Advertisement

ಮದ್ಯದಂಗಡಿಗೆ ಅವಕಾಶ ನೀಡಬಾರದು: ಮಂಜುನಾಥ್‌ 

01:10 PM Jun 14, 2017 | Team Udayavani |

ಪಿರಿಯಾಪಟ್ಟಣ: ತಾಲೂಕಿನ ಕಿತ್ತೂರು ಗ್ರಾಮದ ಮಧ್ಯಭಾಗದಲ್ಲಿ ಎಂಎಸ್‌ಐಎಲ್‌ ನಿಂದ ಮದ್ಯ ಮಾರಾಟದ ಅಂಗಡಿಗೆ ಅವಕಾಶ ಮಾಡಿಕೊಡುತ್ತಿದ್ದು, ಇದು ಸರಿಯಲ್ಲ ಎಂದು ಜಿಪಂ ಸದಸ್ಯ ಕೆ.ಎಸ್‌.ಮಂಜುನಾಥ್‌ ಸೇರಿದಂತೆ ಧರ್ಮಸ್ಥಳ ಮಹಿಳಾ ಸಂಘ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಗ್ರಾಮಸ್ಥರು ವಿರೋಧಿಸಿದ್ದಾರೆ. 

Advertisement

ತಾಲೂಕಿನ ಕಿತ್ತೂರು ಗ್ರಾಮವು ಸುಮಾರು 20ಕ್ಕೂ ಹೆಚ್ಚು ಸುತ್ತಮುತ್ತಲ ಕೊಪ್ಪಲು ಹಾಗೂ ಗ್ರಾಮಗಳ ಜನರು ಪ್ರತಿದಿನವೂ ಜಮಾಯಿಸಿ ಅಪಾರ ವ್ಯವಹಾರದ ವಹಿವಾಟನ್ನು ನಡೆಸುವ ಸ್ಥಳವಾಗಿದೆ. ಅಷ್ಟೆ ಅಲ್ಲದೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಉದ್ದೇಶಿಸಿರುವ ಮಳಿಗೆಯ ಪಕ್ಕದಲ್ಲಿ ವಾಸದ ಮನೆಗಳು ಮತ್ತು ಶಾಲಾ ಮಕ್ಕಳು ಓಡಾಡುವ ರಸ್ತೆ,

ಮತ್ತು ಸಾರ್ವಜನಿಕ ಗ್ರಂಥಾಲಯ, ಶ್ರೀ ವೀರಭದ್ರಸ್ವಾಮಿ ದೇವಾಲಯ, ಆಸ್ಪತ್ರೆ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಕಟ್ಟಡ, ಶಾಲಾ ಕಾಲೇಜು, ರಾಷ್ಟ್ರೀಕೃತ ಬ್ಯಾಂಕುಗಳಿವೆ. ಇವುಗಳ ಮಧ್ಯಭಾಗದಲ್ಲಿ ಎಂಎಸ್‌ಐಎಲ್‌ ವತಿಯಿಂದ ಮದ್ಯಮಾರಾಟ ಅಂಗಡಿ ತೆರೆಯಲು ಅವಕಾಶ ಮಾಡಿಕೊಡುತ್ತಿರುವುದು ಸರಿಯಲ್ಲ,

ಸ್ಥಳಿಯರೇ ಆದ  ಶಾಸಕ ಕೆ.ವೆಂಕಟೇಶ್‌ ಇತ್ತ ಗಮನ ಹರಿಸಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಧರ್ಮಸ್ಥಳ ಮಹಿಳಾ ಸಂಘ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಮತ್ತು ಗ್ರಾಪಂ ಸದಸ್ಯೆ ಹೇಮಾ, ಗ್ರಾಮದ ಮುಖಂಡ ನಾಗರಾಜು ಶಾಸಕರಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ಅವಕಾಶ ನೀಡಿದರೆ ಗ್ರಾಮಸ್ಥರೆಲ್ಲ ಸೇರಿ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next