Advertisement

ಸ್ವಚ್ಛತೆಯ ವಿಚಾರದಲ್ಲಿ ರಾಜಿ ಮಾಡಬಾರದು: ದಿವಾಕರ್‌

12:50 AM Jun 03, 2019 | Team Udayavani |

ಮಹಾನಗರ: ಶ್ರೀ ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ ಪ್ರತಿ ವಾರ ನಿರಂತರವಾಗಿ ಜರಗುತ್ತಿರುವ ಸ್ವಚ್ಛ ಮಂಗಳೂರು ಶ್ರಮದಾನದ 5ನೇ ವರ್ಷದ 26ನೇ ರವಿವಾರದ ಶ್ರಮದಾನ ನಗರದ ಬೊಕ್ಕಪಟ್ಣದಲ್ಲಿ ಜರಗಿತು.

Advertisement

ಇಲ್ಲಿನ ಸ್ಪಂದನ ಜನರಲ್ ಆಸ್ಪತ್ರೆಯ ಸಮೀಪದಲ್ಲಿ ಶ್ರಮದಾನಕ್ಕೆ ಮನಪಾ ಮಾಜಿ ಮೇಯರ್‌ ದಿವಾಕರ್‌ ಕೆ., ಸಾಮಾಜಿಕ ಕಾರ್ಯಕರ್ತ ರೋಹನ್‌ ಸಿರಿ ಜಂಟಿಯಾಗಿ ಚಾಲನೆ ನೀಡಿದರು. ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಕ್ಯಾ| ಗಣೇಶ್‌ ಕಾರ್ಣಿಕ್‌, ಮಾಸಾ ಹಿರೋ, ಪ್ರೊ| ಸತೀಶ್‌ ಭಟ್, ನವೀನ್‌ ದೇವಾಡಿಗ ಬರ್ಕೆ, ಜಾನ್‌ ಕೆನೆಡಿ, ಶೋಭಾ ಶೆಟ್ಟಿ, ಲತಾಮಣಿ ರೈ, ಮಹೇಶ್‌ ಕುಮಾರ್‌, ರಂಜಿತಾ ಗಣೇಶ್‌ ಕುದ್ರೋಳಿ, ಜಗನ್‌ ಕೋಡಿಕಲ್, ಸರಿತಾ ಶೆಟ್ಟಿ, ಸೌರಜ್‌ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.

ದಿವಾಕರ್‌ ಕೆ. ಮಾತನಾಡಿ, ಸ್ವಚ್ಛತೆಯ ವಿಷಯದಲ್ಲಿ ಜನರು ರಾಜಿ ಮಾಡಿ ಕೊಳ್ಳಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕ ಸ್ಥಳಗಳು ಶುಚಿಯಾಗಿಲ್ಲದಿದ್ದರೆ ಪಾಲಿಕೆಯ ಗಮನವನ್ನು ಸೆಳೆಯುವ ಕೆಲಸವನ್ನು ಸಾರ್ವಜನಿಕರು ಮಾಡಬೇಕು. ಇಂತಹ ವಿಷಯದಲ್ಲಿ ಸಹನೆ ಒಳ್ಳೆಯ ದಲ್ಲ. ನಮ್ಮ ಸಹನೆ ಎಂದಿಗೂ ದೌರ್ಬಲ್ಯ ವಾಗಬಾರದು. ಇದೀಗ ನಗರದ ಬೀದಿಬೀದಿಗಳು ಸ್ವಚ್ಛವಾಗುತ್ತಿದ್ದರೆ ಅದಕ್ಕೆ ರಾಮಕೃಷ್ಣ ಮಿಷನ್‌ ಶ್ರಮವೇ ಕಾರಣ. ಅದನ್ನು ಯಥಾಪ್ರಕಾರವಾಗಿ ಸ್ವಚ್ಛವಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಯನ್ನು ಆಯಾ ಪರಿಸರದ ಜನರುವಹಿಸಿ ಕೊಂಡಾಗ ಇಂತಹ ಶ್ರಮದಾನಗಳು ಸಾರ್ಥಕವಾಗುತ್ತವೆ. ರಾಮಕೃಷ್ಣ ಮಿಷನ್ನಿನ ಕಾರ್ಯಕರ್ತರ ನಿಸ್ವಾರ್ಥ ಸೇವೆ ಹೀಗೆ ನಿರಂತರವಾಗಿ ಮುಂದುವರೆದು ಮಂಗ ಳೂರು ಸ್ವಚ್ಛ ನಗರವಾಗಲಿ ಎಂದರು.

ಸ್ವಚ್ಛತೆ
ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್‌ ಕೋಟೆಕಾರ್‌ ನೇತೃತ್ವದಲ್ಲಿ ಸ್ವಯಂಸೇವಕರು ಬೊಕ್ಕಪಟ್ಣ ಮಣ್ಣಗುಡ್ಡೆ ರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ಮಧು ಚಂದ್ರ ಅಡ್ಯಂತಾಯ, ಮೋಹನ್‌ ಕೊಟ್ಟಾರಿ, ಹಿರಿಯ ಕಾರ್ಯಕರ್ತರು ಮಳೆಗಾಲವನ್ನು ಗಮನದಲ್ಲಿರಿಸಿಕೊಂಡು ತೋಡು ಗಳಲ್ಲಿದ್ದ ಕಸ-ಕಡ್ಡಿ ಮಣ್ಣುಕಲ್ಲುಗಳನ್ನು ತೆರವು ಮಾಡಿದರು. ಸಿಟಿ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಪ್ರಮೀಳಾ ಅವರ ಮುಂದಾಳತ್ವದಲ್ಲಿ ರಸ್ತೆಗಳನ್ನು ಗುಡಿಸಿ, ಶುಚಿಗೊಳಿಸಿ ಕಸವನ್ನು ಲಾರಿಗೆ ತುಂಬಿಸಿದರು. ಅಲ್ಲಲ್ಲಿದ್ದ ತ್ಯಾಜ್ಯರಾಶಿಗಳನ್ನು ತೆರವು ಮಾಡಲಾಯಿತು. ಶ್ರೀದೇವಿ ಆಟ್ಸ್‌ ರ್ ಕರ್ಣ ಇವರ ಸಹಕಾರದೊಂದಿಗೆ ಬರ್ಕೆ ಕ್ರಾಸ್‌ ರಸ್ತೆ, ಬೊಕ್ಕಪಟ್ಣ ಎಂಬ ಎರಡು ಮಾರ್ಗಸೂಚಕ ಫಲಕಗಳನ್ನು ಹಳದಿ ಬಣ್ಣ ಬಳಿದು ಸುಂದರ ಅಕ್ಷರಗಳಿಂದ ಬರೆದು ನವೀಕರಿಸಲಾಯಿತು.

7 ತ್ಯಾಜ್ಯ ಬೀಳುವ ಸ್ಥಳಗಳ ಸ್ವಚ್ಛತೆ
ಬೊಕ್ಕಪಟ್ಣ ಮಣ್ಣಗುಡ್ಡೆ ರಸ್ತೆಯ ಸುಮಾರು ಸ್ಥಳಗಳಲ್ಲಿ ಕೆಲವರು ತ್ಯಾಜ್ಯವನ್ನು ಬಿಸಾಡುತ್ತಿದ್ದರು. ಪರಿಣಾಮವಾಗಿ ಅಲ್ಲಿನ ಜನರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಸ ಹಾಕುವುದನ್ನು ತಡೆಯಲು ಸ್ಥಳೀಯರು ಹಲವು ರೀತಿಯಲ್ಲಿ ಪ್ರಯತ್ನಿಸಿದರೂ, ಅನಾಮಿಕರು ತ್ಯಾಜ್ಯ ಸುರಿಯುವುದನ್ನು ಮುಂದುವರಿಸಿದ್ದರು. ಇದನ್ನರಿತ ರಾಮಕೃಷ್ಣ ಮಿಷನ್‌ ಕಾರ್ಯಕರ್ತರು ಸಮಸ್ಯೆಯನ್ನು ನಿವಾರಿಸಬೇಕೆಂಬ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಮೊದಲು ತ್ಯಾಜ್ಯ ಬಿಸಾಡುತ್ತಿದ್ದ ಸುಮಾರು ಏಳು ಸ್ಥಳಗಳನ್ನು ಗುರುತಿಸಿದರು. ಅನಂ ತರ ದಿಲ್ರಾಜ್‌ ಆಳ್ವ, ಸತೀಶ್‌ ಕೆಂಕನಾಜೆ, ಮೆಹಬೂಬ್‌ ಖಾನ್‌, ಅನಿರುದ್ಧ ನಾಯಕ್‌, ಯೋಗೀಶ್‌ ಕಾಯರ್ತಡ್ಕ, ಧನುಷ್‌ ಶೆಟ್ಟಿ, ಪ್ರಕಾಶ್‌ ಎಸ್‌.ಎನ್‌. ಇವರುಗಳ ನೇತೃತ್ವದಲ್ಲಿ ಆ ಸ್ಥಳಗಳಲ್ಲಿದ್ದ ವಾಸನೆಯುಕ್ತ ರಾಶಿ ರಾಶಿ ತ್ಯಾಜ್ಯವನ್ನು ತೆಗೆದು ಲಾರಿಗೆ ತುಂಬಿಸಿ ಸ್ವಚ್ಛಗೊಳಿಸಲಾಯಿತು.

Advertisement

ಅಗತ್ಯವಿದ್ದಲ್ಲಿ ಜೇಸಿಬಿ ಕೂಡ ಬಳಸಿ ಕೊಳ್ಳಲಾಯಿತು. ಸ್ವಚ್ಛಗೊಳಿಸಿದ ಬಳಿಕ ಆ ಜಾಗದಲ್ಲಿ ಮಣ್ಣು, ಜಲ್ಲಿ ಹಾಕಿ ಸಮತಟ್ಟುಗೊಳಿಸಿ ಅಲಂಕಾರಿಕ ಗಿಡಗಳುಳ್ಳ ಕುಂಡಗಳನ್ನಿಟ್ಟು ಸ್ಥಳವನ್ನು ಅಂದಗೊಳಿಸಲು ಪ್ರಯತ್ನಿಸಲಾಗಿದೆ. ಇಂದಿನಿಂದ ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಅನಾಮಿಕರು ಕಸ ಹಾಕದಂತೆ ರಾಮಕೃಷ್ಣ ಮಿಷನ್‌ ಸ್ವಚ್ಛತಾ ಯೋಧರ ಪಡೆ ಕಣ್ಗಾವಲು ಕಾಯಲಿದೆ.

ಸುರೇಶ್‌ ಶೆಟ್ಟಿ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು. ಕಿಶೋರ್‌ ಕುಮಾರ್‌, ಅವಿನಾಶ್‌ ಅಂಚನ್‌, ನಾಗೇಶ್‌ ಸರಿಪಳ್ಳ, ಜಿ. ಕೃಷ್ಣ, ಮುಖೇಶ್‌ ಆಳ್ವ, ಹಿಮ್ಮತ್‌ ಸಿಂಗ್‌ ಇನ್ನಿತರರು ಶ್ರಮದಾನದಲ್ಲಿ ಪಾಲ್ಗೊಂಡರು. ಈ ಸ್ವಚ್ಛತಾ ಅಭಿಯಾನದ ಚಟುವಟಿಕೆಗಳಿಗೆ ಎಂ.ಆರ್‌. ಪಿ.ಎಲ್. ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.

ಸ್ವಚ್ಛತಾ ಜಾಗೃತಿ
ಸಿಟಿ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿನಿಯರಾದ ವಾಣಿಶ್ರೀ, ನಿರೀಕ್ಷಾ, ಸ್ವಾತಿ, ಇನ್ನಿತರ ಸ್ವಯಂಸೇವಕರು ಬೊಕ್ಕಪಟ್ಣ ರಸ್ತೆಯ ಮುಖ್ಯ ರಸ್ತೆಯ ಅಂಗಡಿ, ಮುಂಗಟ್ಟುಗಳನ್ನು ಸಂಪರ್ಕಿಸಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಲು ಸಹಕರಿಸುವಂತೆ ವಿನಂತಿಸಿದರು. ಸ್ಥಳೀಯ ಮನೆಗಳನ್ನು ಸಂಪರ್ಕಿಸಿ ಮನೆಯ ಕಸವನ್ನು ಪಾಲಿಕೆಯ ತ್ಯಾಜ್ಯ ಸಾಗಿಸುವ ವಾಹನಕ್ಕೆ ನೀಡಬೇಕಾಗಿ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next