Advertisement
“ಪ್ರಯಾಣ ಮಾಡುವುದು, ರೆಸ್ಟಾರೆಂಟ್‌ಗಳಲ್ಲಿ ಹೋಗಿ ಊಟ ಮಾಡುವುದು ವೈಯಕ್ತಿಕ ಆಯ್ಕೆ. ಆದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣ ಮಾಡಿದಾಗ ಅದರಲ್ಲಿರುವ ಎಲ್ಲರ ವರ್ತನೆಗಳೂ ದಾಖಲಾಗುತ್ತವೆ. ಆದರೆ ಖಾಸಗಿತನದ ಮಾಹಿತಿ ಸೋರಿಕೆಯಾಗುತ್ತದೆ ಎಂಬ ಅಂಶವನ್ನು ಅಗತ್ಯಕ್ಕಿಂತ ಹೆಚ್ಚು ಬಿಂಬಿಸುವುದು ಬೇಡ. ದೇಶದಲ್ಲಿ ಹೊಸತನದ ಸಂಶೋಧನೆಗಳು ಡಿಜಿಟನಲ್ ಕ್ಷೇತ್ರದ ಕ್ರಾಂತಿಯಿಂದಾಗಿ ನಡೆಯುತ್ತವೆ. ಖಾಸಗಿತನವನ್ನು ನೆಪವಾಗಿಟ್ಟುಕೊಂಡು ಅದನ್ನು ಕೊಲ್ಲುವ ಪ್ರಯತ್ನಗಳು ಬೇಡ’ ಎಂದು ನವದೆಹಲಿಯಲ್ಲಿ ಆಯೋಜಿಸಲಾದ ಆರನೇ ವಾರ್ಷಿಕ ಅಂತಾರಾಷ್ಟ್ರೀಯ ವಾಣಿಜ್ಯ ಸಮ್ಮೇಳನದಲ್ಲಿ ಮಾತನಾಡಿದ ಸಂದರ್ಭದಲ್ಲಿ ತಿಳಿಸಿದ್ದಾರೆ. ಆಧಾರ್ ಇದ್ದ ಕಾರಣದಿಂದಲೇ ದೇಶದ ವಿವಿಧ ಕಾಲೇಜುಗಳಲ್ಲಿರುವ ನಕಲಿ ಪ್ರಾಧ್ಯಾಪಕರನ್ನು ಪತ್ತೆ ಮಾಡಲು ನೆರವಾಯಿತು ಎಂದು ಹೇಳಿದ್ದಾರೆ.
Advertisement
ಖಾಸಗಿತನದ ಹೆಸರಲ್ಲಿ ಸಂಶೋಧನೆಗೆ ಬ್ರೇಕ್ ಬೇಡ: ಪ್ರಸಾದ್
07:10 AM Jan 12, 2018 | Harsha Rao |
Advertisement
Udayavani is now on Telegram. Click here to join our channel and stay updated with the latest news.