Advertisement

ಸರಕಾರಿ ಶಾಲೆ ಕನಿಷ್ಠವೆಂಬ ಭ್ರಮೆ ಬೇಡ

05:26 PM May 25, 2018 | Team Udayavani |

ಹುಬ್ಬಳ್ಳಿ: ಖಾಸಗಿ ಶಾಲೆ ಉತ್ತಮ, ಸರಕಾರಿ ಶಾಲೆ ಕನಿಷ್ಠ ಎಂಬ ಭ್ರಮೆಯನ್ನು ಪಾಲಕರಿಂದ ಹೋಗಲಾಡಿಸಲು ಅಕ್ಷರ ಬಂಡಿ ಸಹಕಾರಿಯಾಗಲಿದೆ ಎಂದು ಡಿಡಿಪಿಐ ಎನ್‌.ಎಚ್‌. ನಾಗೂರ ಹೇಳಿದರು.

Advertisement

ಇಲ್ಲಿನ ಬಸವೇಶ್ವರ ನಗರದ ಸರಕಾರಿ ಶಾಲೆಯ ಸಭಾಂಗಣದಲ್ಲಿ ಯೋಜಿಸಿದ್ದ ಅಕ್ಷರ ಬಂಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಸರಕಾರಿ ಶಾಲೆಗೆ ಆಕರ್ಷಿಸುವುದು ಶಿಕ್ಷಕರಿಂದ ಹಿಡಿದು ಶಿಕ್ಷಣ ಇಲಾಖೆಯ ಪ್ರತಿಯೊಬ್ಬರ ಪ್ರಮುಖ ಕರ್ತವ್ಯವಾಗಿದೆ. ಶಾಲೆಗೆ ಬಂದ ಮಕ್ಕಳನ್ನು ಉಳಿಸಿಕೊಳ್ಳುವ ಪ್ರಯತ್ನ ನಮ್ಮದಾಗಬೇಕು. ಮಕ್ಕಳ ಮನಮುಟ್ಟುವಂತಹ ಗುಣಾತ್ಮಕ ಕಲಿಕೆ ನೀಡುವತ್ತ ಶ್ರಮವಹಿಸಬೇಕು ಎಂದು ಹೇಳಿದರು.

ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಸಮನ್ವಾಯಾಧಿಕಾರಿ ಎಸ್‌.ಎಂ. ಹುಡೇದ ಮಾತನಾಡಿ, ಶಾಲಾ ಪ್ರಾರಂಭೋತ್ಸವವನ್ನು ಮಕ್ಕಳಲ್ಲಿ ಹೊಸ ಚೈತನ್ಯ ಮೂಡುವಂತೆ ಆಚರಿಸಬೇಕು. ಶಾಲೆಗೆ ಬರುವ ಪ್ರತೀ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆತ್ಮವಿಶ್ವಾಸ ಬೆಳೆಸಬೇಕು ಎಂದರು.

ಬಿಇಒ ಕೆ.ಎ. ಸನದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ ಕುಂಬಾರ, ಸಿಆರ್‌ಪಿ ಡಿ.ಎಫ್. ಈರಗಾರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಾ| ಲಿಂಗರಾಜ ರಾಮಾಪುರ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next