Advertisement

ಸುಳ್ಳು ಹೇಳ್ಳೋರನ್ನು ನಂಬಬೇಡಿ: ಜಾಧವ್‌

11:42 AM Jan 04, 2018 | Team Udayavani |

ಚಿಂಚೋಳಿ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೋಸ್ಕರ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ದುಡಿದವನಿಗೆ ಕೂಲಿ ನೀಡಿ. ಸುಳ್ಳು ಹೇಳುವವರನ್ನು ನಂಬಬೇಡಿರಿ ಎಂದು ಶಾಸಕ ಡಾ| ಉಮೇಶ ಜಾಧವ್‌ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬುಧವಾರ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 86.14ಲಕ್ಷ ರೂ. ವೆಚ್ಚದಲ್ಲಿನ ರಸ್ತೆ ಸುರಕ್ಷತಾ ನಿರ್ಮಾಣ ಕಾಮಗಾರಿ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.

Advertisement

ಮಿನಿ ವಿಧಾನಸೌಧ ನಿರ್ಮಿಸಲು 10 ಕೋಟಿ ರೂ., ಪುರಸಭೆ ಕಚೇರಿ ನಿರ್ಮಾಣಕ್ಕಾಗಿ 2ಕೋಟಿ ರೂ., ಬಸ್‌ ನಿಲ್ದಾಣ ನಿರ್ಮಾಣಕ್ಕಾಗಿ 2.65 ಕೋಟಿ ರೂ. ನೀಡಲಾಗಿದ್ದು ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಪುರಸಭೆ ವ್ಯಾಪ್ತಿಯಲ್ಲಿ ಬರುವ ಚಂದಾಪುರ-ಚಿಂಚೋಳಿಯಲ್ಲಿ ಒಟ್ಟು 50 ಕೋಟಿ ರೂ.ಗಳಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಭರದಿಂದ ನಡೆಯುತ್ತಿವೆ ಎಂದು ವಿವರಿಸಿದರು.

ಬಿಜೆಪಿ ಸರಕಾರದಲ್ಲಿ ಮಂಜೂರಿಗೊಂಡಿದ್ದ ಸುಲೇಪೇಟ ಮಹಾಗಾಂವ ರಸ್ತೆ ತಳಪಾಯ ಗಟ್ಟಿಯಿಲ್ಲದ ಕಾರಣ ರಸ್ತೆ ಡಾಂಬರೀಕರಣ ಕಳಪೆಮಟ್ಟದಿಂದ ಕೂಡಿತ್ತು. ಕಾಂಗ್ರೆಸ್‌ ಸರಕಾರದಿಂದ ಮತ್ತೆ ಬೇಸಕೋಟ ಕೆಲಸಕ್ಕಾಗಿ 8.50 ಕೋಟಿ ರೂ. ನೀಡಲಾಗಿತ್ತು. ಆದರೆ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದ ಪರಿಣಾಮ ಕೆಟ್ಟು ಹೋಗಿದೆ. ಇದೇ ರಸ್ತೆಯನ್ನು ಪ್ರಸಕ್ತ ಸಾಲಿನ ಮಾರ್ಚ್‌ ತಿಂಗಳ ಅಂತ್ಯದವರೆಗೆ ಗುಣಮಟ್ಟದಿಂದ ನಡೆಸಲು ಮತ್ತೇ ಹಣ ಮಂಜೂರಿಗೊಂಡಿದೆ ಎಂದರು ಹೇಳಿದರು.

ತಾಲೂಕಿನ ಐನೋಳಿ- ದೇಗಲಮಡಿ -ಚಿಂಚೋಳಿ ರಾಜ್ಯ ಹೆದ್ದಾರಿಗೋಸ್ಕರ ಸಚಿವ ಡಾ| ಎಚ್‌.ಸಿ. ಮಹಾದೇವಪ್ಪ 180
ಕೋಟಿ ರೂ. ನೀಡಿರುವುದರಿಂದ ರಸ್ತೆ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದೆ.  ಸ್ಥಳೀಯ ಬಿಜೆಪಿ ಮಾಜಿ ಸಚಿವರು ಇದನ್ನೇ ಹೆಚ್ಚು ಪ್ರಚಾರ
ಮಾಡಿದ್ದರು. ಅಲ್ಲದೇ ಕೇಂದ್ರದಿಂದ ಸಚಿವರನ್ನು ಕರೆಯಿಸಿ ಭಾಷಣ ಮಾಡಿಸಿದ್ದರು. ಆದರೆ ಕೆಲವು ತಾಂತ್ರಿಕ ಅಡೆತಡೆಯಿಂದಾಗಿ ರಸ್ತೆ ಕಾಮಗಾರಿ ನಾಲ್ಕು ವರ್ಷಗಳಿಂದ ನಡೆದಿರಲಿಲ್ಲವೆಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

ಆಶ್ವಾಸನೆ ನೀಡಿಲ್ಲ: ಚಿಂಚೋಳಿ ಪಟ್ಟಣದ ಹೊರ ವಲಯದಲ್ಲಿ ಸ್ಥಾಪನೆಗೊಂಡು ಅನೇಕ ವರ್ಷಗಳಿಂದ ಚಾಲನೆ ಇಲ್ಲದೇ ನಿಂತು ಹೋಗಿರುವ ಚಿಂಚೋಳಿ ಸಕ್ಕರೆ ಕಾರಖಾನೆ ಪ್ರಾರಂಭಿಸುತ್ತೇನೆ ಎಂದು ನಾನು ಜನರಿಗೆ ಯಾವುದೇ ಆಶ್ವಾಸನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಐನೋಳಿ ಜಿಪಂ ಸದಸ್ಯ ಗೌತಮ ಪಾಟೀಲ, ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಎಇಇ ಈರಣ್ಣ ಕುಣಕೇರಿ, ಜೆಇ ಗಿರಿರಾಜ ಸಜ್ಜನಶೆಟ್ಟಿ, ಗೋಪಾಲರಾವ್‌ ಕಟ್ಟಿಮನಿ, ರಾಮಶೆಟ್ಟಿ ಪವಾರ ಹಾಜರಿದ್ದರು. ಆರ್‌.ಗಣಪತರಾವ್‌ ಸ್ವಾಗತಿಸಿದರು, ಜಯಪ್ಪ ಚಾಪೆಲ್‌ ನಿರೂಪಿಸಿದರು, ಅಮರ ಲೊಡನೋರ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next