Advertisement

ದ.ಕ., ಉಡುಪಿ ಜಿಲ್ಲೆಯ 55 ಶಾಲೆಗಳಲ್ಲಿ ಒಂದನೇ ತರಗತಿಗೆ ಶೂನ್ಯ ದಾಖಲಾತಿ

12:43 AM Jul 09, 2023 | Team Udayavani |

ಪುತ್ತೂರು: 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 55 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಶೂನ್ಯ!

Advertisement

ಈ ವರ್ಷದ ಶೈಕ್ಷಣಿಕ ಅವಧಿಯ ಜೂ. 30ರ ತನಕದ ದಾಖಲಾತಿ ಅಂಕಿ-ಅಂಶ ಇದನ್ನು ದೃಢೀಕರಿಸಿದೆ. ಉಳಿದ ಕೆಲವು ತರಗತಿಗಳಲ್ಲಿ ಬೆರಳೆಣಿಕೆಯ ಮಕ್ಕಳು ಇರುವುದರಿಂದ ಶಾಲೆಗಳನ್ನು ಮುಚ್ಚಿಲ್ಲ. ಒಂದನೇ ತರಗತಿ ಮಾತ್ರ ನಡೆಯುತ್ತಿಲ್ಲ.

ಇದೇ ತೆರನಾಗಿ ಸಾಗಿದರೆ ಭವಿಷ್ಯದಲ್ಲಿ ಶಾಲೆಯೇ ಮುಚ್ಚುವ ಅಪಾಯ ಇದೆ. ಶಾಲೆಯನ್ನು ಉಳಿಸಿಕೊಳ್ಳಲು ಇಲಾಖೆ ಮತ್ತು ಊರವರು ಯೋಚಿಸ ಇದು ಸಕಾಲ.

ದ.ಕ., ಉಡುಪಿ ಜಿಲ್ಲೆಯ ವಿವರ
ದ.ಕ. ಜಿಲ್ಲೆಯ ಶೈಕ್ಷಣಿಕ ತಾಲೂಕು ವ್ಯಾಪ್ತಿಗೆ ಸಂಬಂಧಿಸಿ 24 ಶಾಲೆಗಳಲ್ಲಿ 1ನೇ ತರಗತಿಗೆ ಶೂನ್ಯ ದಾಖಲಾತಿ ಇದೆ. ಪುತ್ತೂರು ತಾಲೂಕು -2, ಬಂಟ್ವಾಳ – 4, ಬೆಳ್ತಂಗಡಿ- 3, ಮಂಗಳೂರು ಉತ್ತರ-2, ಮಂಗಳೂರು ದಕ್ಷಿಣ-2, ಮೂಡಬಿದಿರೆ- 3, ಸುಳ್ಯದಲ್ಲಿ-8, ಉಡುಪಿ ಜಿಲ್ಲೆಯಲ್ಲಿ 31 ಶಾಲೆಗಳಲ್ಲಿ 1 ನೇ ತರಗತಿಗೆ ಶೂನ್ಯ ದಾಖಲಾತಿ ಇದೆ. ಉಡುಪಿ-4, ಬ್ರಹ್ಮಾವರ-4, ಕುಂದಾಪುರ-5, ಬೈಂದೂರು-9, ಕಾರ್ಕಳ-9 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಜು. 5ರ ತನಕ ಒಂದನೇ ತರಗತಿಗೆ ಯಾವುದೇ ವಿದ್ಯಾರ್ಥಿಯ ದಾಖಲಾತಿ ಆಗಿಲ್ಲ.

ಆಂಗ್ಲ ಮಾಧ್ಯಮ ಪ್ರಭಾವ
ದಾಖಲಾತಿ ಶೂನ್ಯ ಇರುವ ಎಲ್ಲ ಸರಕಾರಿ ಶಾಲೆಗಳಿಗೆ ಮಕ್ಕಳು ಬಾರದಿರಲು ಮುಖ್ಯ ಕಾರಣ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವ. ಮನೆ ಬಾಗಿಲಿಗೆ ಬಸ್‌ ಸೇರಿದಂತೆ ವಿವಿಧ ರೀತಿಯಲ್ಲಿ ಮಕ್ಕಳನ್ನು ಸೆಳೆಯುತ್ತಿರುವುದರಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರ್ಪಡೆಗೆ ಪೋಷಕರು ಮನಸ್ಸು ಮಾಡುತ್ತಿಲ್ಲ.

Advertisement

ಯಾವ ಶಾಲೆಗಳಲ್ಲಿ ಶೂನ್ಯ ದಾಖಲಾತಿ

ದ.ಕ. ಜಿಲ್ಲೆಯ ವಿವರ

ಪುತ್ತೂರು: ಹೊಸಮಠ ಸರಕಾರಿ ಕಿ.ಪ್ರಾ. ಶಾಲೆ, ಪೆರ್ನಾಜೆ ಹಿ.ಪ್ರಾ. ಶಾಲೆ
ಬಂಟ್ವಾಳ: ಬಾಳ್ತಿಲ ಕಂಟಿಕ ಸರಕಾರಿ ಕಿ.ಪ್ರಾ. ಶಾಲೆ, ಶಾಂತಿನಗರ ಸರಕಾರಿ ಕಿ.ಪ್ರಾ. ಶಾಲೆ, ಎತ್ತುಗಲ್ಲು ಸರಕಾರಿ ಕಿ.ಪ್ರಾ. ಶಾಲೆ, ಕುಂಡಡ್ಕ ಸರಕಾರಿ ಹಿ.ಪ್ರಾ. ಶಾಲೆ
ಬೆಳ್ತಂಗಡಿ: ಮೂಲಾರು ಸರಕಾರಿ ಕಿ.ಪ್ರಾ.ಶಾಲೆ, ಗಂಡಿಬಾಗಿಲು ಸರಕಾರಿ ಹಿ.ಪ್ರಾ. ಶಾಲೆ
ಮಂಗಳೂರು ಉತ್ತರ: ಕಿಲ್ಪಾಡಿ ಜನರಲ್‌ ಸರಕಾರಿ ಕಿ.ಪ್ರಾ. ಶಾಲೆ, ಪಡುಪಣಂಬೂರು ಸರಕಾರಿ ಮಾದರಿ ಹಿ.ಪ್ರಾ. ಶಾಲೆ
ಮೂಡಬಿದಿರೆ: ಗುಂಡುಕಲ್ಲು ಸರಕಾರಿ ಕಿ.ಪ್ರಾ. ಶಾಲೆ, ಕೊಪ್ಪದಕುಮೇರು ಸ.ಹಿ.ಪ್ರಾ. ಶಾಲೆ, ಮೂಡಬಿದಿರೆ-3 ಸ.ಹಿ.ಪ್ರಾ. ಶಾಲೆ
ಮಂಗಳೂರು ದಕ್ಷಿಣ: ಅಳಿಕೆ ಸರಕಾರಿ ಕಿ.ಪ್ರಾ. ಶಾಲೆ, ಬೊಳಾರ ವೆಸ್ಟ್‌ ಸ.ಹಿ.ಪ್ರಾ. ಶಾಲೆ
ಸುಳ್ಯ: ಕಿರಿಯ ಪ್ರಾಥಮಿಕ ಶಾಲೆ ತಂಟೆಪ್ಪಾಡಿ, ಕಿ.ಪ್ರಾ. ಶಾಲೆ ಹಾಡಿಕಲ್ಲು, ಕಿ.ಪ್ರಾ. ಶಾಲೆ ಪೈಕ, ಕಿ.ಪ್ರಾ. ಶಾಲೆ ಗೋವಿಂದನಗರ, ಕಿ.ಪ್ರಾ. ಶಾಲೆ ಹಿರಿಯಡ್ಕ, ಕಿ.ಪ್ರಾ. ಶಾಲೆ ಕುಲ್ಕುಂದ, ಕಿ.ಪ್ರಾ. ಶಾಲೆ ಮರ್ಧೋಡ್ಕ, ಹಿ.ಪ್ರಾ. ಶಾಲೆ ಪೇರಾಲು

…………………………………
ಉಡುಪಿ ಜಿಲ್ಲೆಯ ವಿವರ
ಉಡುಪಿ: ಸರಕಾರಿ ಹಿ.ಪ್ರಾ. ಶಾಲೆ ಮುಂಡುಜೆ ಬೊಮ್ಮರಬೆಟ್ಟು, ಸ.ಕಿ.ಪ್ರಾ. ಶಾಲೆ ಬಿಜಂತಿಲ, ಸ.ಹಿ.ಪ್ರಾ. ಶಾಲೆ ಪಾಂಗಾಳ, ಸ.ಹಿ.ಪ್ರಾ. ಶಾಲೆ ಎರ್ಮಾಳು ಬಡಾ
ಬೈಂದೂರು: ಸರಕಾರಿ ಹಿ.ಪ್ರಾ. ಶಾಲೆ ಇರಿಗೆ, ಸ.ಕಿ.ಪ್ರಾ. ಶಾಲೆ ಯಡ್ನಾಳಿ, ಸ.ಕಿ.ಪ್ರಾ. ಶಾಲೆ ಎಳಬೇರು, ಸ.ಕಿ.ಪ್ರಾ. ಶಾಲೆ ಸಂತೋಷನಗರ ಹೆಮ್ಮಾಡಿ, ಸ.ಹಿ.ಪ್ರಾ. ಶಾಲೆ ಬೆಳ್ಳಾಲ, ಸ.ಕಿ.ಪ್ರಾ. ಶಾಲೆ ಕೆರಾಡಿ ಹಾಲಾಡಿ, ಸರಕಾರಿ ಹಿ.ಪ್ರಾ. ಶಾಲೆ ಮೆಕೋಡು, ಸ.ಕಿ.ಪ್ರಾ. ಶಾಲೆ ಹಡವು

ಕುಂದಾಪುರ: ಸ.ಕಿ.ಪ್ರಾ. ಶಾಲೆ ಬೆಳ್ಮನೆ, ಸ.ಹಿ.ಪ್ರಾ. ಶಾಲೆ ಕಂದಲೂರು, ಹಿಂದೂಸ್ತಾನಿ, ಸ.ಹಿ.ಪ್ರಾ. ಶಾಲೆ , ಕಾವ್ರಾಡಿ ಸರಕಾರಿ ಕಿ.ಪ್ರಾ.ಶಾಲೆ ಕೊಳನಕಲ್ಲು, ಸರಕಾರಿ ಹಿ.ಪ್ರಾ. ಶಾಲೆ ಬಿಚಳ್ಳಿ
ಬ್ರಹ್ಮಾವರ: ಸಕಿ.ಪ್ರಾ. ಶಾಲೆ ಶಿರೂರು ಮೂರುಕೈ, ಸ.ಹಿ.ಪ್ರಾ. ಶಾಲೆ ಕಜೆR, ಸ.ಹಿ.ಪ್ರಾ. ಶಾಲೆ ಮುಗ್ಗೇರಿ, ಸ.ಹಿ.ಪ್ರಾ. ಶಾಲೆ ಹೆರ್ಗ
ಕಾರ್ಕಳ: ಸ.ಹಿ.ಪ್ರಾ. ಶಾಲೆ ಬೊಂಡುಕುಮೇರಿ ಮರ್ಣೆ, ಸ.ಹಿ.ಪ್ರಾ. ಶಾಲೆ ಮೈಂದಾಳಾಕಾಯಾರು ಕೌಡೂರು, ಸ.ಕಿ.ಪ್ರಾ. ಶಾಲೆ ಇಂದಿರಾನಗರ ಹೆಬ್ರಿ, ಸ.ಕಿ.ಪ್ರಾ. ಶಾಲೆ ಸ‌ಳ್ಳೆಕಟ್ಟೆ ಕುಚ್ಚಾರು, ಸ.ಕಿ.ಪ್ರಾ. ಶಾಲೆ ಪೂಂಜಾಜೆ ನೂರಾಳ್‌ಬೆಟ್ಟು, ಸ.ಕಿ.ಪ್ರಾ. ಶಾಲೆ ಪೊಸನೂಟ್ಟು ಕುಕ್ಕುಂದೂರು, ಸ.ಕಿ.ಪ್ರಾ.ಶಾಲೆ ಕಡಂಬಳ, ಸ.ಹಿ.ಪ್ರಾ. ಶಾಲೆ ಮಿಯಾರು, ಸ.ಹಿ.ಪ್ರಾ. ಶಾಲೆ ಸಾಣೂರು-2

ದಾಖಲಾತಿಗೆ ಇನ್ನೂ ಅವಕಾಶ ಇದೆ. ಹಾಗಾಗಿ ಒಂದನೇ ತರಗತಿಗೆ ಸೇರ್ಪಡೆಗೊಳ್ಳುವವರು ಇರಬಹುದು. ತರಗತಿವಾರು ಡಾಟಾ ಸಂಗ್ರಹ ಪ್ರಕ್ರಿಯೆ ಪ್ರಗತಿಯಲ್ಲಿದೆ.
– ದಯಾನಂದ ಆರ್‌.,ಡಿಡಿಪಿಐ, ದ.ಕ. ಜಿಲ್ಲೆ

ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಇದೆ. ಈ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಮನೆ ಬಾಗಿಲ ಬಳಿ ಇರುವ ಊರಿನ ಶಾಲೆಗೆ ಮಕ್ಕಳನ್ನು ಕಳುಹಿಸಿ ಶಾಲೆ ಉಳಿಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು.
– ಬಿ. ಗಣಪತಿ, ಡಿಡಿಪಿಐ, ಉಡುಪಿ ಜಿಲ್ಲೆ

1ನೇ ತರಗತಿಗೆ ಅರ್ಹತೆ ಹೊಂದಿರುವ ಮಕ್ಕಳನ್ನು ಗುರುತಿಸಿ ಆ ಮನೆಗಳಿಗೆ ತೆರಳಿ ಸರಕಾರಿ ಶಾಲೆಗೆ ಸೇರಿಸುವಂತೆ ಶಿಕ್ಷಕರಿಗೆ ಜವಾಬ್ದಾರಿ ನೀಡಲಾಗಿದೆ. ಶಿಕ್ಷಣ ಇಲಾಖೆಯ ಮಾರ್ಗದರ್ಶನದಲ್ಲಿ ಈ ಕಾರ್ಯವು ಶಾಲಾರಂಭದ ಒಂದು ತಿಂಗಳು ಮೊದಲು ನಡೆಸಲು ಸೂಚನೆ ಇರುತ್ತದೆ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next