Advertisement
ಹಾನಗಲ್ಲ ಶ್ರೀ ಕುಮಾರಸ್ವಾಮಿಯವರ 150ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ವೀರಶೈವ ಧರ್ಮ ಸೈದ್ಧಾಂತಿಕ ಧರ್ಮ. ವೀರಶೈವ-ಲಿಂಗಾಯತ ಬೇರೆಯಲ್ಲ. ವೀರಶೈವ ಪದದ ಅರ್ಥ ತಿಳಿದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಧರ್ಮ ಇಬ್ಟಾಗವಾಗ ಬಾರದು. ಒಂದೇ ಧರ್ಮವಾಗಿರುವುದರ ಮಹತ್ವವನ್ನು ಧರ್ಮ ಬಾಂಧವರು ಅರಿತುಕೊಳ್ಳಬೇಕು ಎಂದರು.
ಮುಡಿಪಾಗಿಟ್ಟವರು ಕುಮಾರ ಸ್ವಾಮೀಜಿ. ಅವರು ನಾಡಿಗೆ ಅಪಾರ ಶಿಷ್ಯ ಬಳಗವನ್ನು ನೀಡಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೋಡಂಗಲ್ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಸಮಾಜ ಉಳಿಯಲು ಮಠಗಳು
ಬೇಕು. ಮಠಗಳು ಉಳಿಯಲು ಸಮರ್ಥ ಸ್ವಾಮೀಜಿಗಳು ಬೇಕು. ಇಂಥ ನೂರಾರು ಸ್ವಾಮೀಜಿಗಳನ್ನು ರೂಪಿಸಿದವರು ಕುಮಾರ ಸ್ವಾಮೀಜಿ. ಗುಡಿ-ಗುಂಡಾರಗಳನ್ನು ಕಟ್ಟುವುದು ಸುಲಭ, ಆದರೆ ಸ್ವಾಮೀಜಿಗಳನ್ನು ರೂಪಿಸುವುದು ಕಷ್ಟ ಎಂದರು. ಸಂಪತ್ತು, ಕೀರ್ತಿ ಬಯಸದ ದ್ವಿತೀಯ ಬಸವಣ್ಣ ಎಂದೇ ಪರಿಗಣಿಸಲ್ಪಟ್ಟಿರುವ ಕುಮಾರ ಸ್ವಾಮಿಗಳ ಬಗ್ಗೆ ಕೂಡ ಕೆಲವರು ಟೀಕೆ ಮಾಡುತ್ತಾರೆ. ಸಮಾಜ ಉಳಿಸಲು ಅವರು ಅವತಾರ ಪುರುಷರಾಗಿ ಬಂದರು. ವೈಭೋಗದ ಕಡೆಗೆ ನೋಡದೇ ಕಷ್ಟಗಳನ್ನು ಆಹ್ವಾನಿಸಿಕೊಂಡರು ಎಂದು ಹೇಳಿದರು.
Related Articles
ಸ್ವಾಮೀಜಿಗಳಿಗೆ ಸಮಾಜ ಸುಧಾರಣೆಯ ದಾರಿ ತೋರಿಸಿಕೊಟ್ಟವರು ಕುಮಾರ ಶಿವಯೋಗಿಗಳು. ಸರಳ ಬದುಕು, ಆಹಾರ, ವಿಹಾರದ ಬಗ್ಗೆ ತಿಳಿಸಿಕೊಟ್ಟು ಸ್ವಾಮೀಜಿಗಳಿಗೆ ಮಾರ್ಗದರ್ಶನ ನೀಡಿದರು ಎಂದು ಹೇಳಿದರು.
Advertisement
ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ವಿವೇಕಾನಂದ ಭಾರತದ ಬೆಳಕಾಗಿದ್ದರೆ, ಕುಮಾರ ಸ್ವಾಮೀಜಿ ಕರ್ನಾಟಕದ ಕಾಂತಿ. ಅವರ ಹೆಸರನ್ನು ನಾಡಿನ ಮನೆ ಮನೆಗೆ ಮುಟ್ಟಿಸಬೇಕು. ಹಿಂದೂ ಮಹಾಸಭಾ ಆರಂಭಕ್ಕೆ ಮುನ್ನವೇ ಅಖೀಲ ಭಾರತ ವೀರಶೈವ ಮಹಾಸಭೆ ಮಾಡುವ ಮೂಲಕ ವೀರಶೈವರನ್ನು ಸಂಘಟಿಸಿದರು ಎಂದರು.
ಶ್ರೀ ಜಯಶಾಂತಲಿಂಗ ಸ್ವಾಮೀಜಿ ಮಾತನಾಡಿ, ಅಂಧರು, ಅನಾಥರನ್ನು ಸಂಗೀತದ ಯೋಗಿ ಗಳಾಗಿಸಿದ ಕುಮಾರಶಿವಯೋಗಿಗಳು ಬಸವಣ್ಣನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಸಮಾಜ ಸೇವೆ ಮಾಡಿದರು ಎಂದರು. ಶ್ರೀ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಕುಮಾರ ಶಿವಯೋಗಿ ಗಳಿಲ್ಲದೆ ಇರದಿದ್ದರೆ ನಾಡಿನಲ್ಲಿ ಕಾವಿಧಾರಿ
ಗಳು ಸಿಗುತ್ತಿರಲಿಲ್ಲ. ಅವರು ಶಿಕ್ಷಣ, ಸಂಗೀತ, ಯೋಗ, ಆಯುರ್ವೇದವಲ್ಲದೇ ಗೋರಕ್ಷಾ ಕಾರ್ಯದಲ್ಲಿಯೂ ತಮ್ಮನ್ನು
ತೊಡಗಿಸಿಕೊಂಡರು. ಎಲ್ಲರೂ ಅವರ ತತ್ವ ಪಾಲಿಸಬೇಕು ಎಂದರು. ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರಿದ್ದರು. ಜಿ.ಎಚ್. ಹನ್ನೆರಡುಮಠ ಅವರು ಕುಮಾರ ಶಿವಯೋಗಿಗಳ ಕುರಿತು ರಚಿಸಿದ “ಯುಗಪುರುಷ’ ಕೃತಿಯನ್ನು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಬಿಡುಗಡೆ ಮಾಡಿದರು. ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸ್ವಾಗತಿಸಿದರು. ಹಾವೇರಿಯ ಶ್ರೀ ಸದಾಶಿವ ಸ್ವಾಮೀಜಿ ವಂದಿಸಿದರು. ಮಾಜಿ ಸಚಿವ ಸಿ.ಎಂ. ಉದಾಸಿ, ವಿಧಾನ ಪರಿಷತ್
ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಪಾಲ್ಗೊಂಡಿದ್ದರು.
ಧರ್ಮರಕ್ಷಣೆಗೆ ಚಿಂತನೆ ಸಮಾರಂಭದಲ್ಲಿ ಹಲವು ಮಠಾಧೀಶರು ತಮ್ಮ ಭಾಷಣದಲ್ಲಿ ವೀರಶೈವ-ಲಿಂಗಾಯತ
ಧರ್ಮ ಇಬ್ಭಾಗವಾಗುವುದಕ್ಕೆ ಅವಕಾಶ ನೀಡಬಾರದೆಂದು ಅಭಿಪ್ರಾಯಪಟ್ಟರು. ಧರ್ಮದ ಒಡೆಯುವುದಕ್ಕೆ ಆದ್ಯತೆ ನೀಡದೇ ಧರ್ಮರಕ್ಷಣೆ ಬಗ್ಗೆ ಚಿಂತನೆ ನಡೆಸಬೇಕೆಂದು ಸೂಚ್ಯವಾಗಿ ಹೇಳಿದರು. ವೀರಶೈವ ಧರ್ಮ ಸೈದ್ಧಾಂತಿಕ ಧರ್ಮ. ವೀರಶೈವ-ಲಿಂಗಾಯತ ಬೇರೆಯಲ್ಲ. ವೀರಶೈವ ಪದದ ಅರ್ಥ ತಿಳಿದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಧರ್ಮ ಇಬ್ಭಾಗವಾಗಬಾರದು. ಒಂದೇ ಧರ್ಮವಾಗಿರುವುದರ ಮಹತ್ವವನ್ನು ಧರ್ಮ ಬಾಂಧವರು ಅರಿತುಕೊಳ್ಳಬೇಕು.
ಡಾ| ಅನ್ನದಾನೇಶ್ವರ ಸ್ವಾಮೀಜಿ, ಮುಂಡರಗಿ