Advertisement

ಸಂಬಂಧಗಳ ಸುತ್ತ ಡಿಎನ್‌ಎ

09:38 AM May 01, 2020 | mahesh |

ಈಗಾಗಲೇ ಕನ್ನಡದಲ್ಲಿ ಚಿತ್ರ-ವಿಚಿತ್ರ ಶೀರ್ಷಿಕೆಯ ಸಿನಿಮಾಗಳು ಬಂದಿವೆ. ಚಿತ್ರದ ಶೀರ್ಷಿಕೆ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯೋದು ಈ ಸಿನಿಮಾಗಳ ಉದ್ದೇಶ. ಈಗ ಈ ಸಾಲಿಗೆ ಮತ್ತೂಂದು ಚಿತ್ರ ಸೇರ್ಪಡೆಯಾಗುತ್ತಿದೆ. ಅದು ಡಿಎನ್‌ಎ. ಹೀಗೊಂದು ಚಿತ್ರ ಸದ್ದಿಲ್ಲದೇ ತಯಾರಾಗಿ ಬಹುತೇಕ ಚಿತ್ರೀಕರಣ ಕೂಡಾ ಮುಗಿಸಿದೆ. ಡಿಎನ್‌ಎ ಎಂಬ ಶೀರ್ಷಿಕೆ ಕೇಳಿ ಇದು ವೈದ್ಯ ಲೋಕಕ್ಕೆ ಸಂಬಂಧ ಪಟ್ಟ ಸಿನಿಮಾವೇ ಎಂದು ನೀವು ಕೇಳಿದರೆ, ಅದಕ್ಕೆ ಉತ್ತರ ಖಂಡಿತಾ ಅಲ್ಲ.

Advertisement

, ಎರಡು ಸುಂದರ ಕುಟುಂಬಗಳ ನಡುವಿನ ಭಾವನೆಗಳು ಹಾಗೂ ಸಂಬಂಧಗಳ ಕುರಿತಾಗಿದೆ. ವಜ್ರೆಶ್ವರಿ ಕಂಬೈನ್ಸ್‌ ಸಂಸ್ಥೆಯಲ್ಲಿ ಹತ್ತು ವರುಷ, ಟಿ.ಎಸ್‌.ನಾಗಭರಣ ಅವರೊಂದಿಗೆ ಸಹಾಯಕರಾಗಿ ಅನುಭವ ಪಡೆದುಕೊಂಡಿರುವ ಚಾಮರಾಜನಗರದ ಪ್ರಕಾಶ್‌ ರಾಜ್‌ ಮೇಹು ರಚನೆ, ಚಿತ್ರಕತೆ ಬರೆದು ಪ್ರಥಮ ಬಾರಿ ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಮೈಸೂರು ಮಾತಿನ ಭಾಗ, ಹಾಡಿಗಾಗಿ ಮಾರಿಕಣಿವೆ ಡ್ಯಾಂ, ಕೆಆರ್‌ಎಸ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಅಚ್ಯುತ್‌ ಕುಮಾರ್‌, ಯಮುನಾ, ಮಕ್ಕಳಾಗಿ ಧ್ರುವ, ಮೇಘ, ಯು ಟರ್ನ್ ಖ್ಯಾತಿಯ ರೋಜರ್‌ ನಾರಾಯಣ್‌, ಎಸ್ತರ್‌ನರೋಣ, ಮಾಸ್ಟರ್‌ ಆನಂದ್‌ ಪುತ್ರ ಮಾಸ್ಟರ್‌ ಕೃಷ್ಣ ಚೈತನ್ಯ. ಇವರೊಂದಿಗೆ ಅನಿತಾ ಭಟ್‌, ನೀನಾಸಂ ಶ್ವೇತ ಮುಂತಾದವರು ನಟಿಸಿದ್ದಾರೆ.

ಜಯಂತ್‌ ಕಾಯ್ಕಣಿ, ಯೋಗರಾಜ ಭಟ್‌, ಕೆ.ವೈ.ನಾರಾಯಣಸ್ವಾಮಿ ಮತ್ತು ನಿರ್ದೇಶಕರ ಸಾಹಿತ್ಯದ ಒಟ್ಟು ಐದು ಹಾಡುಗಳಿಗೆ ಗಾಯಕ ಚೇತನ್‌ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಅಲ್ಲದೆ ಅಲ್ಲಮಪ್ರಭು ಕವನವನ್ನು ಸನ್ನಿವೇಶಕ್ಕೆ ತಕ್ಕಂತೆ ತೆಗೆದುಕೊಂಡಿದೆ. ಛಾಯಾಗ್ರಹಣ ರವಿಕುಮಾರ್‌ ಸಾನಾ ಅವರದಾಗಿದೆ. ಮಾತೃಶ್ರೀ ಎಂಟರ್‌ ಪ್ರೈಸಸ್‌ ಮುಖಾಂತರ ಮೈಲಾರಿ.ಎಂ ನಿರ್ಮಾಣ ಮಾಡಿರುವುದು ಮೊದಲ ಪ್ರಯತ್ನ. ಅಂದುಕೊಂಡಂತೆ ಆದರೆ ಕೋವಿಡ್ ನಂತರ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next