ಇದರ ಬಗ್ಗೆ ಅನಗತ್ಯ ಗುಲ್ಲು ಎಬ್ಬಿಸುತ್ತಿದ್ದಾರೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನ ಪ್ರಕಾರ ಕೆರೆ ಡಿನೋಟಿಫೈ ಮಾಡಲು ಅವಕಾಶವಿಲ್ಲ. ಶಿವಮೊಗ್ಗದಲ್ಲಿ ಕಂದಾಯ ಇಲಾಖೆ ಮತ್ತು ಕೆರೆ ಜಾಗ ಒಂದೇ ಕಡೆ ಬಂದಿದ್ದರಿಂದ ಅದನ್ನು ಡಿನೋಟಿಫೈ ಮಾಡುವ ಬಗ್ಗೆ ಗಮನ ಹರಿಸಲಾಗಿದೆಯೇ ಹೊರತು ಕೆರೆ ಡಿನೋಟಿಫಿಕೇಶನ್ ಬಗ್ಗೆ ಸರ್ಕಾರದ ಹಂತದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದೆಯೇ ನಿರ್ಣಯ ಕೈಗೊಳ್ಳಲಾಗಿತ್ತು. ಅದು ಈಗ ಅನುಷ್ಠಾನಕ್ಕೆ ಬರುತ್ತಿದೆ ಎಂದು ತಿಳಿಸಿದರು. ಹಕ್ಕುಪತ್ರ ಅಧಿಕಾರ ಮತ್ತೆ ತಹಶೀಲ್ದಾರ್, ಇಒಗಳಿಗೆ: ಗ್ರಾಪಂ ವ್ಯಾಪ್ತಿಯ ಆಶ್ರಯ ಹಕ್ಕುಪತ್ರಗಳ ವಿಲೇವಾರಿ
ಸೇರಿ ಇತರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಜಿಲ್ಲಾ ಧಿಕಾರಿಗಳ ಬದಲಿಗೆ ತಹಶೀಲ್ದಾರ್ ಹಾಗೂ ತಾಪಂ
ಇಒಗಳಿಗೆ ವಹಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.