Advertisement
ಮಂಗಳವಾರ ಪಟ್ಟಣದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಘಟಕದಿಂದ 2ಎ ಮೀಸಲಾತಿಗೆ ಒತ್ತಾಯಿಸಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ನೇತೃತ್ವವಹಿಸಿ ಅವರು ಮಾತನಾಡಿ, ಸರ್ಕಾರ ಸಮಾಜದ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಿಷ್ಕಾಳಜಿ ಮಾಡಿದರೆ ಬರುವ ದಿನಮಾನಗಳಲ್ಲಿ ಸಮಾಜದ ಜನರು ತಕ್ಕ ಪಾಠ ಕಲಿಸಬೇಕಾಗುತ್ತದೆ. ಕಾಲಹರಣ ಮಾಡದೆ ಸಮಾಜದ ಬೇಡಿಕೆಯಾಗಿರುವ 2ಎ ಮೀಸಲಾತಿ ನೀಡಿನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಕ್ರಾಸ್, ಎಪಿಎಂಸಿ ಗಣೇಶ ದೇವಸ್ಥಾನ, ಬಸ್ ನಿಲ್ಸಾಣ , ರಾಯಣ್ಣ ವೃತ್ತ, ಮೂಲಕ ಎಸಿ ಕಚೇರಿ ತಲುಪಿತು. ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಮಾಜಿ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಸೋಮೇಶ್ವರ ಕಾರ್ಖಾನೆ ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ಮುಖಂಡರಾದ ಮಹೇಶ ಹರಕುಣಿ, ಮುರುಗೇಶ ಗುಂಡ್ಲೂರ, ಶ್ರೀಶೈಲ ಯಡಳ್ಳಿ, ಮಹಾಂತೇಶ ಮತ್ತಿಕೊಪ್ಪ, ಎಂ.ವಾಯ್,ಸೋಮನ್ನವರ, ರಾಜಶೇಖರ ಮೂಗಿ, ವಿರೇಶ ಹಲಕಿ, ಗಂಗಾಧರ ಹುಲಕುಂದ, ಶ್ರೀಶೈಲ ಶರಣಪ್ಪನವರ, ಸಂಜೀವಗೌಡರ ಫಾಟೀಲ, ಆರ್.ಕೆ.ಪಾಟೀಲ,ಪಿರಗೋಜಿ, ಈರಣ್ಣಾ ಬೇಟಗೇರಿ, ಮಹಾಂತೇಶ ಗುಂಡ್ಲೂರ, ಎಸ್.ಬಿ.ಸಂಗನಗೌಡರ ವಿವಿಧ ಗ್ರಾಮಗಳಿಂದ ಆಗಮಿಸಿದ ನೂರಾರು ಪಂಚಮಸಾಲಿ ಸಮಾಜದವರು ಇದ್ದರು.