Advertisement

ಗುರುವಾಯೂರು “ಕೊಡತಿ ವಿಳಕ್ಕು’ಕಾರ್ಯಕ್ರಮಕ್ಕೆ ಕೋರ್ಟ್‌ ತಕರಾರು

08:05 PM Nov 02, 2022 | Team Udayavani |

ತಿರುವನಂತಪುರ: ಖ್ಯಾತ ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ವಾರ್ಷಿಕವಾಗಿ ಆಚರಿಸುವ “ಕೊಡತಿ ವಿಳಕ್ಕು'(ನ್ಯಾಯಾಲಯದ ಬೆಳಕು) ಕಾರ್ಯಕ್ರಮದ ಆಯೋಜನೆಯಲ್ಲಿ ಸಕ್ರಿಯವಾಗಿ ತೊಡಗದಂತೆ ಜಿಲ್ಲಾ ನ್ಯಾಯಾಂಗ ಅಧಿಕಾರಿಗಳಿಗೆ ಕೇರಳ ಹೈಕೋರ್ಟ್‌ ಅಧಿಕೃತವಾಗಿ ನೋಟಿಸ್‌ ನೀಡಿದೆ.

Advertisement

ಚಾವಕ್ಕಾಡ್‌ ಮುನ್ಸಿಫ್ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಸದಸ್ಯರು ಒಳಗೊಂಡ ಸಮಿತಿಯು ವಾರ್ಷಿಕವಾಗಿ ಗುರುವಾಯೂರು ದೇಗುಲದಲ್ಲಿ “ಕೊಡತಿ ವಿಳಕ್ಕು’ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೈಕೋರ್ಟ್‌, “ಬಾರ್‌ ಅಸೋಸಿಯೇಷನ್‌ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲು ನಮಗೆ ಯಾವುದೇ ತಕರಾರಿಲ್ಲ. ಆದರೆ ಕಾರ್ಯಕ್ರಮದ ಹೆಸರು “ಕೊಡತಿ ವಿಳಕ್ಕು’ (ನ್ಯಾಯಾಲಯದ ಬೆಳಕು) ಎಂದು ಇರುವುದು ಸ್ವೀಕಾರಾರ್ಹವಲ್ಲ. ಇದು ರಾಜ್ಯದ ನ್ಯಾಯಾಲಯಗಳು ಕಾರ್ಯಕ್ರಮದ ಸಂಘಟನೆಯೊಂದಿಗೆ ಕೆಲವು ರೀತಿಯಲ್ಲಿ ಸಂಪರ್ಕ ಹೊಂದಿವೆ ಎಂಬ ಅಭಿಪ್ರಾಯ ಬರುವಂತೆ ಮಾಡುತ್ತದೆ,’ ಎಂದು ಹೇಳಿದೆ.

“ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಜಾತ್ಯಾತೀತ ಪ್ರಜಾಸತ್ತತ್ಮಕ ಸಂಸ್ಥೆಯಾದ ನ್ಯಾಯಾಲಯಗಳು ಯಾವುದೇ ನಿರ್ದಿಷ್ಟ ಧರ್ಮವನ್ನು ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಲು ಆಗುವುದಿಲ್ಲ,’ ಎಂದು ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next