Advertisement

ಸುರತ್ಕಲ್‌ ಮಾರುಕಟ್ಟೆ ಗೊಂದಲ ಬೇಡ: ನಝೀರ್‌

03:03 PM Nov 12, 2017 | |

ಸುರತ್ಕಲ್‌: ಯಾವುದೇ ಕಾರಣಕ್ಕೂ ಈಗಿನ ಸುರತ್ಕಲ್‌ ತಾತ್ಕಾಲಿಕ ಮಾರುಕಟ್ಟೆ ಶಾಶ್ವತ ಮಾರುಕಟ್ಟೆಯಾಗಲು ಸಾಧ್ಯವಿಲ್ಲ. ಈಗಾಗಲೇ ಹೈಕೋರ್ಟ್‌ ಒಂದೂವರೆ ವರ್ಷದಲ್ಲಿ ಸುರತ್ಕಲ್‌ ಮೈದಾನಕ್ಕೆ ಯಥಾಸ್ಥಿತಿಯಲ್ಲಿ ಬಿಟ್ಟು ಕೊಡಲು ಆದೇಶ ನೀಡಿದೆ. ವಿನಾಕಾರಣ ಶಾಶ್ವತ ಮಾರುಕಟ್ಟೆಯಾಗಲಿದೆ ಎಂದು ಅಪಪ್ರಚಾರ ಮಾಡುವ ಮೂಲಕ ವ್ಯಾಪಾರಿಗಳನ್ನು ಗೊಂದಲದಲ್ಲಿ ಸಿಲುಕಿಸಲು ಯತ್ನ ನಡೆಯುತ್ತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್‌ ನಝೀರ್‌ ಹೇಳಿದರು.

Advertisement

ಸುರತ್ಕಲ್‌ನಲ್ಲಿ ನೂತನ ಮಾರುಕಟ್ಟೆ ಸಂಕೀರ್ಣದ ಕುರಿತು ವ್ಯಾಪಾರಿಗಳಿಗೆ ಆಯೋಜಿಸಲಾದ ಮಾಹಿತಿ ಶಿಬಿರ ಮತ್ತು
ಸಂವಾದದಲ್ಲಿ ಅವರು ಮಾತನಾಡಿದರು.

ಸುರತ್ಕಲ್‌ ವ್ಯಾಪಾರಿಗಳ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತ್ತು. ಇದಕ್ಕಾಗಿ ಸಚಿವರು ತನ್ನನ್ನು ಸಂಪರ್ಕಿಸಿ ಸ್ಪಷ್ಟನೆ ಕೇಳಿದ್ದಾರೆ ಹೊರತು ಅದುವೇ ಶಾಶ್ವತ ಮಾರುಕಟ್ಟೆಯಾಗಲಿದೆ ಎಂದು ತಾನು ಹೇಳಿಲ್ಲ. ಈ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದರು.

ಅತ್ಯಾಧುನಿಕ ಮಾರುಕಟ್ಟೆ
ಮಾರುಕಟ್ಟೆ ನಿರ್ಮಾಣಕ್ಕೆ 61 ಕೋಟಿ ರೂ. ಬಿಡುಗಡೆಯಾಗಿದೆ. ರಾಜ್ಯದಲ್ಲಿಯೇ ಬೃಹತ್‌ ಮಾರುಕಟ್ಟೆ ಸಂಕೀರ್ಣ ಸುರತ್ಕಲ್‌ ನಲ್ಲಿ ಮಾಲ್‌ ಮಾದರಿ ನಿರ್ಮಾಣಕ್ಕೆ ಹದಿನೈದು ದಿನಗಳಲ್ಲಿ ಟೆಂಡರ್‌ ಪ್ರಕಿಯೆ ನಡೆಯಲಿದ್ದು, ಸಾರ್ವಜನಿಕರಿಗೆ ಮತ್ತು ವ್ಯಾಪಾರಿಗಳಗೆ ಮಾದರಿಯ ಅತ್ಯಾಧುನಿಕ ವಾತಾವರಣವುಳ್ಳ ಮಾರುಕಟ್ಟೆ ಕೇಂದ್ರ ತಲೆ ಎತ್ತಲಿದೆ. ಪ್ರತಿಯೊಂದು 200ರಿಂದ 250 ಚದರ ಅಡಿ ಇರಲಿದ್ದು, ಎಲ್ಲ ಸೌಲಭ್ಯ ಒಳಗೊಳ್ಳಲಿದೆ. ಈಗಿರುವ ವ್ಯಾಪಾರಿಗಳಿಗೆ ಆದ್ಯತೆಯ ಮೇರೆಗೆ ಅಂಗಡಿ ಕೊಠಡಿ ನೀಡಲಾಗುವುದು. ಆದರೆ 25ವರ್ಷಗಳ ಹಿಂದೆ ಇದ್ದ ಬಾಡಿಗೆಗಿಂತ ಸ್ವಲ್ಪ ಹೆಚ್ಚಳವಾಗಲಿದೆ. ಮೂಲ ಸೌಲಭ್ಯವುಳ್ಳ ಮಾರುಕಟ್ಟೆ ನಿರ್ಮಿಸಿಕೊಡುವಾಗ ಠೇವಣಿ ಮತ್ತು ಬಾಡಿಗೆ ಕನಿಷ್ಠ ಇರುವಂತೆ ನೋಡಿಕೊಳ್ಳಲಾಗುವುದು ಎಂದರು. ಪ್ರತಿಭಾ ಕುಳಾಯಿ, ವಲಯಾಯುಕ್ತ ರವಿ ಶಂಕರ್‌, ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ರಾಜ್‌ ಉಪಸ್ಥಿತರಿದ್ದರು.

ಗೊಂದಲ ಬೇಡ
ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಿದ್ದು ಸೋಮವಾರ ಆದೇಶ ಪತ್ರ ಕೈ ಸೇರಲಿದೆ. ಸುರತ್ಕಲ್‌ನಲ್ಲಿ ಕೆಲವು ವ್ಯಾಪಾರಿಗಳು ತಮ್ಮ ಸ್ವಾರ್ಥಕ್ಕಾಗಿ ಈಗಾಗಲೇ ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರವಾಗಲು ಒಪ್ಪಿರುವ ವ್ಯಾಪಾರಿಗಳಲ್ಲಿ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ. ಖಾಸಗಿ ಸಹಭಾಗಿತ್ವಕ್ಕೆ ನೀಡದೆ ಸರಕಾರವೇ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಈಗಿರುವ ವ್ಯಾಪಾರಿಗಳಿಗೆ ಆದ್ಯತೆ ಮೇರೆಗೆ ನೀಡಲಿದೆ. ವ್ಯಾಪಾರಿಗಳ ಅನುಕೂಲಕ್ಕಾಗಿ ಈಗಾಗಲೇ ನಡೆಯಬೇಕಿದ್ದ ಟೆಂಡರ್‌ ಪ್ರಕ್ರಿಯೆ ತಡೆ ಹಿಡಿಯಲಾಗಿದೆ. ಇದನ್ನು ಅರ್ಥ ಮಾಡಿಕೊಂಡು ವ್ಯಾಪಾರಸ್ಥರು ಸಹಕರಿಸಿದರೆ ಸುರತ್ಕಲ್‌ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ.
ಮೊಯಿದಿನ್‌ ಬಾವಾ, ಶಾಸಕರು

Advertisement

ವ್ಯಾಪಾರಿಗಳಿಗೆ ಕಾಲಾವಕಾಶ
ನನ್ನ ಸೇವಾವಧಿಯಲ್ಲಿ ಮಾರುಕಟ್ಟೆ ಒಂದಕ್ಕೆ 61 ಕೋ.ರೂ. ಬಿಡುಗಡೆಯಾಗಿರುವುದು ಪ್ರಥಮ. ಅತ್ಯುತ್ತಮ ಸರಕಾರಿ ಬಹುಮಹಡಿ ವಾಣಿಜ್ಯ ಸಂಕೀರ್ಣ ಒಂದೂವರೆ ವರ್ಷದಲ್ಲಿ ನಿರ್ಮಾಣಗೊಳ್ಳಲಿದೆ. ಹಳೆ ಮತ್ತು ಈಗಿನ ಮಾರುಕಟ್ಟೆ ಒಟ್ಟಿಗೆ ಸ್ಥಳಾಂತರ ಮಾಡಲಾಗುವುದು. ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರವಾಗಲು ಕಾಲಾವಕಾಶ ನೀಡಲಾಗುವುದು. ಬಳಿಕ ಪಾಲಿಕೆ ನಿಯಮದಂತೆ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು.
–  ಮಹಮ್ಮದ್‌ ನಝೀರ್‌,
    ಆಯುಕ್ತರು, ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next