Advertisement

ಕೆಲಸ ಹುಡುಕದರಿ, ಕೆಲಸ ಕೊಡಿ 

12:05 PM May 28, 2017 | Team Udayavani |

ಬೆಂಗಳೂರು: “ತಾಂತ್ರಿಕತೆಯ ಜತೆಗೆ ರಾಷ್ಟ್ರ  ವಿಕಾಸದ ಪರಿಕಲ್ಪನೆಯೊಂದಿಗೆ ಯುವಶಕ್ತಿಯ ಇಚ್ಛೆ ಬೆರೆತಾಗ ಮಾತ್ರ ವೈಜ್ಞಾನಿಕವಾಗಿ ಭಾರತ ನಂಬರ್‌ ಒನ್‌ ರಾಷ್ಟ್ರವಾಗಲಿದೆ. ಯುವಕರು ಉದ್ಯೋಗ ಹುಡುಕುವುದಕ್ಕಿಂತ ಉದ್ಯೋಗದಾತರಾಗಬೇಕು,’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.

Advertisement

ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಹಾಗೂ ವಿದ್ಯಾರ್ಥಿ ಶಿಕ್ಷಣ ಸೇವಾ ಟ್ರಸ್ಟ್‌ ನಗರದ ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಿರುವ “ಸೃಷ್ಟಿ – 2017′ ಎಂಬ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಪ್ರಾಜೆಕ್ಟ್ ಮಾಡೆಲ್‌ಗ‌ಳ ಸ್ಪರ್ಧೆ ಮತ್ತು ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

“ದೇಶದ ಕೃಷಿ, ಬಾಹ್ಯಾಕಾಶ, ತಂತ್ರಜ್ಞಾನ ಸೇರಿದಂತೆ ವಿವಿಧ ವಲಯದಲ್ಲಿ ಯುವ ಜನತೆ ಹೊಸ ಚಿಂತನೆಗಳೊಂದಿಗೆ ಕಾರ್ಯ ಪ್ರವೃತ್ತರಾಗಬೇಕು. ಜಗತ್ತಿನ ಬಹುತೇಕ ರಾಷ್ಟ್ರಗಳು 10-15 ಉಪಗ್ರಹ ಉಡಾವಣೆ ಮಾಡುತ್ತಿದ್ದರೆ, ಭಾರತ 104 ಉಪಗ್ರಹಗಳನ್ನು ಏಕಕಾಲದಲ್ಲಿ ಕಕ್ಷೆಗೆ ಸೇರಿಸಿ ಗಮನಾರ್ಹ ಸಾಧನೆ ಮಾಡಿದೆ. ಇಂತಹ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಯುವ ಜನರಿಗೆ ವಿಪುಲ ಅವಕಾಶ ಇದೆ. ಅದನ್ನು ಬಳಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು,’ ಎಂದರು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಗ್ನಿ -4 ಮಿಸೈಲ್‌ನ ನಿರ್ದೇಶಕಿ ಟೆಸ್ಸಿ ಥಾಮಸ್‌ ಮಾತನಾಡಿ, “ಯುವಕರು ಉದ್ಯೋಗ ಹುಡುಕುವುದಕ್ಕಿಂತ ಉದ್ಯೋಗದಾತರಾಗಿ ಬೆಳೆಯಬೇಕು. ಶೈಕ್ಷಣಿಕವಾಗಿ ಕಂಡ ಕನಸುಗಳನ್ನು ನನಸು ಮಾಡುತ್ತಾ ಹೊರಟಾಗ ಯಶಸ್ವಿನ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ,’ ಎಂಬ ಸಲಹೆ ನೀಡಿದರು. 

ಆರ್‌.ವಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಕೆ.ಪಾಂಡುರಂಗ ಶೆಟ್ಟಿ, ಶ್ರೀರಾಮ್‌ ಪ್ರಾಪರ್ಟಿಸ್‌ನ ಎಂಡಿ  ಮುರುಳಿ, ಎಬಿವಿಪಿ ರಾಜ್ಯಾಧ್ಯಕ್ಷ ಡಾ.ಅಲ್ಲಮಪ್ರಭು ಗುಡ್ಡ, ರಾಜ್ಯ ಕಾರ್ಯದರ್ಶಿ ರಾಜೇಶ್‌ ಗುರಾಣಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎನ್‌.ಸುಬ್ರಹ್ಮಣ್ಯ ಹಾಗೂ ಸೃಷ್ಠಿ ಸಂಚಾಲಕ ಪ್ರವೀಣ ಶ್ರೀನಿವಾಸ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಆವಿಷ್ಕಾರ ಅನಾವರಣ 
ಸೃಷ್ಟಿ ಪ್ರದರ್ಶನ ಮತ್ತು ಸ್ಪರ್ಧೆ ಕಾರ್ಯಕ್ರಮದಲ್ಲಿ ರಾಜ್ಯದ 150ಕ್ಕೂ ಹೆಚ್ಚು ಎಂಜಿನಿಯರಿಂಗ್‌ ಕಾಲೇಜಿನ 450ಕ್ಕೂ ಅಧಿಕ ವಿದ್ಯಾರ್ಥಿಗಳ ವೈಜ್ಞಾನಿಕ ಮಾಡೆಲ್‌ಗ‌ಳ ಅನಾವರಣಗೊಂಡಿವೆ. ಸುಮಾರು 1800 ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ಅಧ್ಯಾಪಕರು ಇದರಲ್ಲಿ ಭಾಗವಸಿದ್ದರು. ಕೃಷಿ ತಂತ್ರಜ್ಞಾನ, ಗ್ರಾಮೀಣ ಅಭಿವೃದ್ಧಿಗೆ ನೂತನ ತಂತ್ರಜ್ಞಾನ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನೂತನ ಅವಿಷ್ಕಾರ, ಆರೋಗ್ಯ, ರಕ್ಷಣೆ ಹೀಗೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಅವಿಷ್ಕಾರಗಳ ಪ್ರದರ್ಶನವಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next