Advertisement

ಕಾಮಗಾರಿ ಮುಗಿಸಲು ಕುಂಟುನೆಪ ಬೇಡ

03:32 PM Mar 31, 2021 | Team Udayavani |

ಕೋಲಾರ: ಹೊಸಕೋಟೆಯಿಂದಬಂಗಾರಪೇಟೆ ಮಾರ್ಗವಾಗಿ ವಿ.ಕೋಟೆತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಆರಂಭಕ್ಕೆ ಇರುವ ಅಡೆತಡೆ ನಿವಾರಿಸಿ,ಅವರಿವರ ಮೇಲೆ ನೆಪ ಹೇಳುವುದನ್ನು ಬಿಟ್ಟುಕೂಡಲೇ ಕಾಮಗಾರಿ ಮುಗಿಸಿ ಎಂದುಕೆಜಿಎಫ್‌ ಶಾಸಕಿ ರೂಪ ಶಶಿಧರ್‌ ತಾಕೀತುಮಾಡಿದರು.

Advertisement

ನಗರದ ಪ್ರಾದೇಶಿಕ ಅರಣ್ಯ ವಿಭಾಗದಕಚೇರಿಯಲ್ಲಿ ಮಂಗಳವಾರ ನಡೆದಲೋಕೋಪಯೋಗಿ, ಹೆದ್ದಾರಿ ಪ್ರಾಧಿಕಾರ,ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿಅಧಿ ಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿ,ವಿಳಂಬ ಮಾಡಿದರೆ ಏನು ಮಾಡಬೇಕುಎಂದು ನನಗೆ ಗೊತ್ತಿದೆ ಎಂದು ಎಚ್ಚರಿಸಿದರು.

ಕಾಮಗಾರಿ ಆರಂಭಿಸದಿದ್ದರೆ ಸಹಿಸಲ್ಲ:ಹೆದ್ದಾರಿ ನಿರ್ಮಾಣಕ್ಕೆ ಅನೇಕ ಸಮಸ್ಯೆಗಳುಎದುರಾಗಿವೆ. ಅದನ್ನು ಹಾಗೆ ಬಿಟ್ಟರೆಅನುದಾನ ವಾಪಸ್‌ ಹೋಗುತ್ತದೆ.

ಅನುದಾನ ತರಲು ಎಷ್ಟು ಕಷ್ಟ ಎಂಬ ಅರಿವುಇರಲಿ. ಪರಿಸ್ಥಿತಿಯನ್ನು ಗಂಭೀರವಾಗಿಪರಿಗಣಿಸಿ, ಇಲಾಖಾ ಧಿಕಾರಿಗಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ, ನೀವುಕಾಮಗಾರಿ ಆರಂಭಿಸದಿದ್ದರೆ ಸಹಿಸಲುಸಾಧ್ಯವಿಲ್ಲ ಎಂದು ಗರಂ ಆದರು.ಅರಣ್ಯ, ಲೋಕೋಪಯೋಗಿ ಇಲಾಖೆಗಳಅಧಿಕಾರಿಗಳು ಪರಸ್ಪರ ಸಮನ್ವಯತೆಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯ. ಎರಡೂಇಲಾಖೆಗಳು ಸರ್ಕಾರದ ವೇತನಪಡೆಯುತ್ತಿದ್ದೀರಿ, ಮರಗಳ ಕಟಾವು ವಿಳಂಬಎಂದು ಇವರು, ಮರಗಳಿಗೆ ಉತ್ತಮ ಬೆಲೆಸಿಗುತ್ತಿಲ್ಲ ಎಂದು ಅರಣ್ಯ ಇಲಾಖೆಯವರುಸಬೂಬು ಹೇಳಿಕೊಂಡು ಅನುದಾನವಾಪಸ್ಸಾದರೆ ಖಂಡಿತಾ ಸುಮ್ಮನೆ ಬಿಡುವುದಿಲ್ಲಎಂದು ಎಚ್ಚರಿಸಿದರು.

25 ಕಿಮೀ ರಸ್ತೆಗೆ 50 ಕೋಟಿ ಅನುದಾನ:ಕೇಂದ್ರದಿಂದ ಸಿಎಸ್‌ಆರ್‌ ಯೋಜನೆಯಡಿಹೊಸಕೋಟೆಯಿಂದ ಬಂಗಾರಪೇಟೆಮಾರ್ಗವಾಗಿ ವಿ.ಕೋಟೆ ತನಕ ಹೆದ್ದಾರಿನಿರ್ಮಾಣಕ್ಕೆ 2016-17ನೇ ಸಾಲಿನಲ್ಲಿಅನುಮೋದನೆ ದೊರೆತಿದೆ. 25 ಕಿಮಿ ರಸ್ತೆನಿರ್ಮಾಣಕ್ಕೆ ಈಗಾಗಲೇ 50 ಕೋಟಿಅನುದಾನ ಬಿಡುಗಡೆಯಾಗಿದೆ, ಇದರಗುತ್ತಿಗೆದಾರರು ಗುಜರಾತ್‌ಮೂಲದವರಾಗಿದ್ದಾರೆ. ಅವರಿಗೆ ಸ್ಥಳಿಯಸಮಸ್ಯೆಗಳ ಬಗ್ಗೆ ಅರಿವು ಇಲ್ಲದ ಕಾರಣಕಾಮಗಾರಿ ಸ್ಥಗಿತಗೊಂಡಿದೆ ಎಂದರು.

Advertisement

428 ಮರ ತೆರವಿಗೆ ಇಲಾಖೆ ಕುಂಟುನೆಪ:ಅರಣ್ಯ ಇಲಾಖೆ ಉಪ ಸಂರಕ್ಷಣಾಧಿ ಕಾರಿ ಈ.ಶಿವಶಂಕರ್‌ ಮಾತನಾಡಿ, ಇಲಾಖೆ ವ್ಯಾಪಿಗೆ428 ಮರಗಳು ಒಳಪಡುತ್ತವೆ. ಅವುಗಳನ್ನುತೆರವುಗೊಳಿಸಲು ಟೆಂಡರ್‌ ಕರೆದು ಕ್ರಮಕೈಗೊಳ್ಳಲಾಗುವುದು. ಗುತ್ತಿಗೆದಾರರುಮರಗಳು ಬೆಲೆ ಬಾಳುವ ದರ ಪಾವತಿಸಿದರೆತೆರವುಗೊಳಿಸಲು ಅವಕಾಶವಿದೆ ಎಂದುತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ರೂಪಶಶಿಧರ್‌, ಕುಂಟುನೆಪ ಹೇಳಬೇಡಿ,ಈಗಾಗಲೇ ರಸ್ತೆ ನಿರ್ಮಾಣದ ಕಾಮಗಾರಿಮುಗಿಯಬೇಕಾಗಿತ್ತು. ಗುತ್ತಿಗೆದಾರಹೊರಗಿನ ರಾಜ್ಯದವರು ಆಗಿರುವವುದರಿಂದಅಡೆತಡೆಗಳನ್ನು ನಾವೇ ನಿವಾರಣೆಮಾಡಿಕೊಡಬೇಕು. ಇದಕ್ಕೆ ಅಧಿಕಾರಿಗಳುಸಹಕಾರ ನೀಡಬೇಕು ಎಂದು ಸಲಹೆನೀಡಿದರು.

ಲೋಕೊಪಯೋಗಿ ಇಲಾಖೆ ಎಇಇಮಲ್ಲಿಕಾರ್ಜುನ ಮಾತನಾಡಿ, ರಸ್ತೆಅಗಲೀಕರಣಕ್ಕೆ ಈಗಾಗಲೇ ಸರ್ವೇ ನಡೆಸಿಗಡಿ ಗುರುತಿಸಲಾಗಿದೆ. ಮರಗಳ ಹಾಗೂವಿದ್ಯುತ್‌ ಕಂಬಗಳ ತೆರವಿನಿಂದ ಕಾಮಗಾರಿಕೈಗೆತ್ತಿಕೊಳ್ಳುವುದು ತಡವಾಗಿದೆ ಎಂದುಸಮಜಾಯಿಷಿ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next