ದಾವಣಗೆರೆ: ಮನೆಗಳ ಬಳಿಯೇ ಬಾರ್ ಆ್ಯಂಡ್ ರೆಸ್ಟೋರಂಟ್ ತೆರೆಯಲು ಮುಂದಾಗುವುತ್ತಿರುವುದನ್ನ ವಿರೋಧಿಸಿ, ಬುಧವಾರ ನಗರದ ಸಿದ್ಧವೀರಪ್ಪ ಬಡಾವಣೆ ನಿವಾಸಿಗಳು ಪ್ರತಿಭಟಿಸಿದ್ದಾರೆ.
ಸಿದ್ದವೀರಪ್ಪ ಬಡಾವಣೆ 10ನೇ ಕ್ರಾಸ್‌ನ ಪ್ರವೇಶದಲ್ಲಿರುವ ಚಂದನ್ ಫ್ಯಾಮಿಲಿ ರೆಸ್ಟೋರಂಟ್‌ನಲ್ಲಿ ಬಾರ್ ತೆರೆಯಲು ಸಿದ್ದತೆ ನಡೆಯುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ಈ ಭಾಗದಲ್ಲಿ ಬಾರ್ ಆ್ಯಂಡ್ ರೆಸ್ಟೋರಂಟ್ ತೆರೆದರೆ ಮಹಿಳೆಯರು ಸಂಚರಿಸುವುದೇ ದುಸ್ತರವಾಗಲಿದೆ. ಯಾವುದೇ ಕಾರಣಕ್ಕೂ ಬಾರ್ ಪ್ರಾರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸಿದ್ದವೀರಪ್ಪ ಬಡಾವಣೆಯ ಎಲ್ಲಾ ಮುಖ್ಯ ರಸ್ತೆಗಳು ಶಾಮನೂರು ರಸ್ತೆ ಸೇರುತ್ತಿದ್ದು, ತಮ್ಮ ಮನೆಗಳಿಗೆ ಹೋಗಲು ನಿವಾಸಿಗಳು ಶಾಮನೂರು ರಸ್ತೆಯಲ್ಲೇ ಸಂಚರಿಸಬೇಕಿದೆ. ಶಾಮನೂರು ರಸ್ತೆಯಲ್ಲಿ ಈಗಾಗಲೇ ಹೆಜ್ಜೆ ಹೆಜ್ಜೆಗೂ ಬಾರ್ ಆ್ಯಂಡ್ ರೆಸ್ಟೋರಂಟ್‌ಗಳಿದ್ದು, ಅವುಗಳಿಂದಲೇ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಆಗಿದೆ. ಈಗ ಮತ್ತೂಂದು ಆರಂಭವಾದಲ್ಲಿ ಮತ್ತಷ್ಟು ಸಮಸ್ಯೆ ಉಂಟಾಗಲಿದೆ. ಹಾಗಾಗಿ ಬಾರ್ ಆ್ಯಂಡ್ ರೆಸ್ಟೋರಂಟ್‌ಗೆ ಅನುಮತಿ ನೀಡಬಾರದೆಂದು ಸಾರ್ವಜನಿಕರು ಆಗ್ರಹಿಸಿದರು. ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಬಾರ್‌ಗಳ ವಹಿವಾಟಿಗೆ ಈ ಪ್ರದೇಶದಲ್ಲಿ ಅನುಮತಿ ನೀಡಿದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ನಿವಾಸಿಗಳು ಎಚ್ಚರಿಸಿದರು.
ಸಿದ್ದವೀರಪ್ಪ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಾರ್ಡ್ ಸದಸ್ಯ ಲಿಂಗರಾಜ್ ಇತರರು ಭಾಗವಹಿಸಿದ್ದರು. ಇತ್ತೀಚೆಗೆ ನಗರದ ಮಧ್ಯ ಭಾಗ, ಅದೂ ಅಲ್ಲದೇ ಮಹಿಳೆಯರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಸದಾ ಸಂಚರಿಸುವ ಪ್ರದೇಶದಲ್ಲಿ ಬಾರ್ ಆ್ಯಂಡ್ ರೆಸ್ಟೋರಂಟ್‌ಗೆ ಅನುಮತಿ ನೀಡುತ್ತಿರುವುದನ್ನು ಖಂಡಿಸಿ, ಸಾರ್ವಜನಿಕರು ಬೀದಿಗಿಳಿದು ಹೋರಾಟ ಮಾಡಬೇಕಾದ
ಪರಿಸ್ಥಿತಿ ಉಂಟಾಗುತ್ತಿದೆ. ಪಾರ್ಕ್, ಸಮೀಪವೇ ಶಾಲೆ, ದೇವಸ್ಥಾನ ಇರುವ ಪ್ರದೇಶದಲ್ಲೇ ಬಾರ್ ಆ್ಯಂಡ್ ರೆಸ್ಟೋರಂಟ್ ತೆರೆಯಲು ಮುಂದಾಗಿದ್ದನ್ನು ವಿರೋಧಿಸಿ, ಸಾರ್ವಜನಿಕರು, ಸಂಘ-ಸಂಸ್ಥೆಯವರು ಪ್ರತಿಭಟಿಸಿದ ಬಳಿಕ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು, ಅನುಮತಿ ರದ್ದುಪಡಿಸಿದ, ಮಧ್ಯೆ ಈಗ ಮತ್ತೂಂದು ಕಡೆ ಅನುಮತಿ ನೀಡಲು ಮುಂದಾಗಿರುವುದು ನಾಗರಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.