಾಟ ದಿನ: ಫೆ.12ರಂದು ಬೆಳಗ್ಗೆ 9 ಗಂಟೆಗೆ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಎಲ್ಲರೂ ತಮ್ಮ ಮನೆಗಳು ಹಾಗೂ ಬೂತ್ ಮಟ್ಟದ ಕಚೇರಿಗಳ ಮೇಲೆ ಬಿಜೆಪಿ ಧ್ವಜ ಹರಿಸುವ ಮೂಲಕ ಮೋದಿ ಅವರನ್ನು, ಮೋದಿ ಸರ್ಕಾರವನ್ನು ಮತ್ತೂಮ್ಮೆ ಸ್ಥಾಪಿಸಲು ಸಂಕಲ್ಪ ಮಾಡಲಾಗುವುದು.
ಕಮಲ ಜ್ಯೋತಿ: ಫೆ.26ರಂದು ಸಂಜೆ 7 ಗಂಟೆಗೆ ಎಲ್ಲ ಕಾರ್ಯಕರ್ತರು ತಮ್ಮ-ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಕಮಲ ಜ್ಯೋತಿ ಹಚ್ಚಲಾಗುವುದು.
ಗಿನ್ನಿಸ್ ದಾಖಲೆಯ ಬೈಕ್ ರ್ಯಾಲಿ: ಮಾ.2ರಂದು ದೇಶಾದ್ಯಂತ ಬೈಕ್ ರ್ಯಾಲಿ ನಡೆಸಲಾಗುವುದು. ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ 1,000ದಿಂದ 1,500 ಬೈಕ್‌ಗಳು ರ್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದು ಗಿನ್ನಿಸ್ ದಾಖಲೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮಡು, ಎಂಎಲ್‌ಸಿ, ಬಿಜೆಪಿ ನಗರಾಧ್ಯಕ್ಷ ಬಿ.ಜಿ. ಪಾಟೀಲ, ಬಿಜೆಪಿ ರಾಜ್ಯ ಸಹ ವಕ್ತಾರ ಶಶೀಲ ನಮೋಶಿ, ಮುಖಂಡರಾದ ಸುಭಾಷ ರಾಠೊಡ, ರಾಜು ವಾಡೇಕರ್, ವಿಜಯಕುಮಾರ ಹಳಕಟ್ಟಿ, ದಯಾಘನ ಧಾರವಾಡಕರ್ ಹಾಗೂ ಮತ್ತಿತರರು ಇದ್ದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ. ಕಲಬುರಗಿಯಲ್ಲಿ ಕಮಲ ಅರಳುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಲ್ಲಿ ಅಭ್ಯರ್ಥಿಗಳಿಗೆ ಬರವಿಲ್ಲ. ಸಾಕಷ್ಟು ಜನರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಯುವ ಅಭ್ಯರ್ಥಿಯನ್ನು ಪಕ್ಷದ ಹೈಕಮಾಂಡ್ ಆಯ್ಕೆ ಮಾಡುತ್ತದೆ. ಸ್ವಲ್ಪ ದಿನ ತಾಳಿದರೆ ಅಭ್ಯರ್ಥಿ ಗೊತ್ತಾಗಲಿದ್ದಾರೆ ಎಂದಷ್ಟೇ ಹೇಳಿದರು.
ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಆಡಳಿತ ಬಗ್ಗೆ ಕಾಂಗ್ರೆಸ್ ಶಾಸಕರಿಗೆ ಅಸಮಾಧಾನವಿದೆ. 20 ಹೆಚ್ಚು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ನಾವು ಯಾವುದೇ ಕಾಂಗ್ರೆಸ್ ಶಾಸಕರನ್ನು ಹೈಜಾಕ್ ಮಾಡಿಲ್ಲ. ಸದ್ಯಕ್ಕೆ ನಾವು ಕಾಯ್ದು ನೋಡುವ ತಂತ್ರಕ್ಕೆ ಶರಣಾಗಿದ್ದೇವೆ ಎಂದರು.
ಮಾ.1ಕ್ಕೆ ಪ್ರಧಾನಿ ಮೋದಿ ಆಗಮನ: ಪ್ರಧಾನಿ ನರೇಂದ್ರ ಮೋದಿ ಮಾ. 1ರಂದು ಕಲಬುರಗಿಗೆ ಬರಲಿದ್ದಾರೆ. ಫೆ.17 ಇಲ್ಲವೇ, 19ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ ಬರಬೇಕಿತ್ತು. ಆದರೆ, ವೇಳಾಪಟ್ಟಿಯಲ್ಲಿ ಮಾರ್ಪಾಡು ಆಗಿದೆ ಎಂದು ರವಿಕುಮಾರ ತಿಳಿಸಿದರು.
ಮಲ್ಲಿಕಾರ್ಜುನಖರ್ಗೆ ವಿರುದ್ಧ ಗೆಲುವು ಖಚಿತಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ. ಕಲಬುರಗಿಯಲ್ಲಿ ಕಮಲ ಅರಳುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಲ್ಲಿ ಅಭ್ಯರ್ಥಿಗಳಿಗೆ ಬರವಿಲ್ಲ. ಸಾಕಷ್ಟು ಜನರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಯುವ ಅಭ್ಯರ್ಥಿಯನ್ನು ಪಕ್ಷದ ಹೈಕಮಾಂಡ್ ಆಯ್ಕೆ ಮಾಡುತ್ತದೆ. ಸ್ವಲ್ಪ ದಿನ ತಾಳಿದರೆ ಅಭ್ಯರ್ಥಿ ಗೊತ್ತಾಗಲಿದ್ದಾರೆ ಎಂದಷ್ಟೇ ಹೇಳಿದರು. ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಆಡಳಿತ ಬಗ್ಗೆ ಕಾಂಗ್ರೆಸ್ ಶಾಸಕರಿಗೆ ಅಸಮಾಧಾನವಿದೆ. 20 ಹೆಚ್ಚು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ನಾವು ಯಾವುದೇ ಕಾಂಗ್ರೆಸ್ ಶಾಸಕರನ್ನು ಹೈಜಾಕ್ ಮಾಡಿಲ್ಲ. ಸದ್ಯಕ್ಕೆ ನಾವು ಕಾಯ್ದು ನೋಡುವ ತಂತ್ರಕ್ಕೆ ಶರಣಾಗಿದ್ದೇವೆ ಎಂದರು. ಮಾ.1ಕ್ಕೆ ಪ್ರಧಾನಿ ಮೋದಿ ಆಗಮನ: ಪ್ರಧಾನಿ ನರೇಂದ್ರ ಮೋದಿ ಮಾ. 1ರಂದು ಕಲಬುರಗಿಗೆ ಬರಲಿದ್ದಾರೆ. ಫೆ.17 ಇಲ್ಲವೇ, 19ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ ಬರಬೇಕಿತ್ತು. ಆದರೆ, ವೇಳಾಪಟ್ಟಿಯಲ್ಲಿ ಮಾರ್ಪಾಡು ಆಗಿದೆ ಎಂದು ರವಿಕುಮಾರ ತಿಳಿಸಿದರು.