Advertisement

ಎಲ್ಲ ಸಮಸ್ಯೆಗೂ ಸರ್ಕಾರವನ್ನೇ ಅವಲಂಬಿಸಬೇಡಿ

12:39 PM Feb 17, 2017 | Team Udayavani |

ಮೈಸೂರು: ಗ್ರಾಮೀಣ ಪ್ರದೇಶದ ಜನರು ಎಲ್ಲಾ ಸಮಸ್ಯೆಗಳಿಗೂ ಸರ್ಕಾರದ ಮೇಲೆ ಅವಲಂಬಿತವಾಗಬಾರದು ಎಂದು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ ಹೇಳಿದರು. ವರುಣ ಕ್ಷೇತ್ರದ ಕೆಂಪೇಗೌಡನಹುಂಡಿ ಯಲ್ಲಿ ಮೈಸೂರು ಸಿಪಿಸಿ ಪಾಲಿಟೆಕ್ನಿಕ್‌ ಕಾಲೇಜಿನ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

Advertisement

ಹಿಂದಿನ ಕಾಲದಲ್ಲಿ ಪ್ರತಿ ಸೋಮವಾರ ಗ್ರಾಮಸ್ಥರೆಲ್ಲಾ ಒಟ್ಟಾಗಿ ಸೇರಿ ಗ್ರಾಮವನ್ನು ಸ್ವತ್ಛ ಮಾಡಿಕೊಳ್ಳುತ್ತಿದ್ದರು. ಈಗ ಅವರ ಮನೆ ಮುಂದಿನ ಕಸವನ್ನು ತೆಗೆಯಲು ಪಂಚಾಯಿತಿಯವರೇ ಬರಬೇಕು ಎನ್ನುತ್ತಾರೆ, ಈ ಮನೋಭಾವವನ್ನು ಜನರು ಬಿಡಬೇಕು. ಚರಂಡಿ ಕಟ್ಟಿಕೊಂಡು ಸೊಳ್ಳೆ ಕುಳಿತು ಕಾಯಿಲೆ ಬಂದಾಗ ಲಕ್ಷಾಂತರ ರೂ. ಖರ್ಚು ಮಾಡುವ ಬದಲು ನಿಮ್ಮ ಮನೆ ಮುಂದಿನ ಪರಿಸರವನ್ನು ಪ್ರತಿಯೊಬ್ಬರು ಸ್ವತ್ಛತೆಯಿಂದ ಇಟ್ಟುಕೊಳ್ಳಬೇಕು. ಆಗ ನಿಮ್ಮ ಆರೋಗ್ಯವು ಚೆನ್ನಾಗಿರುತ್ತದೆ ಎಂದರು.

ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ನಿಮ್ಮ ಗ್ರಾಮವನ್ನು ಸ್ವತ್ಛತೆ ಮಾಡಲು ಮೈಸೂರಿನ ಕಾಲೇಜಿನಿಂದ ವಿದ್ಯಾರ್ಥಿಗಳು ಬಂದಿದ್ದಾರೆ. ಅದನ್ನು ನೀವು ಏಕೆ ಮಾಡಿಕೊಳ್ಳಬಾರದು. ಮೈಸೂರು ನಗರಕ್ಕೆ ಸ್ವತ್ಛ ನಗರ ಎಂದು ಪ್ರಶಸ್ತಿ ಬಂದಿದೆ. ಆದರೆ, ಇಡೀ ರಾಜ್ಯದ ಹಳ್ಳಿಗಳೆಲ್ಲಾ ಸ್ವತ್ಛವಾಗಬೇಕು. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ.

ಆದ್ದರಿಂದ ನಮ್ಮ ಊರು ನಮ್ಮ ಮನೆಯ ಸ್ವತ್ಛತೆಯನ್ನು ನಾವೇ ಮಾಡಿಕೊಳ್ಳಬೇಕು ಎಂದ ಅವರು, ಸಿಪಿಸಿ ಪಾಲಿಟೆಕ್ನಿಕ್‌ ಕಾಲೇಜಿಗೆ ಶುದ್ಧಕುಡಿಯುವ ನೀರು ಘಟಕ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಜಿಪಂ ಸದಸ್ಯೆ ಭಾಗ್ಯ, ತಾಪಂ ಮಾಜಿ ಸದಸ್ಯ ಎಂ.ಟಿ. ರವಿಕುಮಾರ್‌, ಎಪಿಎಂಸಿ ಸದಸ್ಯ ಆನಂದ್‌, ಎಂ.ಆರ್‌.ಗೌಡ, ದೊಡ್ಡರಾಮೇಗೌಡ, ಕಾಲೇಜಿನ ಪ್ರಾಂಶುಪಾಲರಾದ ಕೋದಂಡರಾಮ್‌, ಶಿಬಿರಾಧಿಕಾರಿ ಮಧುಸೂದನ್‌, ಎಸ್‌.ವಿ. ದೊಡ್ಡಯ್ಯ, ನವೀನ್‌, ಫಾರುಕ್‌ ಮುರುಸಲ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next