Advertisement
“ಅಪ್ಪು ಇಲ್ಲ ಅಂತ ಹೇಳ್ಳೋದಕ್ಕೆ ತುಂಬ ಕಷ್ಟವಾಗುತ್ತೆ. ಅವಸರವಾಗಿ ದೇವರು ಕರೆದುಕೊಂಡು ಬಿಟ್ಟನಾ ಅಂತ ಅನಿಸುತ್ತಿದೆ. ಜನರು ಅಳುವುದನ್ನು ನೋಡಿದ್ರೆ, ಇನ್ನಷ್ಟು ಬೇಸರವಾಗುತ್ತದೆ. ಇಲ್ಲೇ ಎಲ್ಲಿಯೋ ಹೋಗಿದ್ದಾನೆ ಅಂತ ಅನಿಸ್ತಿದೆ. ನನಗಿಂತ ಅಪ್ಪು 13 ವರ್ಷ ಚಿಕ್ಕವನು. ನಾನು ಅವನನ್ನು ಎತ್ತಿ ಆಡಿಸಿದವನು.
Related Articles
Advertisement
ಅಂತ್ಯಕ್ರಿಯೆಗೆ ಸರ್ಕಾರ ಮತ್ತು ಅಭಿಮಾನಿಗಳಿಂದ ಸಿಕ್ಕ ನೆರವಿಗೆ ಡಾ. ರಾಜ್ ಕುಟುಂಬದ ಪರವಾಗಿ ಶಿವಣ್ಣ ಧನ್ಯವಾದ ತಿಳಿಸಿದ್ದಾರೆ. “ಪೊಲೀಸರು, ಸರ್ಕಾರ ಒಳ್ಳೆಯ ಸಹಕಾರ ನೀಡಿ¨ªಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ನಮ್ಮ ಕುಟುಂಬದ ಮೇಲೆ ಅಭಿಮಾನ ಇಟ್ಟುಕೊಂಡು ಅಂತ್ಯಕ್ರಿಯೆವರೆಗೂ ಸಹಕರಿಸಿದ್ದಕ್ಕೆ ಧನ್ಯವಾದಗಳು.
ಅಪ್ಪಾಜಿ ಅಂತ್ಯಕ್ರಿಯೆ ನಮಗೆ ತುಂಬ ಕಷ್ಟ ಆಯ್ತು. ಈ ಬಾರಿ ಎರಡು ದಿನ ಇಟ್ಟುಕೊಂಡೆವು, ಸಿಕ್ಕಾಪಟ್ಟೆ ಜನರು ಬಂದಿದ್ದರು. ಎಲ್ಲರಿಗೂ ಅಪ್ಪು ದರ್ಶನ ಮಾಡುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಹಾಲು ತುಪ್ಪ ಆಗುವವರೆಗೂ ಪುನೀತ್ ಸಮಾಧಿ ಬಳಿ ಯಾರಿಗೂ ಪ್ರವೇಶವಿಲ್ಲ. ಆನಂತರ ಸಿಎಂ ಜೊತೆ ಮಾತನಾಡಿ ಸಮಾಧಿ ಬಳಿ ಅಭಿಮಾನಿಗಳಿಗೆ ದರ್ಶನ ಸಿಗುವ ವ್ಯವಸ್ಥೆ ಮಾಡಲಾಗುತ್ತದೆ’ ಎಂದಿದ್ದಾರೆ ಶಿವರಾಜಕುಮಾರ್.